ನವದೆಹಲಿ: Invesco ಮತ್ತು Zee Entertainment Enterprises Limited (ZEEL) ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿರುವ ಬಾಂಬೆ ಹೈಕೋರ್ಟ್ ಈಗ Invesco ಗೆ ಇಜಿಎಂ ನಡೆಸದಂತೆ ತಾತ್ಕಾಲಿಕ ತಡೆ ನೀಡಿದೆ.
ಇದಕ್ಕೂ ಮುನ್ನ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಮಾಧ್ಯಮದ ಹೇಳಿಕೆಯಲ್ಲಿ ಝೀ ಜೊತೆಗಿನ ತನ್ನ ಮಾಧ್ಯಮ ಆಸ್ತಿಗಳನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಮಾಡಿದೆ ಮತ್ತು ಪುನಿತ್ ಗೋಯೆಂಕಾ ಅವರನ್ನು ZEEL ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಮುಂದುವರಿಸಬೇಕೆಂದು ದೃಢಪಡಿಸಿದ ಗಂಟೆಗಳ ನಂತರ, ಪುನಿತ್ ಗೋಯೆಂಕಾ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು,"ಕೆಲವೊಮ್ಮೆ ಮೌನವು ಉತ್ತಮ ಪ್ರತಿಕ್ರಿಯೆಯಾಗಿರುತ್ತದೆ,ಆದರೆ ಕೆಲವು ಸಂದರ್ಭಗಳಲ್ಲಿ ಸರಿಯಾದ ಸಮಯದಲ್ಲಿ ಅದನ್ನು ಮುರಿಯುವುದು ಉತ್ತಮ ಎಂದು ನಾನು ಅರಿತುಕೊಂಡೆ, ಇದರಿಂದ ಸತ್ಯವು ಮುಂಚೂಣಿಗೆ ಬರುತ್ತದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ : #DeshKaZee: ZEEL-SONY Merger ಗೆ ಸಂಬಂಧಿಸಿದಂತೆ 'Invesco ಯಾರ ಕೈ ಗೊಂಬೆ?' ಎಂದು ಪ್ರಶ್ನಿಸಿದ Dr. Subhash Chandra
"ನಾನು ನಡೆಯುತ್ತಿರುವ ವಿಷಯದ ಬಗ್ಗೆ ನನ್ನ ಮೌನವನ್ನು ಮುರಿಯಲು ನಿರ್ಧರಿಸಿದ್ದೇನೆ ಮತ್ತು ಈ ಕಾರಣಕ್ಕಾಗಿ ನಾನು ಈ ಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ನನ್ನ ಎಲ್ಲಾ ಸಂವಹನಗಳಲ್ಲಿ ನಾನು ಯಾವಾಗಲೂ ಅತ್ಯಂತ ಪಾರದರ್ಶಕವಾಗಿರುತ್ತೇನೆ, ಈ ಹಿನ್ನಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಇದು ಈ ವಿಚಾರವಾಗಿ ನನ್ನ ಮೊದಲ ಮತ್ತು ಕೊನೆಯ ಸಂವಹನವಾಗಿದೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ, ಇದರಿಂದಾಗಿ ನಾವು ZEE ನಲ್ಲಿ ನಮ್ಮ ಮೌಲ್ಯ-ಸೃಷ್ಟಿ ಪ್ರಯಾಣದ ಮೇಲೆ ಕೇಂದ್ರೀಕರಿಸಬಹುದು."ಎಂದು ಅವರು ತಿಳಿಸಿದ್ದಾರೆ.
"ಮೊದಲನೆಯದಾಗಿ, ಇನ್ವೆಸ್ಕೊ(Invesco) ಕಂಪನಿಗೆ ಅತ್ಯಂತ ಬಲವಾದ ಬೆಂಬಲವಾಗಿದೆ ಎಂದು ಒಪ್ಪಿಕೊಳ್ಳಲು ನಾನು ಬಯಸುತ್ತೇನೆ.ಈ ಸಂಬಂಧ ಇಂದು ಹದಗೆಡುತ್ತಿರುವುದನ್ನು ಮತ್ತು ನಾವೆಲ್ಲರೂ ಎದುರಿಸುತ್ತಿರುವ ದುರದೃಷ್ಟಕರ ಸನ್ನಿವೇಶಗಳನ್ನು ನೋಡುವುದು ನನಗೆ ನೋವು ತಂದಿದೆ" ಎಂದು ಗೋಯೆಂಕಾ ಹೇಳಿದರು.
ZEEL-Invesco ವಿವಾದ
ರಿಲಯನ್ಸ್ ಗ್ರೂಪ್‌ನೊಂದಿಗೆ ZEEL ಒಪ್ಪಂದಕ್ಕೆ ಒತ್ತಾಯಿಸಲು ಇನ್ವೆಸ್ಕೊ ಪ್ರಯತ್ನಿಸಿತ್ತು. Zee ನೊಂದಿಗೆ ವಿಲೀನಗೊಳ್ಳಲಿರುವ ಗುಂಪಿನ ಘಟಕಗಳಿಗೆ ಕನಿಷ್ಠ 10,000 ಕೋಟಿ ರೂ.ಗಳಷ್ಟಿರುವ ಮೌಲ್ಯವನ್ನು ನೀಡಿದ್ದರಿಂದ Zee ಒಪ್ಪಂದವನ್ನು ನಿರಾಕರಿಸಿತ್ತು.
ಇದನ್ನೂ ಓದಿ : ZEEL-Sony ಮೆಗಾ ವಿಲೀನಕ್ಕೆ Invesco ಅಸಮಾಧಾನ ಗೊಂಡಿರುವುದರ ಉದ್ದೇಶವಾದರೂ ಏನು?
ಎಂಡಿ ಮತ್ತು ಸಿಇಒ ಪುನಿತ್ ಗೋಯೆಂಕಾ ಅವರನ್ನು ಹೊರತುಪಡಿಸಿ ನಿರ್ದೇಶಕರಾದ ಅಶೋಕ್ ಕುರಿಯನ್ ಮತ್ತು ಮನೀಶ್ ಚೋಖಾನಿ ಅವರನ್ನು ಹೊರಹಾಕಲು ಇಜಿಎಂಗೆ ಇನ್ವೆಸ್ಕೊ ಕರೆ ನೀಡಿತ್ತು. ಆದಾಗ್ಯೂ, ಕುರಿಯನ್ ಮತ್ತು ಚೋಖಾನಿ ಈಗಾಗಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ, ಆ ಮೂಲಕ ಇನ್ವೆಸ್ಕೊ ಮಂಡಿಸಿದ ನಿರ್ಣಯವು ಅನುಕೂಲಕರವಾಗಿದೆ.
ಇದಲ್ಲದೆ, ಇನ್ವೆಸ್ಕೊ ಸುರೇಂದ್ರ ಸಿಂಗ್ ಸಿರೋಹಿ, ನೈನಾ ಕೃಷ್ಣ ಮೂರ್ತಿ, ರೋಹನ್ ಧಮಿಜಾ, ಅರುಣಾ ಶರ್ಮಾ, ಶ್ರೀನಿವಾಸ ರಾವ್ ಅಡ್ಡೆಪಲ್ಲಿ ಮತ್ತು ಗೌರವ್ ಮೆಹ್ತಾ ಅವರನ್ನು ಒಳಗೊಂಡಂತೆ ಆರು ಹೊಸ ನಿರ್ದೇಶಕರನ್ನು ನೇಮಿಸುವಂತೆ ಕೋರಿದೆ.
ಇದನ್ನೂ ಓದಿ : Googleನಲ್ಲಿ ಈ ವಿಷಯಗಳನ್ನು ಮರೆತೂ ಕೂಡ ಸರ್ಚ್ ಮಾಡದಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.