Online Shopping ನಲ್ಲಿ ಮೋಸ ಹೋದ್ರಾ? 10 ದಿನಗಳಲ್ಲಿ ವಾಪಸ್ ಬರಲಿದೆ ನಿಮ್ಮ ಹಣ, ಇಲ್ಲಿ ದೂರು ನೀಡಿ

Online Shopping Fraud: RBI ಪ್ರಕಾರ,  SBI ಕಮರ್ಷಿಯಲ್ ಬ್ಯಾಂಕುಗಳು ಹಾಗೂ ಆಯ್ದ ಹಣಕಾಸು ಸಂಸ್ಥೆಗಳ (Financial Institutions)  ವತಿಯಿಂದ ಗ್ರಾಹಕರಿಗಾದ ವಂಚನೆಯ Frauds Classifications ಹಾಗೂ ಅದರ ವರದಿಯನ್ನು ಮಾಡುವ ನಿಯಮವನ್ನು ಉಲ್ಲಂಘಿಸಿದೆ. 

Written by - Nitin Tabib | Last Updated : Oct 19, 2021, 07:00 PM IST
  • ನೀವೂ ಆನ್ಲೈನ್ ಶಾಪಿಂಗ್ ಮಾಡುತ್ತೀರಾ?
  • ಆನ್ಲೈನ್ ಶಾಪಿಂಗ್ ಮಾಡುವಾಗ ಮೋಸ ಹೋಗಿದ್ದೀರಾ?
  • ಚಿಂತೆ ಮಾಡ್ಬೇಡಿ 10 ದಿನಗಳಲ್ಲಿ ನಿಮ್ಮ ಹಣ ವಾಪಸ್ ನಿಮ್ಮ ಖಾತೆಗೆ ಬರಲಿದೆ.
Online Shopping ನಲ್ಲಿ ಮೋಸ ಹೋದ್ರಾ? 10 ದಿನಗಳಲ್ಲಿ ವಾಪಸ್ ಬರಲಿದೆ ನಿಮ್ಮ ಹಣ, ಇಲ್ಲಿ ದೂರು ನೀಡಿ title=
Online Shopping (File Photo)

Online Shopping Fraud: ಒಂದು ವೇಳೆ ಆನ್‌ಲೈನ್ ಶಾಪಿಂಗ್ ಮಾಡುವಾಗ ನೀವೂ ಕೂಡ ಯಾವುದೇ ವಂಚನೆಗೆ ಬಲಿಯಾದರೆ, ಭಯಪಡುವ ಅಗತ್ಯವಿಲ್ಲ, ಬ್ಯಾಂಕ್‌ಗೆ ದೂರು ನೀಡಿದ ನಂತರ ನೀವು 10 ದಿನಗಳಲ್ಲಿ ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದು. ನಿಗದಿತ ಸಮಯದೊಳಗೆ ನಿಮ್ಮ ಬ್ಯಾಂಕ್ ದೂರನ್ನು ಅರಿತುಕೊಳ್ಳದಿದ್ದರೆ, ನೀವು ರಿಸರ್ವ್ ಬ್ಯಾಂಕಿನ (RBI) CMS ಪೋರ್ಟಲ್ ಅಂದರೆ ದೂರು ನಿರ್ವಹಣಾ ವ್ಯವಸ್ಥೆಯಲ್ಲಿ ದೂರು ದಾಖಲಿಸಬಹುದು. ಗ್ರಾಹಕರ ದೂರನ್ನು ಬ್ಯಾಂಕ್ ಇತ್ಯರ್ಥಪಡಿಸದಿದ್ದರೆ, ಬ್ಯಾಂಕ್ ಮೇಲೆ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಬಹುದು.

ಎರಡು ಬ್ಯಾಂಕುಗಳ ಮೇಲೆ ಭಾರಿ ದಂಡ ವಿಧಿಸಿದ RBI
ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂದು ಎರಡು ದೊಡ್ಡ ಬ್ಯಾಂಕುಗಳಿಗೆ ದಂಡ ವಿಧಿಸಿದೆ. ರಿಸರ್ವ್ ಬ್ಯಾಂಕ್, SBI (State Bank Of India) ಮೇಲೆ 1 ಕೋಟಿ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮೇಲೆ 1.95 ಕೋಟಿ ದಂಡ ವಿಧಿಸಿದೆ. ಆರ್‌ಬಿಐ ಪ್ರಕಾರ, ಎಸ್‌ಬಿಐ, ವಂಚನೆ ವರ್ಗೀಕರಣ ಮತ್ತು ವಾಣಿಜ್ಯ ಬ್ಯಾಂಕುಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳಿಂದ ಗ್ರಾಹಕರ ವಿರುದ್ಧ ವಂಚನೆಗಳನ್ನು ವರದಿ ಮಾಡುವ ನಿಯಮಗಳನ್ನು ಉಲ್ಲಂಘಿಸಿದೆ.

ಇದನ್ನೂ ಓದಿ-Big News:ಬಂದೆ ಬಿಟ್ತು ನಿಮ್ಮ PF ಖಾತೆಗೆ ಬಡ್ಡಿ ಹಣ, ಈ ರೀತಿ ಪರಿಶೀಲಿಸಿ ಹಾಗೂ e-statement ಡೌನ್ಲೋಡ್ ಮಾಡಿ

ವಹಿವಾಟಿನ ಹಣ ಹಿಂದಿರುಗಿಸಲು ಆದ ವಿಳಂಬಕ್ಕೆ ದಂಡ
ವರದಿಗಳ ಪ್ರಕಾರ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಅನಧಿಕೃತ ವಹಿವಾಟು ಮೊತ್ತವನ್ನು ಮರುಪಾವತಿಸಲು ವಿಳಂಬ ಮಾಡಿತ್ತು. ಆದ್ದರಿಂದ ರಿಸರ್ವ್ ಬ್ಯಾಂಕ್ 1.95 ಕೋಟಿ ದಂಡವನ್ನು ವಿಧಿಸಿದೆ ಮತ್ತು ಗ್ರಾಹಕರ ಖಾತೆಯಲ್ಲಿನ ವಂಚನೆಯನ್ನು ಎಸ್‌ಬಿಐನಲ್ಲಿ ವರದಿ ಮಾಡಲು ವಿಳಂಬ ಮಾಡಿದ ಕಾರಣ, ಬ್ಯಾಂಕ್ ಮೇಲೆ ರೂ 1 ಕೋಟಿ ವಿಧಿಸಲಾಗಿದೆ. ಗ್ರಾಹಕರ ದೂರುಗಳು ಮತ್ತು ತಡವಾಗಿ ಇತ್ಯರ್ಥಪಡಿಸದಿದ್ದಲ್ಲಿ ಅವರು ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸ್ಪಷ್ಟ ಸಂದೇಶವನ್ನು ನೀಡಿದೆ. ಆದ್ದರಿಂದ, ಬ್ಯಾಂಕಿಂಗ್‌ಗೆ ಸಂಬಂಧಿಸಿದ ವಹಿವಾಟು ನಡೆಸುವ ಜನರು ತಮ್ಮ ಈ ಹಕ್ಕುಗಳ ಬಗ್ಗೆ ತಿಳಿದಿರಬೇಕು.

ಇದನ್ನೂ ಓದಿ-ನಿಮ್ಮ ಬಳಿಯೂ ಒಂದು ರೂಪಾಯಿಯ ಇಂಥಹ ನಾಣ್ಯ ಇದ್ದರೆ ಸಿಗಲಿದೆ 10 ಕೋಟಿ ರೂಪಾಯಿ

Online Shopping ಮಾಡುವಾಗ ಈ ಎಚ್ಚರಿಕೆ ವಹಿಸಿ
ಆನ್‌ಲೈನ್ ಶಾಪಿಂಗ್ ಮಾಡುವಾಗ ಅಥವಾ ಆನ್‌ಲೈನ್‌ನಲ್ಲಿ ವಹಿವಾಟು ನಡೆಸುವಾಗ ನೀವು ಕೂಡ ವಿಶೇಷ ಕಾಳಜಿ ವಹಿಸಿ. ನೀವು ಪಾವತಿ ಮಾಡುತ್ತಿರುವ ಕಂಪ್ಯೂಟರ್ ಅಥವಾ ಮೊಬೈಲ್ ಅನ್ನು ಆಂಟಿವೈರಸ್ ಅನ್ನು ಸ್ಥಾಪಿಸಲಾಗಿದೆ ಎಂಬುದನ್ನು ಯಾವಾಗಲು ಪರೀಶೀಲಿಸಬೇಕು.  ನಿಮ್ಮ ಸಾಫ್ಟ್‌ವೇರ್ ಅನ್ನು ಯಾವಾಗಲೂ ನವೀಕರಿಸಬೇಕು. ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ಎಂದಿಗೂ ಕಂಪ್ಯೂಟರ್‌ನಲ್ಲಿ ಸೇವ್ ಮಾಡಬೇಡಿ.

ಇದನ್ನು ಓದಿ-Aadhaar Card Update: ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News