Vi, Airtel, Jio Best Recharge Plans: ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾರತೀಯ ಕಂಪನಿಗಳು ತಮ್ಮ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರಯೋಜನಗಳನ್ನು ನೀಡಲು ಪ್ರಯತ್ನಿಸುತ್ತಿವೆ. ನಮ್ಮ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ, ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕೂಡ ತಮ್ಮ ಬಳಕೆದಾರರಿಗೆ ಇದೇ ರೀತಿಯ ಯೋಜನೆಗಳನ್ನು ನೀಡುತ್ತವೆ. ಈ ಮೂರು ಕಂಪನಿಗಳ ಕೈಗೆಟುಕುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ನೀವು ಕಡಿಮೆ ಹಣಕ್ಕೆ ಪ್ರತಿಯಾಗಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ.
Vi 500 ರೂ.ಗಳಿಗಿಂತ ಕಡಿಮೆ ವೆಚ್ಚದಲ್ಲಿ ನೀಡುತ್ತಿದೆ 4ಜಿಬಿ ಡಾಟಾ ಜೊತೆಗೆ ಹಲವು ಪ್ರಯೋಜನ:
* Vi 299 ರೂ. ಪ್ಲಾನ್: 299 ರೂ.ಗೆ ಬದಲಾಗಿ, ವಿಐ (Vodafone idea) 28 ದಿನಗಳವರೆಗೆ ದಿನಕ್ಕೆ 4 ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಅನ್ನು ಈ ಯೋಜನೆಯಲ್ಲಿ ನೀಡುತ್ತಿದೆ.
4 ಜಿಬಿ ಡೇಟಾದೊಂದಿಗೆ, ನೀವು ಈ ಯೋಜನೆಯಲ್ಲಿ 'ಬಿಂಗ್ ಆಲ್ ನೈಟ್' ಸೌಲಭ್ಯವನ್ನು ಸಹ ಪಡೆಯುತ್ತೀರಿ, ಇದರಿಂದ ನೀವು ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ಅಲ್ಲದೆ, ವಾರಾಂತ್ಯದ ಡೇಟಾ ರೋಲ್ಓವರ್ ಆಯ್ಕೆಯೂ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ.
ಒಟಿಟಿ ಪ್ರಯೋಜನಗಳ ಕುರಿತು ಹೇಳುವುದಾದರೆ, ನೀವು ವಿ ಮೂವೀಸ್ (Vi Movies) ಮತ್ತು ಟಿವಿ ಕ್ಲಾಸಿಕ್‌ಗಳ ಉಚಿತ ಸದಸ್ಯತ್ವವನ್ನು ಪಡೆಯುತ್ತೀರಿ.
ಇದನ್ನೂ ಓದಿ- Virus: ನಿಮ್ಮ ಫೋನಿನಲ್ಲಿ ಮೌನವಾಗಿ ಅಡಗಿದೆಯೇ ವೈರಸ್, ಅದನ್ನು ಈ ರೀತಿ ಹುಡುಕಿ
* Vi ಯ 449 ರೂಪಾಯಿ ಯೋಜನೆ: ಈ ಯೋಜನೆಯು 299 ರೂಪಾಯಿಗಳ ಯೋಜನೆಯನ್ನು ಹೋಲುತ್ತದೆ. 449ರೂ. ಗಳ ಯೋಜನೆಯಲ್ಲಿ, ಕಂಪನಿಯು ಗ್ರಾಹಕರಿಗೆ ದಿನಕ್ಕೆ 100 SMS, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಉಚಿತ ಕರೆ ಮತ್ತು ಪ್ರತಿ ದಿನ 4GB ಡೇಟಾವನ್ನು ನೀಡುತ್ತದೆ.
ದಿನಕ್ಕೆ 4GB ಡೇಟಾದೊಂದಿಗೆ, ನೀವು 'ಬಿಂಜ್ ಆಲ್ ನೈಟ್' ಆಯ್ಕೆಯನ್ನು ಸಹ ಪಡೆಯುತ್ತೀರಿ. ಕಂಪನಿಯ ಈ ವೈಶಿಷ್ಟ್ಯದೊಂದಿಗೆ, ನೀವು ಮಧ್ಯ ರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು (Unlimited Data) ಬಳಸಬಹುದು. ಇದರೊಂದಿಗೆ, ನಿಮಗೆ ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ನೀಡಲಾಗುವುದು.
ಒಟಿಟಿ ಪ್ರಯೋಜನಗಳ ಕುರಿತು ಹೇಳುವುದಾದರೆ, ನೀವು ವೊಡಫೋನ್ ಐಡಿಯಾ ಮೂವೀಸ್ ಮತ್ತು ಟಿವಿ ಕ್ಲಾಸಿಕ್‌ಗಳ ಉಚಿತ ಸದಸ್ಯತ್ವವನ್ನು ಪಡೆಯುತ್ತೀರಿ.
ಏರ್‌ಟೆಲ್ 600ರೂ.ಗಿಂತ ಕಡಿಮೆ ವೆಚ್ಚದಲ್ಲಿ ನೀಡುತ್ತಿದೆ ಹಲವು ಪ್ರಯೋಜನ:
* ಏರ್‌ಟೆಲ್‌ನ 499 ರೂ. ಪ್ಲಾನ್: ನಿಮಗೆ ತಿಳಿದಿರುವಂತೆ, ಈ ಪ್ಲಾನ್‌ನ ಬೆಲೆ 499 ರೂ. ಮತ್ತು ಇದರಲ್ಲಿ ನೀವು ಪ್ರತಿದಿನ 3GB ಡೇಟಾವನ್ನು ಪಡೆಯುತ್ತೀರಿ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ (Unlimited Calls) ಮತ್ತು ದಿನಕ್ಕೆ 100 SMS ಸಹ ಇದರಲ್ಲಿ ಪಡೆಯುತ್ತೀರಿ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು.
ಇದರೊಂದಿಗೆ ನೀವು ಡಿಸ್ನಿ+ ಹಾಟ್‌ಸ್ಟಾರ್‌ಗೆ ಒಂದು ವರ್ಷದ ಸಬ್‌ಸ್ಕ್ರಿಪ್ಶನ್, ಮೊಬೈಲ್ ಆವೃತ್ತಿಯ ಉಚಿತ ಪ್ರಯೋಗ, ಅಪೊಲೊ 24/7 ಸರ್ಕಲ್, ಉಚಿತ ಆನ್‌ಲೈನ್ ಕೋರ್ಸ್‌ಗಳು ಮತ್ತು ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್ ಬ್ಯಾಕ್ ಪಡೆಯುತ್ತೀರಿ.
* ಏರ್‌ಟೆಲ್‌ನ 558 ರೂ. ಪ್ಲಾನ್: ಈ ಪ್ಲಾನ್‌ನಲ್ಲಿ ನೀವು 56 ದಿನಗಳವರೆಗೆ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 SMS ಅನ್ನು ಮತ್ತು ಪ್ರತಿದಿನ 3GB ಡೇಟಾವನ್ನು ಪಡೆಯುತ್ತೀರಿ.
ಇದರೊಂದಿಗೆ ನೀವು ಡಿಸ್ನಿ+ ಹಾಟ್‌ಸ್ಟಾರ್‌ಗೆ (Disney+Hotstar) ಒಂದು ವರ್ಷದ ಸಬ್‌ಸ್ಕ್ರಿಪ್ಶನ್, ಮೊಬೈಲ್ ಆವೃತ್ತಿಯ ಉಚಿತ ಪ್ರಯೋಗ, ಅಪೊಲೊ 24/7 ಸರ್ಕಲ್, ಉಚಿತ ಆನ್‌ಲೈನ್ ಕೋರ್ಸ್‌ಗಳು ಮತ್ತು ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ (FASTag) 100 ರೂ. ಲಾಭ ಪಡೆಯುವಿರಿ.
ಇದನ್ನೂ ಓದಿ- WhatsApp, Facebook, Twitter, Instagram ನಲ್ಲಿ ಬಳಕೆದಾರರು ತಮ್ಮ ಸುರಕ್ಷತೆಗೆ ಹೀಗೆ ಮಾಡಿ..!
ಜಿಯೋ 600 ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಹಲವು ಯೋಜನೆಗಳನ್ನು ಹೊಂದಿದೆ :
* ಜಿಯೋದ 599 ರೂ. ಪ್ಲಾನ್: ಇದು ರೂ. 600 ಕ್ಕಿಂತ ಕಡಿಮೆ ವೆಚ್ಚದ ಜಿಯೋ ಪ್ಲಾನ್ ಆಗಿದೆ. ಈ ಯೋಜನೆಯಲ್ಲಿ, ಜಿಯೋ ನಿಮಗೆ ದಿನಕ್ಕೆ 2GB ಡೇಟಾವನ್ನು 84 ದಿನಗಳವರೆಗೆ ನೀಡುತ್ತದೆ, ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಅನ್ನು ನೀಡುತ್ತದೆ.
ಈ ಯೋಜನೆಯಲ್ಲಿ, ಜಿಯೋ ಮ್ಯೂಸಿಕ್, ಜಿಯೋ ಟಿವಿ ಮತ್ತು ಜಿಯೋ ಸಿನೆಮಾದಂತಹ ಎಲ್ಲಾ ಜಿಯೋ ಆಪ್‌ಗಳಿಗೆ ನಿಮಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುವುದು.
* ಜಿಯೋದ 597 ರೂ. ಪ್ಲಾನ್: ಈ ಪ್ಲಾನ್‌ನಲ್ಲಿ ನಿಮಗೆ 75 ಜಿಬಿ ಹೈ ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಪ್ರತಿ ದಿನ 100 ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡಲಾಗುತ್ತದೆ.
ಈ ಯೋಜನೆಯಲ್ಲಿ (Jio Prepaid Plans) ಲಭ್ಯವಿರುವ ಹೆಚ್ಚಿನ ವೇಗದ ಡೇಟಾಗೆ ಯಾವುದೇ ಮಿತಿಯಿಲ್ಲ ಮತ್ತು 75GB ಡೇಟಾ ಮುಗಿದ ನಂತರ, ಡೇಟಾದ ವೇಗವನ್ನು 64Kbps ಗೆ ಇಳಿಸಲಾಗುತ್ತದೆ.
90 ದಿನಗಳ ಸಿಂಧುತ್ವ ಹೊಂದಿರುವ ಈ ಯೋಜನೆಯಲ್ಲಿ, ಜಿಯೋ ಮ್ಯೂಸಿಕ್, ಜಿಯೋ ಕ್ಲೌಡ್ ಮುಂತಾದ ಎಲ್ಲಾ ಜಿಯೋ ಆಪ್‌ಗಳಿಗೆ ನಿಮಗೆ ಚಂದಾದಾರಿಕೆಯನ್ನು ನೀಡಲಾಗುವುದು.
* ಜಿಯೋದ 499 ರೂ. ಪ್ಲಾನ್: ಈ ಜಿಯೋ ಪ್ಲಾನ್ ಸಿಂಧುತ್ವವು 28 ದಿನಗಳು, ಇದರಲ್ಲಿ ನೀವು ಪ್ರತಿದಿನ 3GB ಡೇಟಾದೊಂದಿಗೆ 6GB ಹೆಚ್ಚುವರಿ ಡೇಟಾವನ್ನು ಪಡೆಯುತ್ತೀರಿ. ಅಂದರೆ ಒಟ್ಟಾರೆಯಾಗಿ ನೀವು ಇದರಲ್ಲಿ 90GB ಡೇಟಾವನ್ನು ಪಡೆಯುತ್ತೀರಿ. ಈ ಪ್ಯಾಕ್‌ನಲ್ಲಿ, ನೀವು ಉಚಿತ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ಎಲ್ಲಾ ಜಿಯೋ ಆಪ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತೀರಿ.
* ಜಿಯೋದ 349 ರೂ. ಪ್ಲಾನ್: ಈ ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ, ನೀವು ಪ್ರತಿದಿನ 3 ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಪಡೆಯುತ್ತೀರಿ. ಇದರ ಜೊತೆಗೆ, ನಿಮಗೆ ಎಲ್ಲಾ ಜಿಯೋ ಆಪ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುವುದು.
* ಜಿಯೋದ 247 ರೂ.ಗಳ ಪ್ಲಾನ್: ಈ ಪಟ್ಟಿಯಲ್ಲಿರುವ ಅಗ್ಗದ ಪ್ಲಾನ್ ಇದಾಗಿದೆ. ಇದರಲ್ಲಿ ನಿಮಗೆ 25 ಜಿಬಿ ಹೈ ಸ್ಪೀಡ್ ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ಪ್ರತಿ ದಿನ 100 ಎಸ್‌ಎಂಎಸ್‌ಗಳ ಲಾಭವನ್ನು 30 ದಿನಗಳವರೆಗೆ ನೀಡಲಾಗುವುದು.
ಈ ಯೋಜನೆಯಲ್ಲಿ ಲಭ್ಯವಿರುವ ಹೆಚ್ಚಿನ ವೇಗದ ಡೇಟಾದ ಮೇಲೆ ಯಾವುದೇ ಮಿತಿಯಿಲ್ಲ ಮತ್ತು 25GB ಡೇಟಾ ಮುಗಿದ ನಂತರ, ಡೇಟಾದ ವೇಗವನ್ನು 64Kbps ಗೆ ಇಳಿಸಲಾಗುತ್ತದೆ.
ಇವುಗಳು ಜಿಯೋ, ಏರ್‌ಟೆಲ್ ಮತ್ತು ವಿಐ ಯಂತಹ ಕೆಲವು ರೀಚಾರ್ಜ್ ಯೋಜನೆಗಳಾಗಿವೆ, ಇದು ನಿಮಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಪ್ರಸ್ತುತ, ವೊಡಾಫೋನ್ ಐಡಿಯಾ ಮಾತ್ರ ಗ್ರಾಹಕರಿಗೆ ಪ್ರತಿದಿನ 4 ಜಿಬಿ ಡೇಟಾವನ್ನು ಪಡೆಯುವಂತಹ ಯೋಜನೆಗಳನ್ನು ನೀಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ