ನವದೆಹಲಿ : ದಸರಾ ಹಬ್ಬ ಮುಕ್ತಾಯವಾಗುತ್ತಿದಂತೆಯೇ ದೀಪಾವಳಿ (Deepawali) ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ದಸರಾ ನಂತರ ನಿಖರವಾಗಿ 20 ದಿನಗಳ ನಂತರ ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿಯನ್ನು (Diwali lakshmi pooja) ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿ 4 ನೇ ನವೆಂಬರ್ 2021, ಗುರುವಾರದಂದು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿಯಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಅಪರೂಪದ ಸಂಯೋಜನೆ ನಡೆಯುತ್ತಿದೆ.
ಒಂದೇ ರಾಶಿಯಲ್ಲಿರಲಿವೆ 4 ಗ್ರಹಗಳು :
ಈ ವರ್ಷದ ದೀಪಾವಳಿ (Diwali 2021) ಹಬ್ಬ ಬಹಳ ವಿಶೇಷವಾಗಿದೆ. ಏಕೆಂದರೆ ಈ ದಿನ 4 ಗ್ರಹಗಳು ಒಂದೇ ರಾಶಿಯಲ್ಲಿರಲಿವೆ. ಗ್ರಹಗಳ ಇಂಥಹ ಸಂಯೋಗವು ಬಹಳ ಅಪರೂಪವಾಗಿರುತ್ತವೆ. ದೀಪಾವಳಿಯ ದಿನ ಸೂರ್ಯ, ಬುಧ, ಮಂಗಳ ಮತ್ತು ಚಂದ್ರ ತುಲಾ ರಾಶಿಯಲ್ಲಿರುತ್ತಾರೆ (Libra). ತುಲಾ ರಾಶಿಯ ಅಧಿಪತಿ ಶುಕ್ರ. ಈ ಅಪರೂಪದ ಕಾಕತಾಳೀಯತೆಯು ಲಕ್ಷ್ಮಿ ದೇವಿಯ ಆಶೀರ್ವಾದವನ್ನು (Godess Lakshmi) ಜನರ ಮೇಲೆ ಸುರಿಸುತ್ತದೆ. ಮತ್ತೊಂದೆಡೆ, ಕೆಲವು ರಾಶಿಚಕ್ರ ಚಿಹ್ನೆಗಳ (Zodia sign) ಜನರಿಗೆ, ಈ ಸಂಯೋಗವು ಅದೃಷ್ಟವನ್ನು ಬದಲಾಯಿಸುವಂತದ್ದಾಗಿದೆ.
ಇದನ್ನೂ ಓದಿ : Garuda Purana: ನಿಜವಾಗಲೂ ಭೂತ-ಪ್ರೇತಗಳು ಇರುತ್ತವೆಯೇ? ಗರುಡ ಪುರಾಣದಲ್ಲಿ ಅಡಗಿದೆ ಈ ಪ್ರಶ್ನೆಯ ರಹಸ್ಯ
ಲಕ್ಷ್ಮಿ ಪೂಜೆಗೆ ಶುಭ ಸಮಯ :
5 ದಿನಗಳ ಹಬ್ಬದ ಮೂರನೇ ದಿನ ಲಕ್ಷ್ಮಿ ದೇವಿಯನ್ನು (Lakshmi pooja) ಪೂಜಿಸಲಾಗುತ್ತದೆ. ಇದನ್ನು ದೀಪಾವಳಿ ಪೂಜೆ (diwali pooja) ಎನ್ನುತ್ತಾರೆ. ಈ ವರ್ಷ, ಕಾರ್ತಿಕ ಮಾಸದ ಅಮಾವಾಸ್ಯೆಯು 2021 ರ ನವೆಂಬರ್ 4 ರಂದು ಬೆಳಿಗ್ಗೆ 06:03 ರಿಂದ 5 ನೇ ನವೆಂಬರ್ 2021 ರ ಮುಂಜಾನೆ 02:44 ರವರೆಗೆ ಇರುತ್ತದೆ. ಮತ್ತೊಂದೆಡೆ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಪೂಜಿಸುವ ಶುಭ ಸಮಯ ನವೆಂಬರ್ 04 ರಂದು ಸಂಜೆ 06:09 ರಿಂದ 08:20 ರವರೆಗೆ ಇರುತ್ತದೆ. ಈ ರೀತಿಯಾಗಿ, ಲಕ್ಷ್ಮಿ ಪೂಜೆಯನ್ನು (Lakshmi pooja) ಮಾಡುವ ಶುಭ ಸಮಯದ ಅವಧಿಯು ಸುಮಾರು 2 ಗಂಟೆ 10 ನಿಮಿಷಗಳವರೆಗೆ ಇರಲಿದೆ.
ಇದನ್ನೂ ಓದಿ : 3 ದಿನಗಳ ನಂತರ, ಲಕ್ಷ್ಮೀಗೆ ಸಂಬಂಧಿಸಿದ ವಿಶೇಷ ದಿನವಿದೆ, ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ