IPL 2021 Final: ಮಿಂಚಿದ ಡುಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್ ಗೆ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ

ದುಬೈ ನಲ್ಲಿನ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 27 ರನ್ ಗೆಲುವಿನ ಮೂಲಕ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

Written by - Zee Kannada News Desk | Last Updated : Oct 16, 2021, 12:40 AM IST
  • ದುಬೈ ನಲ್ಲಿನ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 27 ರನ್ ಗೆಲುವಿನ ಮೂಲಕ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
IPL 2021 Final: ಮಿಂಚಿದ ಡುಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್ ಗೆ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ title=
Photo Courtesy: Twitter

ನವದೆಹಲಿ: ದುಬೈ ನಲ್ಲಿನ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 27 ರನ್ ಗೆಲುವಿನ ಮೂಲಕ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಇದನ್ನೂ ಓದಿ : IPL 2021: ಫೈನಲ್‌ನಲ್ಲಿ CSK ಪಾಲಿಗೆ ಕಂಟಕವಾಗಬಹುದು KKRನ ಈ ಆಟಗಾರ

ಟಾಸ್ ಗೆದ್ದು ಮೊದಲು ಕೊಲ್ಕತ್ತಾ ತಂಡವು ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡಿತು. ಇದೇವೇಳೆ ಮೊದಲ ಬ್ಯಾಟಿಂಗ್ ನ ಅವಕಾಶವನ್ನು ಪಡೆದುಕೊಂಡ ಚೆನ್ನೈ ತಂಡವು ಸಿಕ್ಕಿರುವ ಅವಕಾಶವನ್ನು ಚೆನ್ನೈ ತಂಡವು ಸರಿಯಾಗಿಯೇ ಬಳಸಿಕೊಂಡಿತು.ಆರಂಭದ ಆಟಗಾರ ರುತುರಾಜ್ ಗಾಯಕ್ವಾಡ್ ಹಾಗೂ ದುಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಉತ್ತಮ ಆರಂಭವನ್ನು ಪಡೆಯಿತು.

ದುಪ್ಲೆಸಿಸ್ ಅಂತೂ ಕೇವಲ 59 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಏಳು ಬೌಂಡರಿಗಳ ನೆರವಿನಿಂದಾಗಿ ಬರೋಬ್ಬರಿ 86 ರನ್ ಗಳಿಸಿದರು. ಇನ್ನೂ ಕೊನೆಯ ಹಂತದಲ್ಲಿ ಉತ್ತಪ್ಪ ಹಾಗೂ ಮೊಯಿನ್ ಕ್ರಮವಾಗಿ 31,ಹಾಗೂ 37 ರನ್ ಗಳ ಮೂಲಕ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದರು.

ಇದನ್ನೂ ಓದಿ : CSK vs KKR, IPL 2021 Final: 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಎಂ.ಎಸ್.ಧೋನಿ ಪಡೆ..!

ಈ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ತಂಡವು  ಉತ್ತಮ ಆರಂಭವನ್ನೇ ಪಡೆಯಿತು ಶುಬ್ಮನ್ ಗಿಲ್ (51) ಹಾಗೂ ವೆಂಕಟೇಶ್ ಅಯ್ಯರ್ (Venkatesh Iyer) (50) ರನ್ ಗಳಿಸುವ ಮೂಲಕ ಪಂದ್ಯವನ್ನು ಕೋಲ್ಕತ್ತಾದ ಪರವಾಗಿ ವಾಲುವಂತೆ ಮಾಡಿದರು.ತಂಡದ ಮೊತ್ತ 91 ರನ್ ಗಳಾಗಿದ್ದಾಗ ವೆಂಕಟೇಶ್ ವಿಕೆಟ್ ಒಪ್ಪಿಸುವುದರೊಂದಿಗೆ ಕೊಲ್ಕತ್ತಾದ ಪತನ ಆರಂಭವಾಯಿತು. ಇದಾದ ನಂತರ ಕೋಲ್ಕತ್ತಾ ತಂಡದ ವಿಕೆಟ್ ಗಳು ತಲೆಗರಲೆಯಂತೆ ಬಿದ್ದವು.

ಕೊನೆಯಲ್ಲಿ ಕೋಲ್ಕತ್ತಾ ತಂಡದ ಪರವಾಗಿ ಲಾಕಿ ಫಾರ್ಗಿಸನ್ 18, ಹಾಗೂ ಶಿವಂ ಮಾವಿ 20 ರನ್ ಗಳಿಸಿದರೂ ಕೂಡ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.ಕೊನೆಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳನ್ನು ಮಾತ್ರ ಗಳಿಸಲಷ್ಟೇ ಸಾಧ್ಯವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News