Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ

Navratri 2021: ನವರಾತ್ರಿಯ ಸಮಯದಲ್ಲಿ ತಾಯಿಯ ಆಶೀರ್ವಾದ ಪಡೆಯಲು, ಕೆಲವು ಸುಲಭ ಪರಿಹಾರಗಳು ಸಹಾಯಕವಾಗಲಿವೆ. ಈ ಸುಲಭ ಪರಿಹಾರ ಮಾಡುವುದರಿಂದ ತಾಯಿ ದುರ್ಗಾ ಕೃಪೆ ವರ್ಷವಿಡೀ ನಿಮ್ಮ ಮೇಲೆ ಉಳಿಯಲಿದೆ. ಜೀವನದಲ್ಲಿ ಸಾಕಷ್ಟು ಪ್ರಗತಿ ಸಿಗಲಿದೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Oct 12, 2021, 09:15 AM IST
  • ನವರಾತ್ರಿಯಲ್ಲಿ ಈ ಪರಿಹಾರಗಳನ್ನು ಮಾಡಿ
  • ನವರಾತ್ರಿಯಲ್ಲಿ ಮಾಡುವ ಈ ಕೆಲಸಗಳಿಂದ ಪ್ರಗತಿ ದೊರೆಯಲಿದೆ
  • ಈ ಪರಿಹಾರಗಳು ಕೆಲಸದಲ್ಲಿ ಯಶಸ್ಸನ್ನು ನೀಡುತ್ತವೆ
Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ title=
Navaratri: ನವರಾತ್ರಿ ಮುಕ್ತಾಯವಾಗುವ ಮೊದಲು ಈ ಕೆಲಸ ಮಾಡಿದರೆ ಸಿಗಲಿದೆ ಹಲವು ಪ್ರಯೋಜನ

Navratri 2021: ತಾಯಿಯ ಅನುಗ್ರಹವಿದ್ದರೆ ಯಾವುದೇ ವ್ಯಕ್ತಿ ಜೀವನದಲ್ಲಿ ಶೀಘ್ರವೇ ಯಶಸ್ಸನ್ನು ಗಳಿಸಬಹುದು. ತಾಯಿಯ ಆಶೀರ್ವಾದ ಪಡೆಯಲು ನವರಾತ್ರಿ ಅತ್ಯುತ್ತಮ ಸಮಯ. ಈ ಸಮಯದಲ್ಲಿ ತಾಯಿ ಭೂಮಿಯಲ್ಲಿ ಸಂಚರಿಸಲು ಬರುತ್ತಾಳೆ ಮತ್ತು ತನ್ನ ಭಕ್ತರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ಅಕ್ಟೋಬರ್ 14 ರಂದು ನವರಾತ್ರಿಯ ಕೊನೆಯದಿನ. ಇದಕ್ಕೂ ಮೊದಲು, ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದಾಲ್ಲಿ ಸಂತೋಷ ತುಂಬುತ್ತದೆ ಮತ್ತು ಯಾವುದಕ್ಕೂ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡುವುದರಿಂದ ಒಳಿತಾಗುತ್ತದೆ:
ನವರಾತ್ರಿಯ (Navaratri) ದಿನಗಳಲ್ಲಿ ಆರಂಭವಾಗುವ ಕೆಲಸದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ದೀರ್ಘಕಾಲದಿಂದ ಅಂಟಿಕೊಂಡಿರುವ ಕೆಲಸವನ್ನು ಪೂರ್ಣಗೊಳಿಸಲು, ನಿಮ್ಮ ಮನೆ ದೇವರಿಗೆ ಅದರಲ್ಲೂ ಹೆಣ್ಣು ದೇವರಿಗೆ ಕೆಂಪು ವಸ್ತ್ರವನ್ನು ಅರ್ಪಿಸಿದರೆ ಜೀವನದಲ್ಲಿ ಎದುರಾಗುವ ನಾನಾ ರೀತಿಯ ತೊಂದರೆಗಳಿಂದ ಪರಿಹಾರ ದೊರೆಯಲಿದೆ. 

ಇದನ್ನೂ ಓದಿ- Money Totke: ದಸರಾದಲ್ಲಿ ತೆಂಗಿನಕಾಯಿಯ ಈ ಪರಿಹಾರ ಮಾಡಿದರೆ, ನೀವು ಶ್ರೀಮಂತರಾಗುವುದನ್ನು ಯಾರೂ ತಡೆಯಲಾರರು

ಹಾಗೆಯೇ, ಐದು ಒಣ ಹಣ್ಣುಗಳನ್ನು ಕೆಂಪು ಚುನರಿಯಲ್ಲಿ ಇಟ್ಟು ತಾಯಿಗೆ ಅರ್ಪಿಸಿ ನಂತರ ಈ ಪ್ರಸಾದವನ್ನು ನೀವೇ ತಿನ್ನಿರಿ. ಹೀಗೆ ಮಾಡುವುದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಖಂಡಿತವಾಗಿಯೂ ನೀವು ಕೈ ಹಾಕಿದ ಪ್ರತಿ ಕೆಲಸದಲ್ಲೂ ಯಶಸ್ಸು (Success) ಪ್ರಾಪ್ತಿಯಾಗಲಿದೆ ಎನ್ನಲಾಗುವುದು.

ಅಷ್ಟೇ ಅಲ್ಲದೆ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು, ತಾಯಿಯ ಪಾದಗಳನ್ನು ಮುಖ್ಯ ಬಾಗಿಲಲ್ಲಿ ಇರಿಸಿ ಎಂದು ಹಲವು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ ಗಿಡಗಳನ್ನು ನೆಡುವುದು ಅತ್ಯಂತ ಶುಭ, ದೂರವಾಗುತ್ತೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ

ಇದಲ್ಲದೇ, ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಬೆಳ್ಳಿ ಸ್ವಸ್ತಿಕ, ಆನೆ, ದೀಪ, ಕಲಶ, ಮುಕತ್ ಅನ್ನು ಖರೀದಿಸಿ. ನಂತರ ನವರಾತ್ರಿಯ ಕೊನೆಯ ದಿನ ಅಂದರೆ ಮಹಾನವಮಿಯಂದು, ಈ ಐದು ವಸ್ತುಗಳನ್ನು ಗುಲಾಬಿ ಬಟ್ಟೆಯಲ್ಲಿ ಇಟ್ಟು ನಂತರ, ಅದರ ಮುಂದೆ ದೀಪವನ್ನು ಹಚ್ಚಿ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ. ಇದು ಸಾಧ್ಯವಾಗದಿದ್ದರೆ, ನೀವು ದುರ್ಗಾ ಮಂತ್ರವನ್ನು ಕೇಳಬಹುದು. ಗುಲಾಬಿ ಬಟ್ಟೆಯಲ್ಲಿ ಇಟ್ಟು ಪೂಜಿಸಿದ ಈ ವಸ್ತುಗಳನ್ನು ಗಂಟು ಕಟ್ಟಿ ಅದನ್ನು ಸುರಕ್ಷಿತವಾಗಿಡಿ. ಈ ರೀತಿ ಮಾಡುವುದರಿಂದ ನಿಮ್ಮ ಖಜಾನೆ ಸದಾ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News