Bantwal Rape Case - 16 ವರ್ಷದ ಶಾಲಾ ವಿದ್ಯಾರ್ಥಿನಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ (Karnataka) ಪೊಲೀಸರು 4 ಜನರನ್ನು ಬಂಧಿಸಿದ್ದಾರೆ. ಈ ಕುರಿತು ಭಾನುವಾರ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ (Dakshina Kannada) ಸೋನವಾನೆ ರಿಷಿಕೇಶ್ ಭಗವಾನ್ (Sonavane Hrushikesh Bhagawan) ಆರೋಪಿಗಳಲ್ಲಿ ಓರ್ವ ಆರೋಪಿ ಫೇಸ್ಬುಕ್ (Facebook Friend) ಮೂಲಕ ಬಾಲಕಿಯ ಜೊತೆಗೆ ಪರಿಚಯ ಹೊಂದಿದ್ದ, ಆತ ತನ್ನ ಸ್ನೇಹಿತರಾದ ಇತರ ಆರೋಪಿಗಳೊಂದಿಗೆ ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಪು ನಿವಾಸಿ ಕೆ.ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಜ್ ಸತೀಶ್ ಹಾಗೂ ಇದಯಾತ್ ಉಲ್ಲಾ ಎಂದು ಗುರಿತಿಸಲಾಗಿದೆ. ಈ ಎಲ್ಲಾ ಜನರನ್ನು ಶನಿವಾರ ಬಂಧಿಸಲಾಗಿದೆ.
ಫೇಸ್ ಬುಕ್ ಮೂಲಕ ಆರೋಪಿ ಬಾಲಕೆಯ ಜೊತೆಗೆ ಮಾತನಾಡುತ್ತಿದ್ದ
ಫೇಸ್ ಬುಕ್ ಮೂಲಕ ಸಂತ್ರಸ್ತ ಬಾಲಕಿಯ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪಿ ಶರತ್ ಶೆಟ್ಟಿ, ಆಕೆಯ ಜೊತೆಗೆ ನಿರಂತರವಾಗಿ ಫೋನ್ ಮೂಲಕ ಮಾತನಾಡುತ್ತಿದ್ದ. ಅಷ್ಟೇ ಅಲ್ಲ ಆತ ತನ್ನ ಸಂಬಂಧಿಯಾಗಿರುವ ಮಾರುತಿ ಮಂಜುನಾಥ್ ಅವನನ್ನು ಕೂಡ ಆಕೆಗೆ ಪರಿಚಯಿಸಿದ್ದ. ಮಂಜುನಾಥ ಸಂತ್ರಸ್ಥ ಬಾಲಕಿಗೆ ವಾಟ್ಸ್ ಆಪ್ ಅಲ್ಲಿ ಅಶ್ಲೀಲ ಸಂದೇಶಗಳು ಹಾಗೂ ವಿಡಿಯೋ ಕಳುಹಿಸಿ ಕಾಲ್ ಮಾಡಿ ಮಾತನಾಡುತ್ತಿದ್ದ ಎಂಬುದು ಇದುವರೆಗಿನ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಆರೋಪಿ ಯುವಕ ಶರತ್ ಶೆಟ್ಟಿ ವಿದ್ಯಾರ್ಥಿನಿಯನ್ನು ಪ್ರದೇಶದ ಲಾಜ್ ವೊಂದಕ್ಕೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ ಸ್ನೇಹಿತ ಇದಯಾತ್ ಉಲ್ಲಾ ಕೂಡ ಆಕೆಯ ಮೇಲೆ ರೇಪ್ ನಡೆಸಿದ್ದಾನೆ. ಇದಕ್ಕಾಗಿ ಮತ್ತೋರ್ವ ಆರೋಪಿ ಲಾಜ್ ವ್ಯವಸ್ಥೆ ಮಾಡಿಸಿದ್ದಾನೆ ಮತ್ತು ಮೂವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇದನ್ನೂ ಓದಿ-ಸಂಪೂರ್ಣವಾಗಿ ಬಿಎಸ್ವೈ ಮುಗಿಸಲು ಬಿಜೆಪಿಯಿಂದ ‘ಟಾರ್ಗೆಟ್ BSY’ ಯೋಜನೆ: ಕಾಂಗ್ರೆಸ್
ನಂತರ ಪೋಲೀಸರ ಬಳಿಗೆ ಹೋಗಿ ಸಂತ್ರಸ್ತೆ ದೂರು ನೀಡಲು ನಿರ್ಧರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆ ಸುಮಾರು 8.15ರ ಸುಮಾರಿಗೆ ವಿದ್ಯಾರ್ಥಿನಿ ಬಂಟವಾಳ ಬಸ್ ಸ್ಟಾಪ್ ನಿಂದ ಶಾಲೆಗೆ ಹೋಗುತ್ತಿದ್ದಳು. ಆಗ ಆರೋಪಿಗಳು ಕಾರಿನ ಮೂಲಕ ಅಲ್ಲಿಗೆ ಬಂದಿದ್ದಾರೆ. ವಿದ್ಯಾರ್ಥಿನಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ ಆರೋಪಿ ಆಕೆಯ ಜೊತೆಗೆ ಮಾತನಾಡುತ್ತಾ ಆಕೆಗೆ ಚಾಕ್ಲೆಟ್ ನೀಡಿದ್ದಾನೆ. ಚಾಕ್ಲೆಟ್ ಬ್ಯಾಗ್ ನಲ್ಲಿ ಇಡುವಾಗ ಆಕೆ ಪ್ರಜ್ಞೆ ತಪ್ಪಿದ್ದಾಳೆ.
ಇದನ್ನೂ ಓದಿ-ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ: ಕಾಂಗ್ರೆಸ್ ಕಿಡಿ
ಪೋಕ್ಸೋ ಕಾಯ್ದೆಯ ಅಡಿ FIR ದಾಖಲಿಸಿಕೊಂಡ ಪೊಲೀಸರು
ಪ್ರಾಥಮಿಕ ತನಿಖೆ ನಡೆಸಿ ಮಾಹಿತಿ ನೀಡಿರುವ ಪೊಲೀಸರು, ಯುವತಿಗೆ ಪ್ರಜ್ಞೆ ಬಂದಾಗ ಆಕೆ ಹಾಸಿಗೆ ಮೇಲಿದ್ದಳು ಮತ್ತು ಆಕೆಯ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿದ್ದರು. ಬಳಿಕ ಮತ್ತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಂತರ ಆಕೆಗೆ ಪ್ರಜ್ಞೆ ಮರಳಿದಾಗ ಆಕೆ ಕಾರಿನಲ್ಲಿದ್ದಳು. ಆರೋಪಿಗಳು ಆಕೆಯನ್ನು ಬಂಟ್ವಾಳ ಪಟ್ಟಣದ ಬಳಿ ಬಿಟ್ಟಿದ್ದಾರೆ. ಆಗ ಸಂತ್ರಸ್ತೆ ತನ್ನ ತಾಯಿಗೆ ಕರೆ ಮಾಡುವ ಮೂಲಕ ಮನೆಗೆ ತಲುಪಿದ್ದಾಳೆ ಎಂದು ಹೇಳಿದ್ದಾರೆ. ಸದ್ಯ ಪೋಕ್ಸೋ ಕಾಯ್ದೆಯ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ-Viral News: ಪ್ರವಾಹಕ್ಕೆ ಸಿಲುಕಿದ್ದ ಮರಿ ರಕ್ಷಿಸಲು ಈ ಶ್ವಾನ ಏನು ಮಾಡಿದೆ ನೋಡಿ…
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ