ಶ್ರೀನಗರ: ಕಣಿವೆ ರಾಜ್ಯದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ಉಗ್ರರು ಗುರುವಾರ ಈದ್ಗಾ ಪ್ರದೇಶದಲ್ಲಿ ಶಾಲೆಯೊಳಗೆ ನುಗ್ಗಿ ಗುಂಡಿನ ಸುರಿಮಳೆ ಗೈದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಜನರನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕರು (Terrorist) ಕಳೆದ ಮೂರು ದಿನಗಳಲ್ಲಿ ಕಣಿವೆಯಲ್ಲಿ 7 ಜನರನ್ನು ಗುರಿಯಾಗಿಸಿಕೊಂಡಿದ್ದಾರೆ.
Jammu and Kashmir | Firing incident reported in Eidgah area of Srinagar; Details awaited
— ANI (@ANI) October 7, 2021
ಇಂದು ಶ್ರೀನಗರದ ಈದ್ಗಾ ಸಂಗಮ್ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿರುವ ಭಯೋತ್ಪಾದಕರು ಇಬ್ಬರು ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಮೃತರನ್ನು ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ, ಕಾಶ್ಮೀರದಲ್ಲಿ 5 ನಾಗರಿಕರನ್ನು ಕೊಲ್ಲಲಾಗಿದೆ. ಬುಧವಾರ, ನಗರದಲ್ಲಿ ಪ್ರಸಿದ್ಧ ಕಾಶ್ಮೀರಿ ಪಂಡಿತ್ ಮೆಡಿಕಲ್ ಶಾಪ್ ಮಾಲೀಕರು ಸೇರಿದಂತೆ ಇಬ್ಬರು ನಾಗರಿಕರನ್ನು ಕೊಲ್ಲಲಾಯಿತು. ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ, ಮೂವರನ್ನು ಕೊಲೆ ಮಾಡಲಾಗಿದೆ.
ಇದನ್ನೂ ಓದಿ- Renewal Of Car Registration: ಹಳೆಯ ಕಾರಿನ ನೋಂದಣಿ ನವೀಕರಣ ತುಂಬಾ ದುಬಾರಿ
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯದ ಪ್ರಮುಖ ಸಭೆ:
ಇತ್ತೀಚಿಗೆ ಕಣಿವೆ ರಾಜ್ಯದಲ್ಲಿ ಜನಸಾಮಾನ್ಯರನ್ನು ಗುರಿಯಾಗಿಸುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಗೃಹ ಸಚಿವಾಲಯವು ಪ್ರಮುಖ ಸಸ್ಭೆ ಕರೆದಿದೆ. ಈ ಸಭೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕರ ಭದ್ರತೆಯ ಹೊರತಾಗಿ, ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ನಡೆಯುವ ಸಭೆಯಲ್ಲಿ ಸಿಆರ್‌ಪಿಎಫ್‌ನ ಡಿಜಿ ಸೇರಿದಂತೆ ಭದ್ರತಾ ಏಜೆನ್ಸಿಗಳ ಅನೇಕ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇದಲ್ಲದೇ, ಐಬಿ ಮುಖ್ಯಸ್ಥರು ಮತ್ತು ಅರೆಸೇನಾ ಪಡೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿರುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ- ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಪ್ರಿಯಾಂಕಾ ಗಾಂಧಿ ಜೈಲಿನಲ್ಲಿರುವುದೇಕೆ?
ಕಣಿವೆಯಲ್ಲಿ 90 ನಿಮಿಷಗಳಲ್ಲಿ ಮೂವರು ಸಾವನ್ನಪ್ಪಿದರು:
ಕಾಶ್ಮೀರ ಕಣಿವೆಯಲ್ಲಿ ಮಂಗಳವಾರ (ಅಕ್ಟೋಬರ್ 5) 90 ನಿಮಿಷಗಳಲ್ಲಿ ಮೂವರನ್ನು ಶಂಕಿತ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಇಕ್ಬಾಲ್ ಪಾರ್ಕ್ ಪ್ರದೇಶದ ಶ್ರೀನಗರದ ಪ್ರಸಿದ್ಧ ಔಷಧಾಲಯದ ಮಾಲೀಕರಾದ ಮಖನ್ಲಾಲ್ ಬಿಂದ್ರು ಅವರ ವ್ಯಾಪಾರ ಆವರಣದಲ್ಲಿ ಗುಂಡು ಹಾರಿಸಲಾಯಿತು. ಇದರ ಹೊರತಾಗಿ, ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನೂ ಇಬ್ಬರು ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಅವರಲ್ಲಿ ಒಬ್ಬರು ಬಿಹಾರದ ನಿವಾಸಿ ಆಗಿದ್ದು, ಅವರು ಗೋಲ್ಗಪ್ಪ-ಭೇಲ್ಪುರಿ ಮಾರಾಟ ಮಾಡುವ ಮೂಲಕ ತಮ್ಮ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ದಾಳಿಯ ಹೊಣೆ ಹೊತ್ತ ಟಿಆರ್‌ಎಫ್:
ಭಯೋತ್ಪಾದಕ ಸಂಘಟನೆ 'ದಿ ರೆಸಿಸ್ಟೆನ್ಸ್ ಫೋರ್ಸ್' (ಟಿಆರ್‌ಎಫ್) ಮಂಗಳವಾರದ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಇದು ಲಷ್ಕರ್-ಇ-ತೈಬಾಕ್ಕೆ ಸಂಬಂಧಪಟ್ಟ ಸಂಘಟನೆ ಎಂದು ನಂಬಲಾಗಿದೆ. ಮಖನ್ ಲಾಲ್ ಬಿಂದ್ರು (68) ಅವರನ್ನು ಅವರ ಔಷಧಾಲಯದಲ್ಲಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ನಂತರ ಕೂಡಲೇ ಬಿಂದ್ರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ ಆಸ್ಪತ್ರೆ ತಲುಪುವಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಆರಂಭವಾದ ನಂತರ ವಲಸೆ ಹೋಗದ ಕಾಶ್ಮೀರಿ ಪಂಡಿತ್ ಸಮುದಾಯದ ಕೆಲವೇ ಜನರಲ್ಲಿ ಬಿಂದ್ರು ಕೂಡ ಒಬ್ಬರು ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ