Navratri 2021: ನವರಾತ್ರಿಯ ಉಪವಾಸದ ನಿಯಮಗಳು; ಮರೆತೂ ಮಾಡದಿರಿ ಈ ತಪ್ಪು

Navratri Fasting: ನವರಾತ್ರಿಯಲ್ಲಿ ಉಪವಾಸ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇದು ಆಚರಣೆಗಳಿಂದ ಉಪವಾಸದ ಆಹಾರದವರೆಗಿನ ನಿಯಮಗಳನ್ನು ಒಳಗೊಂಡಿದೆ.

Written by - Yashaswini V | Last Updated : Oct 6, 2021, 11:12 AM IST
  • ನವರಾತ್ರಿಯ ಉಪವಾಸದ ವೇಳೆ ನಿಯಮಗಳನ್ನು ಅನುಸರಿಸಿ
  • ನವರಾತ್ರಿಯ 9 ದಿನಗಳು ದುರ್ಗಾಮಾತೆಯನ್ನು ಎರಡು ಬಾರಿ ಪೂಜಿಸಿ
  • ದುರ್ಗಾ ಮಾತೆಯನ್ನು ಪೂಜಿಸುವಾಗ ದೇಹ ಮತ್ತು ಮನಸ್ಸು ಎರಡರ ಶುದ್ಧೀಕರಣ ಅಗತ್ಯ
Navratri 2021: ನವರಾತ್ರಿಯ ಉಪವಾಸದ ನಿಯಮಗಳು; ಮರೆತೂ ಮಾಡದಿರಿ ಈ ತಪ್ಪು title=
Navaratri Upavasa: Rules for Navratri Vrat

ನವದೆಹಲಿ: ದೇಶಾದ್ಯಂತ ನವರಾತ್ರಿಯ  (Navratri) ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಉಪವಾಸವನ್ನು ಮಾಡುತ್ತಾರೆ. ಆದರೆ ಹಲವು ಬಾರಿ ತಮಗೆ ಗೊತ್ತಿಲ್ಲದೆಯೇ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರು ಉಪವಾಸದ ಪೂರ್ಣ ಫಲವನ್ನು ಪಡೆಯುವುದಿಲ್ಲ ಅಥವಾ ಅವರ ಮನೋಕಾಮನೆಗಳು ಪೂರ್ಣಗೊಳ್ಳದಿರಬಹುದು. ನಾಳೆಯಿಂದ (7 ಅಕ್ಟೋಬರ್ 2021, ಶುಕ್ರವಾರ) ಆರಂಭವಾಗುವ ನವರಾತ್ರಿಯ ಸಮಯದಲ್ಲಿ ನೀವು ಕೂಡ ಉಪವಾಸ (Navratri Fasting) ಮಾಡುತ್ತಿದ್ದರೆ, ಈ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ ಮತ್ತು ಉಪವಾಸದ ಸಮಯದಲ್ಲಿ ಅವುಗಳನ್ನು ಅನುಸರಿಸಿದರೆ ಒಳ್ಳೆಯದು.

ನವರಾತ್ರಿಯ ಉಪವಾಸದ ಪ್ರಮುಖ ನಿಯಮಗಳು :
ಉಪವಾಸ (Fasting) ಎಂದರೆ ಆಹಾರ ಸೇವಿಸದಿರುವುದು ಅಥವಾ ಆಹಾರ ಧಾನ್ಯಗಳನ್ನು ತೆಗೆದುಕೊಳ್ಳದಿರುವುದು ಮಾತ್ರವಲ್ಲ, ಮನಸ್ಸನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಎಂದರ್ಥ. ಉಪವಾಸದ ಸಮಯದಲ್ಲಿ, ನಿಮ್ಮ ಎಲ್ಲಾ ಗಮನವನ್ನು ಭಕ್ತಿಯಲ್ಲಿ ಕೇಂದ್ರೀಕರಿಸಿ ಮತ್ತು ನಿಯಮಗಳ ಪ್ರಕಾರ ಪೂಜಿಸುವ ಮೂಲಕ ಮಾತ್ರ ಉಪವಾಸವನ್ನು ಪೂರ್ಣಗೊಳಿಸಲಾಗುತ್ತದೆ. ಆದ್ದರಿಂದ ಈ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ. 

ಇದನ್ನೂ ಓದಿ- Navratri Money Remedies: ನಿಮಗೂ ಶ್ರೀಮಂತರಾಗುವ ಬಯಕೆಯೇ? ನವರಾತ್ರಿಯಲ್ಲಿ 9 ದಿನಗಳ ಕಾಲ ಈ ಕೆಲಸ ಮಾಡಿ

ಉಪವಾಸದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳಿವು:
>> ನವರಾತ್ರಿಯ (Navratri) ಮೊದಲ ದಿನ ನಿಯಮಗಳ ಪ್ರಕಾರ ಪೂಜೆಯನ್ನು ಆರಂಭಿಸಿ.
>> ನವರಾತ್ರಿಯ ಸಮಯದಲ್ಲಿ ಮುಂಜಾನೆ ಸ್ನಾನ ಮಾಡಿ, ಮಡಿ ಬಟ್ಟೆಯನ್ನು ಧರಿಸಿ ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ. 
>> ನಂತರ ನಿಯಮಗಳ ಪ್ರಕಾರ ಪೂಜೆ ನೆರವೇರಿಸಿ.
>> ಮುಂಜಾನೆ ಸಮಯದಲ್ಲಿ ಮಾತ್ರವಲ್ಲ ಸಂಜೆ ಕೂಡ ತುಪ್ಪದ ದೀಪವನ್ನು ಬೆಳಗಿಸಿ ಆರತಿ ಮಾಡಿ.
>> ಒಂದೊಮ್ಮೆ ನೀವು ನಿಮ್ಮ ಮನೆಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸಿದರೆ, ಅದನ್ನು 9 ದಿನಗಳ ಕಾಲ ನಿರಂತರವಾಗಿ ಬೆಳಗಲು ಸೂಕ್ತ ವ್ಯವಸ್ಥೆ ಮಾಡಿ. ಕೊನೆಯ ದಿನದ ಪೂಜೆಯ ನಂತರ ಅದನ್ನು ನಂದಿಸಬೇಡಿ, ಆದರೆ ತಾನಾಗಿಯೇ ತಣ್ಣಗಾಗಲು ಬಿಡಿ. 

ಇದನ್ನೂ ಓದಿ- Navratri 2021: ಡೋಲಿಯಲ್ಲಿ ದೇವಿ ದುರ್ಗೆಯ ಆಗಮನ-ಆನೆಯ ಮೇಲೆ ನಿರ್ಗಮನ, ಈ ಬಾರಿಯ ನವರಾತ್ರಿ ಪ್ರಭಾವ ಹೇಗಿರಲಿದೆ?

>> ದಿನದಲ್ಲಿ ಸಮಯ ಸಿಕ್ಕಾಗಲೆಲ್ಲಾ ಪ್ರತಿನಿತ್ಯ ದುರ್ಗಾ ಸಪ್ತಶತಿಯನ್ನು ಪಠಿಸಿ ಮತ್ತು ಮಂತ್ರವನ್ನು ಪಠಿಸಿ. 
>> ಉಪವಾಸದ ವೇಳೆ ಹಣ್ಣುಗಳನ್ನು ಸೇವಿಸಿ. ತಪ್ಪಾಗಿ ಕೂಡ ತಾಮಸಿಕ ವಸ್ತುಗಳನ್ನು ತಿನ್ನಬೇಡಿ. 
>> ದುರ್ಗಾ ಮಾತೆಯು ಶುದ್ಧ ಮನಸ್ಸಿನಿಂದ ಪೂಜಿಸುವವರಿಗೆ ಬಹಳ ಬೇಗ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಉಪವಾಸದ ಸಮಯದಲ್ಲಿ ಸಾಧ್ಯವಾದಷ್ಟು ಒಳ್ಳೆಯ ವಿಚಾರಗಳ ಬಗ್ಗೆ ಯೋಚಿಸಿ. 
>> ಈ ಸಮಯದಲ್ಲಿ ಯಾರೊಂದಿಗೂ ಕೋಪಗೊಳ್ಳಬೇಡಿ ಅಥವಾ ನಿಂದನಾತ್ಮಕ ಪದಗಳನ್ನು ಬಳಸಬೇಡಿ. 
>> ಈ ಸಮಯದಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News