Global Voice Message Player: ವಾಟ್ಸಾಪ್ ಕೆಲವು ತಿಂಗಳ ಹಿಂದೆ ವಿವಿಧ ಪ್ಲೇಬ್ಯಾಕ್ ವೇಗದಲ್ಲಿ ಧ್ವನಿ ಸಂದೇಶಗಳನ್ನು ಪ್ಲೇ ಮಾಡುವ ಸಾಮರ್ಥ್ಯವನ್ನು ಪರಿಚಯಿಸಿತ್ತು. ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ವಾಟ್ಸ್ಆ್ಯಪ್ ಎರಡರಲ್ಲೂ ಬಿಡುಗಡೆ ಮಾಡಲಾಗಿದೆ. ಇದೀಗ WhatsApp ತನ್ನ ಧ್ವನಿ ಸಂದೇಶವನ್ನು ಸುಧಾರಿಸುವ ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ವಾಟ್ಸಾಪ್ ಗ್ಲೋಬಲ್ ವಾಯ್ಸ್ ಮೆಸೇಜ್ ಪ್ಲೇಯರ್ (Global Voice Message Player) ಎಂಬ ಹೊಸ ವೈಶಿಷ್ಟ್ಯದ ಮೇಲೆ ಕೆಲಸ ಮಾಡಲು ಆರಂಭಿಸಿದೆ.
ಈ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸಲಿದೆ (WhatsApp New Feature)
ವಾಟ್ಸ್ ಆಪ್ ನ Global Voice Message Player ವೈಶಿಷ್ಟ್ಯ, ಬಳಕೆದಾರರು ಚಾಟ್ ವಿಂಡೋ ತೊರೆದಾಗಳೂ ಕೂಡ ನಿರ್ದಿಷ್ಟ ಸಂಪರ್ಕಗಳೊಂದಿಗೆ ಧ್ವನಿ ಸಂದೇಶಗಳನ್ನು ಕೇಳಲು ಅನುವು ಮಾಡಿಕೊಡಲಿದೆ ಎಂದು ವಾಟ್ಸ್ ಆಪ್ ಅಪ್ಡೇಟ್ ಗಳನ್ನು ಟ್ರ್ಯಾಕ್ ಮಾಡುವ WABetaInfo ವರದಿ ಮಾಡಿದೆ. ಅಪ್ಲಿಕೇಶನ್ನ ಮೇಲ್ಭಾಗಕ್ಕೆ ಪಿನ್ ಮಾಡಲಾಗಿರುವುದರಿಂದ ಮತ್ತು ವಾಟ್ಸಾಪ್ ಬಳಕೆದಾರರು ಆಪ್ನ ಯಾವುದೇ ಭಾಗವನ್ನು ತೆರೆದಾಗ ಯಾವಾಗಲೂ ಗೋಚರಿಸುವುದರಿಂದ ಈ ವೈಶಿಷ್ಟ್ಯವನ್ನು ಆ ರೀತಿ ಹೆಸರಿಸಲಾಗಿದೆ ಎಂದು ಬ್ಲಾಗ್ ಸೈಟ್ ಹೇಳುತ್ತದೆ. ಯಾವುದೇ ಸಮಯದಲ್ಲಿ ಧ್ವನಿ ಸಂದೇಶಗಳನ್ನು (WhatsApp Voice Message)ವಿರಾಮಗೊಳಿಸಲು ಮತ್ತು ವಜಾಗೊಳಿಸಲು ಸಹ ಇದರಿಂದ ಸಾಧ್ಯವಿದೆ ಎಂದು ಬ್ಲಾಗ್ ಸೈಟ್ ವರದಿ ಮಾಡಿದೆ.
ಇದನ್ನೂ ಓದಿ-Xiaomi ತರುತ್ತಿದೆ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್,108MP ಕ್ಯಾಮೆರಾದೊಂದಿಗೆ ಇರಲಿದೆ ಈ ವೈಶಿಷ್ಟ್ಯ
WhatsApp Latest Feature - Android ಬಳಕೆದಾರರಿಗೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಈ ವೈಶಿಷ್ಟ್ಯ
WhatsApp ನ ಮುಂಬರುವ ಜಾಗತಿಕ ವಾಯ್ಸ್ ಮೆಸೇಜ್ ಪ್ಲೇಯರ್ ವೈಶಿಷ್ಟ್ಯ ಆಪ್ ಒಳಗೆ ವಿಡಿಯೋಗಳನ್ನು ಪ್ಲೇ ಮಾಡಲು ಪಿಕ್ಚರ್-ಇನ್-ಪಿಕ್ಚರ್ ಫೀಚರ್ ನಂತೆ ಇರಲಿದೆ. ಒಂದೇ ವ್ಯತ್ಯಾಸವೆಂದರೆ ಗ್ಲೋಬಲ್ ವಾಯ್ಸ್ ಮೆಸೇಜ್ ಪ್ಲೇಯರ್ ಫೀಚರ್ ಅನ್ನು ವಾಟ್ಸ್ ಆಪ್ ನ ಇಂಟರ್ ಫೇಸ್ಗೆ ನೀವು ಪಿನ್ ಮಾಡಬಹುದು. ಈ ವೈಶಿಷ್ಟ್ಯವು ಇನ್ನೂ iOSಗೆ ಬರುತ್ತಿಲ್ಲ. ಆದರೆ ಶೀಘ್ರದಲ್ಲೇ ಇದನ್ನು ಆಂಡ್ರಾಯ್ಡ್ಗಾಗಿ WhatsApp ಬೀಟಾದಲ್ಲಿ ನೀಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-ಎಲ್ಲರಿಗೂ ಇಷ್ಟವಾಗುವ Smartphone ಬಿಡುಗಡೆ ಮಾಡುತ್ತಿದೆ Xiaomi, ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ
Global Voice Message Player ಜೊತೆಗೆ WhatsApp ಮತ್ತೆ ಎರಡು ವೈಶಿಷ್ಟ್ಯಗಳನ್ನು ಕೂಡ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾಯವಾಗಿರುವ ಸಂದೇಶಗಳನ್ನು ಮತ್ತೆ ಆಕ್ಟಿವ್ ಮಾಡುವ ಗುರಿಯನ್ನು ಇವು ಹೊಂದಿವೆ. ಮೊದಲನೆಯದಾಗಿ, ವಾಟ್ಸಾಪ್ ತನ್ನ ಕಾಣೆಯಾದ ಸಂದೇಶಗಳನ್ನು ನಿರ್ವಹಿಸಲು ಹೆಚ್ಚಿನ ಕಾಲಾವಧಿಯನ್ನು ಸೇರಿಸಲು ಯೋಜಿಸುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ 24 ಗಂಟೆಗಳು, 90 ದಿನಗಳು ಮತ್ತು 7 ದಿನಗಳು ಸೇರಿದಂತೆ ವಿವಿಧ ಅವಧಿಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲಿದೆ.
ಇದನ್ನೂ ಓದಿ-Harvard Business Review - ಕೆಲಸ ಅಥವಾ ಸಂಸ್ಥೆಗೆ ನಿಷ್ಠರಾಗಿರುವುದು ಎಷ್ಟು ಮುಖ್ಯ? ಜಾಗತಿಕ ವರದಿ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.