ಭಾಲ್ಕಿ: ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸಮಾವೇಶದಲ್ಲಿ ಭಾಷಣ ಮಾಡುತ್ತಾ "ಪ್ರಧಾನಿ ಮೋದಿಯವರು ಶೋಲೇ ಚಿತ್ರದ ಸಂಪೂರ್ಣ ತಂಡವನ್ನು ಹೊಂದಿದ್ದಾರೆಂದು ವ್ಯಂಗವಾಡಿದರು.
ಪ್ರಧಾನಿ ಮೋದಿ ವಿರುದ್ದ ಟೀಕಾ ಪ್ರಹಾರ ನಡೆಸಿದ ರಾಹುಲ್ ಗಾಂಧಿ " ಮೋದಿಯವರ "ಗಬ್ಬರ್, ಕಾಲಿಯಾ, ಸಾಂಬಾ ಅವರನ್ನು ಒಳಗೊಂಡ ಶೋಲೇ ಫಿಲ್ಮ್ ನ ಗ್ಯಾಂಗ್, ಈಗ ಬಿಜೆಪಿಯಲ್ಲಿ ರೆಡ್ಡಿ ಬ್ರದರ್ ಮತ್ತು ಬಿಎಸ್ ಯಡಿಯೂರಪ್ಪ ರೂಪದಲ್ಲಿ ಸುತ್ತುವರೆದಿದೆ,ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ರಾಹುಲ್" ಕರ್ನಾಟಕದಲ್ಲಿ ಬಿಜೆಪಿ ಜೈಲು ಹಕ್ಕಿಗಳನ್ನು ವಿಧಾನಸಭೆಯಲ್ಲಿ ತುಂಬಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.