ನವದೆಹಲಿ: No Internet From Tomorrow - ಮಾಧ್ಯಮ ವರದಿಗಳ ಪ್ರಕಾರ ನಾಳೆಯಿಂದ ಅಂದರೆ, ಸೆ.10 ರಿಂದ ವಿಶ್ವಾದ್ಯಂತ ಕೆಲ ಬಳಕೆದಾರರು ಹಳೆ ಉಪಕರಣಗಳನ್ನು ಬಳಸುತ್ತಿದ್ದಾರೆ ಅವರು ವರ್ಲ್ಡ್ ವೈಡ್ ವೆಬ್ (WWW Service)ಸೇವೆಯನ್ನು ಬಳಸಲು ಸಾಧ್ಯವಾಗದೆ ಇರಬಹುದು ಎನ್ನಲಾಗಿದೆ. ಎಕೆಂದರೆ ಹಲವು ಹಳೆ ಸಾಧನಗಳ IdentTrust DST ರೂಟ್ CA X3 ಪ್ರಮಾಣಪತ್ರವು 30 ಸೆಪ್ಟೆಂಬರ್ 2021 ರಂದು ಮುಕ್ತಾಯಗೊಳ್ಳುತ್ತದೆ ಮತ್ತು ಇದು ಜಾಗತಿಕವಾಗಿ ಇಂಟರ್ನೆಟ್ ಬಳಕೆದಾರರ ಕೆಲವು ವಿಭಾಗಗಳ ಮೇಲೆ ಪರಿಣಾಮ ಬೀರಲಿದೆ. ಹಳೆಯ Mac, iPhones, PlayStation 3 ಮತ್ತು Nintendo 3DS ಗೇಮಿಂಗ್ ಕನ್ಸೋಲ್‌ಗಳು, ಹಲವು ಸ್ಮಾರ್ಟ್ ಟಿವಿಗಳು, ಸೆಟ್-ಟಾಪ್ ಬಾಕ್ಸ್‌ಗಳು ಮತ್ತು ಇತರ "ಸ್ಮಾರ್ಟ್" ಸಾಧನಗಳು ಮತ್ತು ಕೆಲವು ಪ್ಲೇಸ್ಟೇಷನ್ 4 ಗಳಂತಹ ಹಳೆಯ ಸಾಧನಗಳು ಇಂಟರ್ನೆಟ್ ಸಂಪರ್ಕದಿಂದ ವಂಚಿತವಾಗುವ ಸಾಧ್ಯತೆಯಿದೆ.
ಲೆಟ್ಸ್ ಎನ್ಕ್ರಿಪ್ಟ್ ಹೆಸರಿನ ಒಂದು ಲಾಭರಹಿತ ಸಂಸ್ಥೆಯಾಗಿದ್ದು ಅದು ಇಂಟರ್ನೆಟ್ (Internet) ಮತ್ತು ನಿಮ್ಮ ಸಾಧನಗಳ ನಡುವಿನ ಸಂಪರ್ಕವನ್ನು ಎನ್ಕ್ರಿಪ್ಟ್ ಮಾಡಲು ಪ್ರಮಾಣಪತ್ರಗಳನ್ನು ನೀಡುತ್ತದೆ - ಮೊಬೈಲ್ (Android Phones), ಲ್ಯಾಪ್ ಟಾಪ್, ಪಿಸಿ, ಇತ್ಯಾದಿ. ಪ್ರಮಾಣೀಕರಣವು ನಿಮ್ಮ ಡೇಟಾವು ಅಂತರ್ಜಾಲದಲ್ಲಿ ಸುರಕ್ಷಿತವಾಗಿದೆ ಮತ್ತು ಹ್ಯಾಕರ್‌ಗಳು ಅವುಗಳನ್ನು ಕದಿಯುವುದನ್ನು ಅಥವಾ ದುರುಪಯೋಗ ಮಾಡುವುದನ್ನು ತಡೆಯುತ್ತದೆ. HTTPS ನಿಂದ ಆರಂಭವಾಗುವ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ, ವೆಬ್‌ಸೈಟ್ ಸುರಕ್ಷಿತವಾಗಿದೆ ಎಂದರ್ಥ. ಲೆಟ್ಸ್ ಎನ್ಕ್ರಿಪ್ಟ್ ಸೆಪ್ಟೆಂಬರ್ 30 ಕ್ಕಿಂತ ಹಳೆಯ ಪ್ರಮಾಣಪತ್ರಗಳನ್ನು ಬಳಸುವುದನ್ನು ನಿಲ್ಲಿಸುವುದಾಗಿ ಘೋಷಿಸಿರುವುದರಿಂದ, ಅದು ನಿಮ್ಮ ಮೇಲೂ ಪರಿಣಾಮ ಬೀರಲಿದೆ.
ನಿಮ್ಮ ಮೇಲೆ ಪ್ರಭಾವ ಉಂಟಾಗಬಹುದೇ?
ಈ ಪ್ರಮಾಣಪತ್ರದ ಎಕ್ಸ್ಪೈರಿ ಬಹುತೇಕ ಇಂಟರ್ನೆಟ್ ಬಳಕೆದಾರರ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಆದರೆ, ಇದು ಕೆಲ ಬಳಕೆದಾರರ ಮೇಲೆ ಪ್ರಭಾವ ಬೀರಲಿದೆ. ಹೊಸ ಆವೃತ್ತಿಗೆ ಅಪ್ಡೇಟ್ ಆಗದ ಕಂಪ್ಯೂಟರ್ ಗಳು ಮತ್ತು ಬ್ರೌಸರ್ ಗಳು ಸೆಪ್ಟೆಂಬರ್ 30 ದರಿಂದ ಅಂದರೆ ನಾಳೆಯಿಂದ ಇಂಟರ್ ನೆಟ್ ಆಕ್ಸಸ್ ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ-Suryoday Bank : ಬ್ಯಾಂಕ್ ಗ್ರಾಹಕರೇ ಗಮನಿಸಿ : ಅಕ್ಟೋಬರ್ 1 ರಿಂದ ದೇಶದಲ್ಲಿ ಬಂದ್ ಆಗಲಿದೆ ಈ ಬ್ಯಾಂಕ್ ATM
TechCrunch ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಅಪ್ ಟು ಡೇಟ್ ಆಗಿರದ ಹೆಚ್ಚಿನ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಪ್ರಭಾವ ಉಂಟಾಗಲಿದೆ. ಹೊಸ ಮತ್ತು ನವೀಕರಿಸಿದ ಸಾಧನಗಳು ಇದರಿಂದ ಪ್ರಭಾವಿತಗೊಳ್ಳುವುದಿಲ್ಲ. ವರದಿಯ ಪ್ರಕಾರ, ಮ್ಯಾಕೋಸ್ 2016 ಮತ್ತು ವಿಂಡೋಸ್ ಎಕ್ಸ್‌ಪಿಯ ಹಿಂದಿನ ಆವೃತ್ತಿಗಳು (ಸರ್ವಿಸ್ ಪ್ಯಾಕ್ 3 ರೊಂದಿಗೆ) ಚಾಲನೆಯಲ್ಲಿರುವ ಬಳಕೆದಾರರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Amazon ನಲ್ಲಿ ಆಫರ್ ಗಳ ಸುರಿಮಳೆ, ಸ್ಯಾಮ್ ಸಂಗ್ ನ ಈ ಫೋನ್ ಮೇಲೆ ಸಿಗಲಿದೆ 30 ಸಾವಿರಕ್ಕಿಂತ ಅಧಿಕ ರಿಯಾಯಿತಿ
ಏನ್ ಮಾಡ್ಬೇಕು?
ಪ್ರಮಾಣಪತ್ರದ ಅವಧಿ ಮುಗಿದ ನಂತರ 7.1.1 ಕ್ಕಿಂತ ಹಳೆಯ ಆವೃತ್ತಿಗಳನ್ನು ಚಾಲನೆ ಮಾಡುವ ಎಲ್ಲಾ ಆಂಡ್ರಾಯ್ಡ್ ಸಾಧನಗಳಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುವುದಿಲ್ಲ. ಐಫೋನ್ಗಳಿಗಾಗಿ, ಐಒಎಸ್ 10 ಕ್ಕಿಂತ ಹಳೆಯ ಆವೃತ್ತಿಗಳನ್ನು ಚಾಲನೆಯಲ್ಲಿರುವ ಸಾಧನಗಳು ಪ್ರಭಾವಕ್ಕೆ ಒಳಗಾಗಲಿವೆ. ಒಂದು ವೇಳೆ ನೀವು ಈ ಪ್ರಭಾವದಿಂದ ಪಾರಾಗಲು ಬಯಸುತ್ತಿದ್ದರೆ, ನಿಮ್ಮ ಸಾಧನವನ್ನು ತಕ್ಷಣವೇ ಪರಿಶೀಲಿಸಿ ಮತ್ತು ನಿಮ್ಮ ಸಾಧನವು ಹಳೆಯ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ತಕ್ಷಣವೇ ಅಪ್‌ಡೇಟ್ ಮಾಡಿ.
ಇದನ್ನೂ ಓದಿ-ಪೆಟ್ರೋಲ್ ಪಂಪ್ ನಡೆಸುತ್ತಿದ್ದ ತಾಯಿ, 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಮಗಳು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.