Knowledge Story: ಕೇವಲ Expiry Date ಅಷ್ಟೇ ಅಲ್ಲ, ಮಾತ್ರೆಗಳ ಸ್ಟ್ರಿಪ್ ಮೇಲಿರುವ ಈ ಚಿಹ್ನೆಯೂ ಇಂಪಾರ್ಟೆಂಟ್

Knowledge Story - ಮೆಡಿಕಲ್ ಸ್ಟೋರ್ (Medical Store)  ನಿಂದ ಔಷಧಿ (Medicine)  ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ಕೇವಲ ಮುಕ್ತಾಯ ದಿನಾಂಕವನ್ನು (Expiry Date) ಜೊತೆಗೆ ನೀವು ತಪ್ಪಾದ ಔಷಧಿಯನ್ನು ಖರೀದಿಸುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಕೆಲ ಚಿಹ್ನೆಗಳನ್ನು ಗಮನಿಸುವುದು ಅವಶ್ಯಕ.

Written by - Nitin Tabib | Last Updated : Sep 29, 2021, 01:14 PM IST
  • ಔಷಧಿಯ ರಾಪರ್ ಗಳ ಮೇಲೆ ನೀಡಲಾಗಿರುವ ಕೆಲ ಚಿಹ್ನೆಗಳು ತುಂಬಾ ಮಹತ್ವದ್ದಾಗಿದೆ.
  • ಯಾವ ಚಿಹ್ನೆಯ ಮಹತ್ವ ಏನು ಇಲ್ಲಿ ತಿಳಿದುಕೊಳ್ಳಿ.
  • ಮತ್ತೇರಿಸುವ ಔಷಧಿಯ ಮೇಲೆ XRx ಗುರುತಿರುತ್ತದೆ.
Knowledge Story: ಕೇವಲ Expiry Date ಅಷ್ಟೇ ಅಲ್ಲ, ಮಾತ್ರೆಗಳ ಸ್ಟ್ರಿಪ್ ಮೇಲಿರುವ ಈ ಚಿಹ್ನೆಯೂ ಇಂಪಾರ್ಟೆಂಟ್  title=
Knowledge Story(File Photo)

ನವದೆಹಲಿ: Knowledge Story - ಸಾಮಾನ್ಯವಾಗಿ, ಕೆಮಿಸ್ಟ್ ಅಂಗಡಿಯಿಂದ (Medical Store) ಔಷಧಿ ತೆಗೆದುಕೊಳ್ಳುವಾಗ, ಜನರು ಮುಕ್ತಾಯ ದಿನಾಂಕವನ್ನು ನೋಡುತ್ತಾರೆ (Expiry Date) ಮತ್ತು ಅದರ ಬೆಲೆಯನ್ನು ನೋಡುತ್ತಾರೆ. ಈ ಸಮಯದಲ್ಲಿ, ಅವರು ಔಷಧಿಯ ಹೊದಿಕೆಯ ಮೇಲೆ ನೀಡಲಾಗಿರುವ ಕೆಲ ಚಿಹ್ನೆಗಳನ್ನು (Mark On Medicine Rapper)  ನಿರ್ಲಕ್ಷಿಸುತ್ತಾರೆ, ಅವೂ ಕೂಡ ಬಹಳ ಮುಖ್ಯವಾಗಿವೆ. ಈ ಚಿಹ್ನೆಗಳು ಔಷಧಿಯನ್ನು ಖರೀದಿಸಬೇಕೋ ಬೇಡವೋ ಅಥವಾ ಔಷಧವು ಅಮಲೇರಿಸುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಪ್ರಮುಖ ಮಾಹಿತಿ ನೀಡುತ್ತವೆ. ವೈದ್ಯಕೀಯ ವಿಜ್ಞಾನಕ್ಕೆ  ಸಂಬಂಧಿಸಿದ ಇಂತಹ ಪ್ರಮುಖ ಚಿಹ್ನೆಗಳ (Medicine Purchase Tips) ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

XRx ಚಿಹ್ನೆ - ಸಾಮಾನ್ಯವಾಗಿ, ಮಾನಸಿಕ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಮೇಲೆ  XRx ಮೇಲೆ ಬರೆಯಲಾಗುತ್ತದೆ. ಈ ಔಷಧಿಗಳು ಮತ್ತೇರಿಸುವ ಔಷಧಿಗಳಾಗಿರುತ್ತವೆ. ಯಾವುದೇ ವೈದ್ಯಕೀಯ ಅಂಗಡಿಯು ಈ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಔಷಧವನ್ನು ಮಾರಿದ ಮೇಲೆ, ಆತ ಪ್ರಿಸ್ಕ್ರಿಪ್ಷನ್ ಪ್ರತಿಯನ್ನು 2 ವರ್ಷಗಳ ಕಾಲ ಇಟ್ಟುಕೊಳ್ಳಬೇಕು.

ಇದನ್ನೂ ಓದಿ-Benefits of Cucumber Water: ಆರೋಗ್ಯಕ್ಕೆ ವರದಾನ ಸವತೆಕಾಯಿ ನೀರು

NRx ಚಿಹ್ನೆ - ಈ ಚಿಹ್ನೆ ಹೊಂದಿರುವ ಔಷಧಿಯನ್ನು ಖಿನ್ನತೆ, ಆತಂಕ ಅಥವಾ ಯಾವುದೇ ಕೆಟ್ಟ ಚಟವನ್ನು ನಿವಾರಿಸಲು ಬಳಸಲಾಗುತ್ತದೆ. ಈ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಲಾಗುವುದಿಲ್ಲ ಅಥವಾ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ-Cooking Oil: ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಶುದ್ಧತೆಯನ್ನು ಗುರುತಿಸುವುದು ಹೇಗೆ?

Rx ಚಿಹ್ನೆ - ಈ ಔಷಧಿಗಳನ್ನು ವೈದ್ಯರ ಸಲಹೆಯ ನಂತರ ಮಾತ್ರ ತೆಗೆದುಕೊಳ್ಳಬೇಕು, ಆದರೆ ಇವು ಸಾಮಾನ್ಯ ಔಷಧಿಗಳಾಗಿರುತ್ತವೆ.

ಕೆಂಪು ಪಟ್ಟಿ - ಮಾತ್ರೆಯ ರಾಪರ್ ಮೇಲೆ ಮಾಡಿದ ಕೆಂಪು ಪಟ್ಟಿಯ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಿ. ಸಾಮಾನ್ಯವಾಗಿ ಈ ಬ್ಯಾಂಡೇಜ್ ಆಂಟಿ ಬಯೋಟಿಕ್ ಔಷಧಿಗಳ  ಮೇಲೆ ಇರುತ್ತದೆ. ಅವುಗಳನ್ನು ಖರೀದಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ -Banana Peel: ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಹೊಳೆಯುವ ಚರ್ಮದ ರಹಸ್ಯ, ಅದನ್ನು ಈ ರೀತಿ ಬಳಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News