EPFO:UANನಲ್ಲಿ ಬ್ಯಾಂಕ್ ಖಾತೆಯನ್ನು ಅಪ್‌ಡೇಟ್ ಮಾಡದಿದ್ದಲ್ಲಿ ಎದುರಾಗಲಿದೆ ಸಮಸ್ಯೆ

ನೀವು ನಿಮ್ಮ ಸಂಬಳ ಖಾತೆಯನ್ನು ಯುಎಎನ್‌ಗೆ  ಲಿಂಕ್ ಮಾಡಿರದ್ದರೆ ಮತ್ತು ಬ್ಯಾಂಕ್ ಖಾತೆಯು ಹೊಸ ಕಂಪನಿಯಲ್ಲಿ ಬದಲಾಗಿದ್ದರೆ, ಅದನ್ನು ಯುಎಎನ್‌ನಲ್ಲಿ ಅಪ್‌ಡೇಟ್ ಮಾಡಬೇಕು.  

ನವದೆಹಲಿ : EPFO UAN Bank Account Update:ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಪ್ರತಿಯೊಬ್ಬ ಸದಸ್ಯರು UAN ಪಡೆಯುತ್ತಾರೆ. ಈ ಯುಎಎನ್ ಸಂಖ್ಯೆಯು ಉದ್ಯೋಗಿಯ ಎಲ್ಲಾ ಪಿಎಫ್ ಖಾತೆಗಳ ವಿವರಗಳನ್ನು ಒಳಗೊಂಡಿದೆ. ಯುಎಎನ್ ಅನ್ನು ಇಪಿಎಫ್ ಖಾತೆಗೆ ಲಿಂಕ್ ಮಾಡಲಾಗಿದೆ. ಇದು ಉದ್ಯೋಗಿಗಳ ಬ್ಯಾಂಕ್ ವಿವರಗಳನ್ನು ಸಹ ಒಳಗೊಂಡಿದೆ. ಅನೇಕ ಬಾರಿ ಉದ್ಯೋಗಗಳನ್ನು ಬದಲಾಯಿಸುವಾಗ, ಹೊಸ ಕಂಪನಿಯು ಹೊಸ ಬ್ಯಾಂಕ್ ಖಾತೆಯನ್ನು ತೆರೆಯುತ್ತದೆ. ನೀವು ನಿಮ್ಮ ಸಂಬಳ ಖಾತೆಯನ್ನು ಯುಎಎನ್‌ಗೆ  ಲಿಂಕ್ ಮಾಡಿರದ್ದರೆ ಮತ್ತು ಬ್ಯಾಂಕ್ ಖಾತೆಯು ಹೊಸ ಕಂಪನಿಯಲ್ಲಿ ಬದಲಾಗಿದ್ದರೆ, ಅದನ್ನು ಯುಎಎನ್‌ನಲ್ಲಿ ಅಪ್‌ಡೇಟ್ ಮಾಡಬೇಕು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ತಪ್ಪು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ ಯುಎಎನ್‌ನೊಂದಿಗೆ ಲಿಂಕ್ ಆಗಿದ್ದರೆ, ಭವಿಷ್ಯದಲ್ಲಿ ಇಪಿಎಫ್‌ನಿಂದ ಹಣ ಹಿಂಪಡೆಯುವುದು ಸಾಧ್ಯವಾಗದೇ ಹೋಗಬಹುದು.  ಒಂದು ವೇಳೆ, ನಿಮ್ಮ UAN ನೊಂದಿಗೆ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಲಿಂಕ್ ಮಾಡಿದ್ದರೆ,  ಮನೆಯಲ್ಲಿ ಕುಳಿತು ಅದನ್ನು ನವೀಕರಿಸಬಹುದು. 

2 /5

EPFO ಪ್ರಕಾರ, ಮೊದಲು EPFO ​​ನ ಯೂನಿಫೈಡ್‌ ಮೆಂಬರ್‌  ಪೋರ್ಟಲ್‌ https://unifiedportal-mem.epfindia.gov.in/memberinterface/.ಗೆ ಭೇಟಿ ನೀಡಿ.  ನಿಮ್ಮ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಇಲ್ಲಿ ಲಾಗ್ ಇನ್ ಮಾಡಿ. ಈಗ 'ಮ್ಯಾನೇಜ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್ ಡೌನ್ ಮೆನು ನಿಮ್ಮ ಮುಂದೆ ಕಾಣಿಸುತ್ತದೆ. ಈ ಮೆನುವಿನಲ್ಲಿ ಡಾಕ್ಯುಮೆಂಟ್ಸ್‌ ಅನ್ನು ಆಯ್ಕೆಮಾಡಿ. ಇಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು IFSC ವಿವರಗಳನ್ನು ನಮೂದಿಸಿ ಮತ್ತು ಸೇವದ ಮೇಲೆ ಕ್ಲಿಕ್ ಮಾಡಿ. ಬ್ಯಾಂಕ್ ಖಾತೆಯ ವಿವರಗಳನ್ನು ಸೇವ್‌ ಮಾಡಿದ ನಂತರ 'ಅನುಮೋದನೆಗಾಗಿ KYC ಪೆಂಡಿಂಗ್‌ ಫಾರ್‌ ಅಪ್ರೂವಲ್‌ ಕಾಣಿಸುತ್ತದೆ. ಉದ್ಯೋಗದಾತರಿಂದ ಅನುಮೋದನೆ ಪಡೆದ ನಂತರ, KYC ಕಾಣಿಸುತ್ತದೆ.   

3 /5

ಇಪಿಎಫ್‌ಒ ಸದಸ್ಯರ ಬ್ಯಾಂಕ್ ಖಾತೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿದ್ದರೆ, ಅದನ್ನು ಬ್ಯಾಂಕ್ ಸ್ವತಃ ಡಿಜಿಟಲ್ ಮೂಲಕ ಪರಿಶೀಲಿಸುತ್ತದೆ. ಎಸ್‌ಬಿಐ ಗ್ರಾಹಕರು ಈ ವಿಶೇಷ ಸೌಲಭ್ಯವನ್ನು ಪಡೆಯುತ್ತಾರೆ. 

4 /5

ಉದ್ಯೋಗದಾತ ಅಥವಾ SBI ಯಿಂದ ವಿವರಗಳನ್ನು ಪರಿಶೀಲಿಸಿದ ನಂತರ, ಸದಸ್ಯರು EPFO ​​ನಿಂದ ದೃಢೀಕರಿಸಿದ  ಸಂದೇಶವನ್ನು ಪಡೆಯುತ್ತಾರೆ.

5 /5

ಉದ್ಯೋಗದಾತನು ಬ್ಯಾಂಕ್ ವಿವರಗಳ ನವೀಕರಣ ವಿನಂತಿಗೆ ಪ್ರತಿಕ್ರಿಯಿಸದಿದ್ದರೆ, ಮೊದಲು ನಿಮ್ಮ ಮಾನವ ಸಂಪನ್ಮೂಲ ಇಲಾಖೆ ಅಥವಾ ಆಡಳಿತ ಅಥವಾ ಹಿರಿಯ ಅಧಿಕಾರಿಗಳಿಗೆ ತಿಳಿಸಿ. ಇಷ್ಟಾಗಿಯೂ ಕಂಪನಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನೀವು ಅದರ ಬಗ್ಗೆ EPF Grievanceಗೆ ದೂರು ನೀಡಬಹುದು.