Photo Gallery: ದೇಶವ್ಯಾಪಿ ರೈತರು ಕರೆ ನೀಡಿದ್ದ ಭಾರತ ಬಂದ್ ಹೇಗಿತ್ತು ಪ್ರತಿಕ್ರಿಯೆ


ತಮಿಳುನಾಡು, ಛತ್ತೀಸ್‌ಗಡ್,  ಕೇರಳ, ಪಂಜಾಬ್, ಜಾರ್ಖಂಡ್ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಬಂದ್‌ಗೆ ತಮ್ಮ ಬೆಂಬಲವನ್ನು ವಿಸ್ತರಿಸಿದ್ದು, ಈ ರಾಜ್ಯಗಳಲ್ಲಿ ಪ್ರತಿಭಟನೆಯ ಪರಿಣಾಮ ಕಂಡುಬಂದಿದೆ.

1 /4

ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ವಾಹನಗಳನ್ನು ದೆಹಲಿ ಪೊಲೀಸರು ಮತ್ತು ಅರೆಸೇನಾಪಡೆ ಯೋಧರು ತಪಾಸಣೆ ನಡೆಸುತ್ತಿದ್ದಂತೆ ಗುರುಗ್ರಾಮ್-ದೆಹಲಿ ಗಡಿಯಲ್ಲಿ ಭಾರೀ ಸಂಚಾರ ದಟ್ಟಣೆ ಕಂಡುಬಂದಿದೆ.

2 /4

ದೆಹಲಿ ನೋಯ್ಡಾ ಡೈರೆಕ್ಟ್ (ಡಿಎನ್‌ಡಿ) ಫ್ಲೈವೇ ಯಲ್ಲಿಯೂ ಕೂಡ ಭಾರೀ ಸಂಚಾರ ದಟ್ಟಣೆಗೆ ಸಾಕ್ಷಿಯಾಯಿತು. ಆದಾಗ್ಯೂ, ಗುರುಗ್ರಾಮ-ದೆಹಲಿ ಗಡಿ ಮತ್ತು ಡಿಎನ್‌ಡಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು

3 /4

ಆಂದೋಲನ ನಡೆಸುತ್ತಿರುವ ರೈತರಿಗೆ ತನ್ನ ಬೆಂಬಲವನ್ನು ವಿಸ್ತರಿಸಿರುವ ಕಾಂಗ್ರೆಸ್, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ಯೋಚಿಸಬೇಕು ಎಂದು ಹೇಳಿದೆ.

4 /4

ಭಾರತ್ ಬಂದ್ ಕರೆಗೆ ಬೆಂಬಲ ನೀಡಲು ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್, ಭಾರತೀಯ ಟ್ರೇಡ್ ಯೂನಿಯನ್ ಸೆಂಟರ್ ಮತ್ತು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಬೆಂಬಲ ಸೂಚಿಸಿದ್ದವು.