ಪ್ರಸ್ತುತ, ಶನಿ ಮತ್ತು ಗುರು ಮಕರ ರಾಶಿ ಪ್ರವೇಶಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ಗುರು ಗ್ರಹಗಳನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ.
ನವದೆಹಲಿ : ಪ್ರಸ್ತುತ, ಶನಿ ಮತ್ತು ಗುರು ಮಕರ ರಾಶಿ ಪ್ರವೇಶಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ಗುರು ಗ್ರಹಗಳನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಗುರು ಮತ್ತು ಶನಿ ಒಂದೇ ರಾಶಿಗೆ ಪ್ರವೇಶವಾಗುವುದೆಂದರೆ, ಮಂಗಳಕರ ಯೋಗ ರೂಪುಗೊಳ್ಳುತ್ತದೆ ಎಂದರ್ಥ. ಕೆಲವು ರಾಶಿಚಕ್ರ ಚಿಹ್ನೆಗಳು ಈ ಶುಭ ಯೋಗದ ಸೃಷ್ಟಿಯಿಂದ ಪ್ರಯೋಜನ ಪಡೆಯಲಿವೆ. ಜ್ಯೋತಿಷ್ಯದಲ್ಲಿ ಶನಿಯನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಶನಿಯ ಅಶುಭ ಪರಿಣಾಮಗಳಿಂದ ವ್ಯಕ್ತಿ ಬಹಳ ಕೆಟ್ಟದಾಗಿ ಪ್ರಭಾವಿತವಾಗುತ್ತಾನೆ, ಆದರೆ ಶನಿ ಕೇವಲ ಅಶುಭ ಫಲಿತಾಂಶಗಳನ್ನು ಮಾತ್ರ ನೀಡುವುದಿಲ್ಲ. ಶನಿ ಕೂಡ ಶುಭ ಫಲಿತಾಂಶಗಳನ್ನು ನೀಡುತ್ತಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶನಿಯು ಮಂಗಳಕರವಾಗಿದ್ದಾಗ ವ್ಯಕ್ತಿಯ ಭವಿಷ್ಯ ಬದಲಾಗುತ್ತದೆ. ಶನಿಯ ಶುಭ ನೆರಳು ಯಾರ ಮೆಲೆ ಬೀಳುತ್ತದೆಯೋ ಅವರು ಜೀವನದಲ್ಲಿ ರಾಜವೈಭೋಗ ಪಡೆಯುತ್ತಾನೆ. ಮತ್ತೊಂದೆಡೆ, ದೇವಗುರು ಬೃಹಸ್ಪತಿಯು ಜ್ಞಾನ, ಶಿಕ್ಷಕ, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಗ್ರಹ ಎಂದು ಹೇಳಲಾಗುತ್ತದೆ. ಗುರು ಮಂಗಳಕರವಾಗಿದ್ದಾಗ, ವ್ಯಕ್ತಿಯ ಜೀವನವು ಸಂತೋಷವಾಗಿರುತ್ತದೆ. ಈ ಬಾರಿ ಕೆಲವು ರಾಶಿಚಕ್ರದವರು ಶನಿ ಮತ್ತು ಗುರುಗಳ ಸಂಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ.
ಮೇಷ ರಾಶಿಯವರಿಗೆ, ಗುರು ಮತ್ತು ಶನಿ ಒಂದೇ ರಾಶಿಯಲ್ಲಿ ಬರುವುದು ಅತ್ಯಂತ ಶುಭ ಫಲವನ್ನು ನೀಡುತ್ತದೆ. ಲಕ್ಷ್ಮಿಯ ಕೃಪೆಯಿಂದ ಹಣಕಾಸಿನ ಭಾಗವು ಬಲವಾಗಿರುತ್ತದೆ. ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಬಡ್ತಿ ಸಿಗಲಿದೆ. ಅವರ ಆರೋಗ್ಯ ಉತ್ತಮವಾಗಿರುತ್ತದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಅಲ್ಲದೆ, ಈ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ವೃಷಭ ರಾಶಿಯವರಿಗೆ, ಗುರು ಮತ್ತು ಶನಿ ಒಂದೇ ರಾಶಿಯಲ್ಲಿ ಬರುವುದೆಂದರೆ ವರವೇ ಸರಿ. ಈ ರಾಶಿಯವರು ಲಕ್ಷ್ಮಿಯ ವಿಶೇಷ ಅನುಗ್ರಹ ಪಡೆಯುತ್ತಾರೆ. ವೃಷಭ ರಾಶಿಯವರಿಗೆ ಉದ್ಯೋಗ ಮತ್ತು ವ್ಯಾಪಾರಕ್ಕೂ ಇದು ಶುಭ ಸಮಯ. ಹೂಡಿಕೆಯಿಂದ ಲಾಭ ಇರುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು ಇರುತ್ತದೆ.
ಕರ್ಕ ರಾಶಿಯವರಿಗೆ, ಗುರು ಮತ್ತು ಶನಿ ಒಂದೇ ರಾಶಿಯಲ್ಲಿ ಬರುವುದು ಶುಭಕರವಾಗಿರುತ್ತದೆ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಲಕ್ಷ್ಮಿಯ ಕೃಪೆಯಿಂದ ಆರ್ಥಿಕ ಲಾಭವಾಗುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಈ ಸಮಯದಲ್ಲಿ, ಕರ್ಕಾಟಕ ರಾಶಿಯವರ ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ.
ಗುರು ಮತ್ತು ಶನಿ ಒಂದೇ ರಾಶಿಯಲ್ಲಿ ಬರುವುದರಿಂದ ಮೀನ ರಾಶಿಯವರೂ ಪ್ರಯೋಜನ ಪಡೆಯುತ್ತಾರೆ. ಈ ರಾಶಿಯವರ ಮೇಲೆ ಲಕ್ಷೀ ಕಟಾಕ್ಷ ಹೆಚ್ಚೇ ಆಗಲಿದೆ. ವಹಿವಾಟುಗಳಿಗೆ ಈ ಸಮಯ ಶುಭಕರವಾಗಿರುತ್ತದೆ. ನೀವು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವಿರಿ ಮತ್ತು ಕುಟುಂಬದ ಸದಸ್ಯರ ಬೆಂಬಲವನ್ನೂ ಪಡೆಯುತ್ತೀರಿ. ವೈವಾಹಿಕ ಜೀವನ ಸುಖಕರವಾಗಿರುತ್ತದೆ.