ವಾಸ್ತು ಉಪಾಯ: ಮನೆ-ಕಚೇರಿಯ ಪ್ರಗತಿಗೆ ಈ ವಸ್ತುಗಳನ್ನು ತಕ್ಷಣವೇ ತೆಗೆದುಹಾಕಿ

ಅರ್ಹತೆಯ ಹೊರತಾಗಿಯೂ ನೀವು ಬಡ್ತಿ-ಉನ್ನತಿ ಪಡೆಯದಿದ್ದರೆ ಪ್ರಗತಿಗೆ ಅಡ್ಡಿಪಡಿಸುವಂತಹ ಯಾವುದೇ ವಸ್ತುಗಳನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಬಾರದು.

ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ನಂತರವೂ ಅನೇಕ ಬಾರಿ ಒಬ್ಬ ವ್ಯಕ್ತಿಯು  ಉನ್ನತಿ, ಸ್ಥಾನಮಾನ ಹಾಗೂ ಆರ್ಥಿಕವಾಗಿ ಬೆಳವಣಿಗೆಯಾಗುವುದಿಲ್ಲ. ಆದರೆ ಇವುಗಳನ್ನು ಪಡೆಯಲು ಆತ ಸಂಪೂರ್ಣವಾಗಿ ಅರ್ಹನಾಗಿರುತ್ತಾನೆ. ಅನೇಕ ಸಲ ಜಾತಕದ ಗ್ರಹ ಪರಿಸ್ಥಿತಿಗಳು ಮತ್ತು ಗೃಹ ಕಚೇರಿಯ ವಾಸ್ತು ದೋಷಗಳು ಇದಕ್ಕೆ ಕಾರಣವಾಗಿರುತ್ತದೆ. ನಿಮ್ಮ ಅರ್ಹತೆಯ ಹೊರತಾಗಿಯೂ ನೀವು ಬಡ್ತಿ-ಉನ್ನತಿ ಪಡೆಯದಿದ್ದರೆ ನಿಮ್ಮ ಪ್ರಗತಿಗೆ ಅಡ್ಡಿಪಡಿಸುವಂತಹ ಯಾವುದೇ ವಸ್ತುಗಳನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಬಾರದು. ನಿಮ್ಮ ಸುತ್ತಲೂ ಈ ರೀತಿಯ ವಸ್ತುಗಳು ಇವೆಯೇ ಎಂದು ಮನೆ-ಕಚೇರಿ ವಾಸ್ತುಗಳನ್ನು ಒಮ್ಮೆ ಪರಿಶೀಲಿಸಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೃತಕ ಹೂವುಗಳು ಅಥವಾ ಗಿಡಗಳನ್ನು ಮನೆ ಅಥವಾ ಕಚೇರಿಯಲ್ಲಿ ಇಡಬಾರದು. ನಕಲಿ ಸಸ್ಯಗಳು ಮತ್ತು ಹೂವುಗಳು ಪರಿಸರದಲ್ಲಿ ನಕಾರಾತ್ಮಕತೆಯನ್ನು ತರುತ್ತವೆ.

2 /5

ಯಾವುದೇ ವ್ಯಕ್ತಿಯು ವ್ಯಾಪಾರದಲ್ಲಿರಲಿ ಅಥವಾ ಉದ್ಯೋಗದಲ್ಲಿರಲಿ ಯಾವಾಗಲೂ ತನ್ನ ಕೆಲಸದ ಸ್ಥಳದಲ್ಲಿ ಸ್ಕ್ವೇರ್ ಟೇಬಲ್ ಬಳಸಬೇಕು. ಇದು ಸಾಧ್ಯವಾಗದಿದ್ದರೆ ಮೇಜಿನ ಕೆಳಗೆ ಒಂದು ಸ್ಕ್ವೇರ್ ಚಾಪೆಯನ್ನು ಹಾಕಿಕೊಂಡು ಬಳಸಬೇಕು.

3 /5

ವಾಸ್ತು ಶಾಸ್ತ್ರದಲ್ಲಿ ಮುರಿದ ಟೇಬಲ್-ಕುರ್ಚಿ, ಬೀರು ಇತ್ಯಾದಿ ಪೀಠೋಪಕರಣಗಳು ಮತ್ತು ಕೆಟ್ಟ ಗಡಿಯಾರವನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಒಂದೋ ಈ ಕೆಟ್ಟ ವಸ್ತುಗಳನ್ನು ತಕ್ಷಣವೇ ಸರಿಪಡಿಸಿ, ಇಲ್ಲದಿದ್ದರೆ ಅವುಗಳನ್ನು ಮನೆಯ ಕಚೇರಿಯಿಂದ ಹೊರಹಾಕಿ.

4 /5

ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಮುರಿದ ಕನ್ನಡಿಯನ್ನು ಇರಿಸಬೇಡಿ. ಇಲ್ಲದಿದ್ದರೆ ನಿಮಗೆ ಜೀವನದಲ್ಲಿ ಒಂದರ ನಂತರ ಒಂದರಂತೆ ತೊಂದರೆಗಳು ಬರುತ್ತವೆ.

5 /5

ತಾಜ್ ಮಹಲ್ ಫೋಟೋ ಅಥವಾ ಯಾವುದೇ ಕಲಾಕೃತಿಯನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಇರಿಸಬೇಡಿ. ಇದು ತುಂಬಾ ಸುಂದರವಾಗಿದ್ದರೂ ಸಹ ಸಮಾಧಿಯು ವಾತಾವರಣದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. (ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ ಎಂದು ತಿಳಿಸುತ್ತೇವೆ.)