ZEEL-Sony MEGA Merger Deal: ವಿಲೀನ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿ ಮುಂದುವರಿಯಲಿರುವ ಪುನೀತ್ ಗೋಯೆಂಕಾ

ಸೋನಿ(Sony Network)ಯಂತಹ ದೊಡ್ಡ ಅಂತಾರಾಷ್ಟ್ರೀಯ ಮಾಧ್ಯಮ ಸಮೂಹವು ಪುನೀತ್ ಗೋಯೆಂಕಾರ ಬಗ್ಗೆ ಅಪಾರ ವಿಶ್ವಾಸವನ್ನು ಇಟ್ಟಿದೆ ಎಂದು ಜೀ ಬಿಸಿನೆಸ್ ಮ್ಯಾನೇಜಿಂಗ್ ಎಡಿಟರ್ ಅನಿಲ್ ಸಿಂಘ್ವಿ ಹೇಳಿದ್ದಾರೆ.

Written by - Zee Kannada News Desk | Last Updated : Sep 22, 2021, 06:38 PM IST
  • ZEEL ಮತ್ತು SPNI ನಡುವಿನ ವಿಲೀನವನ್ನು Win-Win Deal ಎಂದು ಪರಿಗಣಿಸಲಾಗಿದೆ
  • ವಿಲೀನಗೊಂಡಿರುವ ಸಂಸ್ಥೆಯ ಸಿಇಒ ಮತ್ತು ಎಂಡಿಯಾಗಿ ಮುಂದುವರಿಯಲಿರುವ ಪುನೀತ್ ಗೋಯೆಂಕಾ
  • 2 ಕಂಪನಿಗಳ ವಿಲೀನದಿಂದ Content, Distribution ಮತ್ತು ಪರಸ್ಪರ Digital Space ಹಂಚಿಕೊಳ್ಳಲು ಸಾಧ್ಯವಾಗಲಿದೆ
ZEEL-Sony MEGA Merger Deal: ವಿಲೀನ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿ ಮುಂದುವರಿಯಲಿರುವ ಪುನೀತ್ ಗೋಯೆಂಕಾ title=
ವಿಲೀನ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿ ಪುನೀತ್ ಗೋಯೆಂಕಾ

ನವದೆಹಲಿ: ಪುನೀತ್ ಗೋಯೆಂಕಾ(Punit Goenka) ಅವರು ವಿಲೀನಗೊಂಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಮುಂದುವರಿಯಲಿದ್ದಾರೆ. ಜೀ ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ (SPNI) ವಿಲೀನಕ್ಕೆ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ (ZEEL) ನಿರ್ದೇಶಕರ ಮಂಡಳಿಯು ಸರ್ವಾನುಮತದಿಂದ ತಾತ್ವಿಕ ಒಪ್ಪಿಗೆ ಸೂಚಿಸಿದೆ.   

‘ವಿಲೀನಗೊಂಡ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ(MD and CEO) ಆಗಿ ಪುನೀತ್ ಗೋಯೆಂಕಾ(Punit Goenka) ಮುಂದುವರಿದಿದ್ದು, ಇದು ವಿಲೀನದ ಅವಿಭಾಜ್ಯ ಅಂಗವಾಗಿದೆ’ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು ನಾಯಕತ್ವ ವಹಿಸಿಕೊಳ್ಳುವ ಟಾಪ್ ಮ್ಯಾನೆಜ್​ಮೆಂಟ್​ ನಿಂದ ನಡೆಸಲ್ಪಡುತ್ತದೆ. ಪುನೀತ್ ಗೋಯೆಂಕಾ ಅವರು ಜೀ ಎಂಟರ್‌ಟೈನ್‌ಮೆಂಟ್‌(Zee Entertainment)ಗಾಗಿ ಇದನ್ನು ಮಾಡಿದ್ದಾರೆ ಎಂದು ಜೀ ಬಿಸಿನೆಸ್ ಮ್ಯಾನೇಜಿಂಗ್ ಎಡಿಟರ್ ಅನಿಲ್ ಸಿಂಘ್ವಿ ಹೇಳಿದ್ದಾರೆ. ಸೋನಿ ಕಂಪನಿಯು ಸಂಸ್ಥೆಗೆ ಪುನೀತ್ ಗೋಯೆಂಕಾ ಅವರು ನೀಡಿದ ಕೊಡುಗೆ ಮತ್ತು ಅವರ ಮಹತ್ವದ ಪಾತ್ರವನ್ನು ಗುರುತಿಸಿದೆ ಎಂದು ಸಿಂಘ್ವಿ ತಿಳಿಸಿದ್ದಾರೆ.

ಸೋನಿ(Sony Network)ಯಂತಹ ದೊಡ್ಡ ಅಂತಾರಾಷ್ಟ್ರೀಯ ಮಾಧ್ಯಮ ಸಮೂಹವು ಪುನೀತ್ ಗೋಯೆಂಕಾರ ಬಗ್ಗೆ ಅಪಾರ ವಿಶ್ವಾಸವನ್ನು ಇಟ್ಟಿದೆ. ಜೀ ಎಂಟರ್‌ಟೈನ್‌ಮೆಂಟ್ ಮಾತ್ರವಲ್ಲದೆ ವಿಲೀನಗೊಂಡ ಸಂಸ್ಥೆಯನ್ನು ನಡೆಸುವಂತೆ ಅವರನ್ನು ಕೇಳಿಕೊಂಡಿದೆ ಎಂದು ಸಿಂಘ್ವಿ ಹೇಳಿದ್ದಾರೆ. ವಿಲೀನಗೊಂಡ ಸಂಸ್ಥೆಯಲ್ಲಿ ಸೋನಿ ಹೆಚ್ಚಿನ ಪಾಲನ್ನು ಹೊಂದಿರುತ್ತದೆ.

ತನ್ನ ಭಾರತೀಯ ಮನರಂಜನಾ ಉದ್ಯಮವನ್ನು ಪುನೀತ್ ಗೋಯೆಂಕಾ(Punit Goenka) ಅವರು ನಿರ್ವಹಿಸಲಿದ್ದಾರೆ ಎಂದು ಸೋನಿ ಕಂಪನಿ ಹೇಳಿದೆ. ಈ ಬೆಳವಣಿಗೆಯು ಜೀ ಎಂಟರ್‌ಟೈನ್‌ಮೆಂಟ್‌ನ ಟಾಪ್ ಮ್ಯಾನೆಜ್​ಮೆಂಟ್​ ಅನುಮೋದನೆ ರೇಟಿಂಗ್‌ಗೆ ಪ್ರಮಾಣಪತ್ರ ನೀಡುವ ಅಗತ್ಯತೆ ಇಲ್ಲ ಎಂಬುದನ್ನು ಸಾರುತ್ತದೆ. ಜೀ ಎಂಟರ್‌ಟೈನ್‌ಮೆಂಟ್‌ನ ಮ್ಯಾನೆಜ್​ಮೆಂಟ್​ ನಲ್ಲಿ ಈ ಮಟ್ಟದ ವಿಶ್ವಾಸ ಮೂಡಲು ಒಂದು ಕಾಲದಲ್ಲಿ ತನ್ನ ದೊಡ್ಡ ಸ್ಪರ್ಧಿಗಳಲ್ಲಿ ಒಂದಾಗಿದ್ದ ಕಂಪನಿಯು ಅಭೂತಪೂರ್ವ ಬೆಂಬಲ ಸೂಚಿಸಿರುವುದು ಕಾರಣ ಎಂದು ಸಿಂಘ್ವಿ ಹೇಳಿದ್ದಾರೆ.

 ಇದನ್ನೂ ಓದಿ: Zeel-Sony Merger: ಜೀಲ್ ಮತ್ತು ಸೋನಿ ಪಿಕ್ಚರ್ಸ್ ವಿಲೀನ ಘೋಷಣೆ, ಮಂಡಳಿಯಿಂದ ತಾತ್ವಿಕ ಅನುಮೋದನೆ

‘ಮುಂಬರುವ ದಿನಗಳಲ್ಲಿ ಕೆಲವು ಸ್ಪರ್ಧಾತ್ಮಕವಲ್ಲದ ವ್ಯವಸ್ಥೆಗಳನ್ನು ZEEL ನ ಪ್ರವರ್ತಕರು(Promoter) ಮತ್ತು SPNI ನ ಪ್ರವರ್ತಕರ ನಡುವೆ ಮಾಡಿಕೊಳ್ಳಲಾಗುವುದು.  ಟರ್ಮ್ ಶೀಟ್‌ನ ಪ್ರಕಾರ ಸಾಮಾನ್ಯ ವ್ಯವಹಾರದ ಸಂದರ್ಭದಲ್ಲಿ ಪ್ರಮೋಟರ್ಸ್ ಕುಟುಂಬವು ತನ್ನ ಷೇರುಗಳನ್ನು ಪ್ರಸ್ತುತ ~4 ರಿಂದ 20 ಪ್ರತಿಶತದವರೆಗೆ ಹೆಚ್ಚಿಸಲು ಮುಕ್ತವಾಗಿದೆ. ವಿಲೀನಗೊಂಡ ಸಂಸ್ಥೆಯ ಬಹುಪಾಲು ನಿರ್ದೇಶಕರ ಮಂಡಳಿಯನ್ನು ಸೋನಿ ಗ್ರೂಪ್ ನಾಮನಿರ್ದೇಶನ ಮಾಡುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೋನಿ ಪಿಕ್ಚರ್ಸ್‌(Sony Network Pictures)ನ ಷೇರುದಾರರು ವಿಲೀನಗೊಂಡ ಜೀ ಎಂಟರ್​ಟೇನ್​ಮೆಂಟ್​ನಲ್ಲಿ ಹೆಚ್ಚಿನ ಪಾಲನ್ನು ಹೊಂದಿರುತ್ತಾರೆ. ವಿಲೀನದ ಭಾಗವಾಗಿ ಅವರು SPNIಗೆ ಬೆಳವಣಿಗೆಯ ಬಂಡವಾಳವನ್ನು ಹೂಡಲಿದ್ದಾರೆ. SPNIನ parent company ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್‌ನ ಮನರಂಜನಾ ಉದ್ಯಮದ ಬೆಳವಣಿಗೆ ಮತ್ತು ಬಳಕೆಗೆ 1.575 ಬಿಲಿಯನ್ ಅಮೆರಿನ್ ಡಾಲರ್ ಬಂಡವಾಳ ಹೂಡಲಿದೆ. ಪ್ರಸ್ತುತ ZEEL ಹಾಗೂ SPNIನ ಅಂದಾಜು ಈಕ್ವಿಟಿ ಮೌಲ್ಯವನ್ನು ನೋಡುವುದಾದದರೆ ಸಾಂಕೇತಿಕವಾಗಿ ವಿಲೀನ ಅನುಪಾತವು ಶೇ.61.25ರಷ್ಟು ZEEL ಪರವಾಗಿದೆ.

ಸದ್ಯ ಇದೀಗ SPNIಗೆ ಬೆಳವಣಿಗೆ ಬಂಡವಾಳ ಪೂರೈಕೆ ಪ್ರಸ್ತಾವದೊಂದಿಗೆ ವಿಲೀನ ಅನುಪಾತವು ZEELನ ಷೇರುದಾರರಿಗೆ ಶೇ.47.07 ರಷ್ಟು ಮತ್ತು ಬಾಕಿ ಶೇ.52.93ರಷ್ಟು ವಿಲೀನಗೊಂಡ ಸಂಸ್ಥೆಯ ಪಾಲು SPNI ಷೇರುದಾರರಿಗೆ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ZEEL ಮತ್ತು SPNI ನಡುವಿನ ವಿಲೀನವನ್ನು Win-Win Deal ಎಂದು ಪರಿಗಣಿಸಲಾಗಿದೆ. ಏಕೆಂದರೆ ಎರಡೂ ಕಂಪನಿಗಳು ಈಗ Content, Distribution ಮತ್ತು ಪರಸ್ಪರ Digital Space ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಈ ವಿಲೀನದಿಂದ ದಕ್ಷಿಣ ಏಷ್ಯಾದ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾಗಿ ಹೆಚ್ಚಿನ ಬೆಳವಣಿಗೆ ಮತ್ತು ಲಾಭದಾಯಕ ಗುರಿ ಸಾಧಿಸುವ ZEELನ ತಂತ್ರಕ್ಕೆ ಅನುಗುಣವಾಗಿದೆ. ಅಗತ್ಯ ಪರಿಶ್ರಮ ಪ್ರಕ್ರಿಯೆ ಸಕ್ರಿಯಗೊಳಿಸಲು ZEEL ನಿರ್ವಹಣೆಗೆ ಮಂಡಳಿಯು ಅಧಿಕಾರ ನೀಡಿದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

(Disclaimer: Zee Entertainment is not our sister concern/group company. Though our names sound similar but our company is owned by Zee Media Corporation, which is a different group.)

 

Trending News