ನವದೆಹಲಿ: ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶಗಳಲ್ಲಿ 990 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಜೈಸಲ್ಮೇರ್ ಗ್ರಾಮೀಣ ಪ್ರತಿಭೆ ಐಎಎಸ್ ಪರೀಕ್ಷೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಐಎಎಸ್ ಪರೀಕ್ಷೆಯಲ್ಲಿ 82ನೇ ಸ್ಥಾನ ಪಡೆದಿರುವ ದೇಶಲ್ ದಾನ್ ಜೈಸಲ್ಮೇರ್ ನ ಸಮ್ಲಿಯನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರ ತಂದೆ ಕುಟ್ಟಾಡನ್ ಚರ್ನಾ, ಜೈಸಲ್ಮೇರ್ನಲ್ಲಿ ಚಹಾ ಮಳಿಗೆಯನ್ನು ನಡೆಸುತ್ತಿದ್ದಾರೆ. ಓರ್ವ ಚಹಾ ಮಾರುವ ವ್ಯಕ್ತಿ ತನ್ನ ಮಗನಿಗೆ ನೀಡಿರುವ ಗಮನ ಇಂದು ಆತನ ಮಗನನ್ನು ಐಎಎಸ್ ಅಧಿಕಾರಿಯಾಗುವಂತೆ ಮಾಡಿದೆ. ಜೈಸಲ್ಮೇರ್ ನಂತಹ ಬಾರ್ಡರ್ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸೌಲಭ್ಯಗಳು ದೊರೆಯುವುದಿಲ್ಲವಾದರೂ ದೇಶಲ್ ದಾನ್ ಅವರ ಐಎಎಸ್ ಆಯ್ಕೆ ಹೆಮ್ಮೆಯ ವಿಷಯವಾಗಿದೆ.
ಐಎಎಸ್ ತಯಾರಿಗಾಗಿ ನಾಲ್ಕು ವರ್ಷದ ಮಗುವಿನಿಂದ ದೂರ ಇರುವ 'ಅನುಕುಮಾರಿ'
ಎರಡನೇ ರ್ಯಾಂಕ್ ಪಡೆದಿರುವ ಅಭ್ಯರ್ಥಿ ಅನು ಕುಮಾರಿ ಐಎಎಸ್ ತಯಾರಿಗಾಗಿ ನಾಲ್ಕು ವರ್ಷದ ಮಗುವಿನಿಂದ ದೂರವಿದ್ದು ಪೂರ್ವಾಭ್ಯಾಸ ಮಾಡಿದ್ದಾರೆ. ಅವರು ಮೊದಲು ಕೆಲಸ ಮಾಡುತ್ತಿದ್ದರು. ಸೋನಿಪತ್ ನಲ್ಲಿ ಶಾಲಾ ವಿದ್ಯಾಭಾಸ ಪೂರ್ಣಗೊಳಿಸಿರುವ ಅನು, ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಭೌತಶಾಸ್ತ್ರ ಪದವೀದರರು. ನಾಗ್ಪುರದ ಐಎಂಟಿಯಲ್ಲಿ ಎಂಬಿಎ ಓದಿದ್ದಾರೆ.