ನವದೆಹಲಿ: Covid-19 Vaccine - ಕೋವಿಡ್ -19 ವಿರುದ್ಧ ಕೋವಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡ ಜನರಲ್ಲಿ 2 ತಿಂಗಳ ನಂತರ ಪ್ರತಿಕಾಯಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ಕೋವಿಶೀಲ್ಡ್ ಡೋಸ್ ತೆಗೆದುಕೊಳ್ಳುವವರಲ್ಲಿ, ಪ್ರತಿಕಾಯಗಳ ಮಟ್ಟವು 3 ತಿಂಗಳ ನಂತರ ಕಡಿಮೆಯಾಗಲು ಆರಂಭವಾಗುತ್ತದೆ. ಈ ಮಾಹಿತಿಯನ್ನು ಇತ್ತೀಚೆಗೆ ಭುವನೇಶ್ವರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (RMRC) ನಡೆಸಿರುವ ಅಧ್ಯಯನದಲ್ಲಿ ಕಂಡು ಬಂದಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು ಭಾರತ್ ಬಯೋಟೆಕ್ (Bharat Biotech)ನ ಈ ಎರಡೂ ಲಸಿಕೆಗಳನ್ನು ದೇಶದಲ್ಲಿ ಜನವರಿ 16 ರಿಂದ ಆರಂಭವಾದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಹೆಚ್ಚು ಬಳಸಲಾಗುತ್ತಿದೆ.
ಈ ಕುರಿತು ಆಂಗ್ಲ ಮಾಧ್ಯಮವೊಂದರ ಜೊತೆಗೆ ಸಂವಾದ ನಡೆಸಿರುವ ICMR-RMRC ವಿಜ್ಞಾನಿ ಡಾ. ದೇವದತ್ತ ಭಟ್ಟಾಚಾರ್ಯ (Dr. Devadatta Bhattaacharya), ಈ ಅಧ್ಯಯನವನ್ನು ಒಟ್ಟು 614 ಜನರ ಮೇಲೆ ನಡೆಸಲಾಗಿದ್ದು, ಭಾಗವಹಿಸಿದವರಲ್ಲಿ ಶೇ.50.2 ರಷ್ಟು ಅಂದರೆ 308 ಜನರು ಕೊವಿಶಿಲ್ದ್ ಹಾಕಿಸಿಕೊಂಡಿದ್ದಾರೆ, ಶೇ.49.8 ರಷ್ಟು ಅಂದರೆ 306 ಜನರು ಕೊವ್ಯಾಕ್ಸಿನ್ ಲಸಿಕೆಯನ್ನು (Covid-19 Vaccination) ಹಾಕಿಸಿಕೊಂಡಿದ್ದರು. ಈ ಅವಧಿಯಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ (ಅಂದರೆ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕವು ಸೋಂಕು ಹರಡಿದ) ನ ಒಟ್ಟು 81 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ.
ಇದನ್ನೂ ಓದಿ-ಮದ್ಯ ಖರೀದಿಸಬೇಕೆಂದರೆ ನೀವು ಎರಡು ಡೋಸ್ ಕೊರೊನಾ ಲಸಿಕೆ ಪಡೆದಿರಲೇಬೇಕು..!
ಉಳಿದ 533 ಆರೋಗ್ಯ ಕಾರ್ಯಕರ್ತರು ಪ್ರತಿಕಾಯಗಳ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಎಂದು ಅಧ್ಯಯನ ಸಾಬೀತುಪಡಿಸಿದೆ. ವ್ಯಾಕ್ಸಿನೇಷನ್ ಮಾಡುವ ಮೊದಲು ಈ ಸಿಬ್ಬಂದಿಯಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ಪ್ರತಿಕಾಯಗಳ ನಿರಂತರತೆಯ ಬಗ್ಗೆ ಮಾಹಿತಿ ಪಡೆಯಲು ಸುಮಾರು 2 ವರ್ಷಗಳ ಕಾಲ ಅಧ್ಯಯನ ಮಾಡಲು ಯೋಜಿಸುತ್ತಿರುವುದಾಗಿ ಡಾ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ. 'ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಪ್ರತಿಕಾಯದ ಮಟ್ಟವು ಎರಡು ತಿಂಗಳ ಪೂರ್ಣ ವ್ಯಾಕ್ಸಿನೇಷನ್ ನಂತರ ಕಡಿಮೆಯಾಗುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ, ಕೋವಿಶೀಲ್ಡ್ ತೆಗೆದುಕೊಳ್ಳುವವರಲ್ಲಿ, ಈ ಅವಧಿ 3 ತಿಂಗಳುಗಳದ್ದಾಗಿದೆ ಎಂದು ಡಾ. ಭಟ್ಟಾಚಾರ್ಯ ಹೇಳಿದ್ದಾರೆ.
ಈ ಅಧ್ಯಯನವನ್ನು IgGಯನ್ನು ಪತ್ತೆ ಮಾಡಲು ಮಾಡಲಾಗಿದೆ. IgG ಅಂದರೆ ಇಮ್ಯುನೊಗ್ಲಾಬ್ಯುಲಿನ್ ಜಿ, ಇದನ್ನು ಅತ್ಯಂತ ಸಾಮಾನ್ಯವಾದ ಪ್ರತಿಕಾಯ ಎಂದು ಕರೆಯಲಾಗುತ್ತದೆ. ಅಧ್ಯಯನದಲ್ಲಿ ಭಾಗವಹಿಸಿದವರು ತಮ್ಮ ಮೊದಲ ಡೋಸ್ ಪಡೆದ ನಂತರ 24 ವಾರಗಳ ಕಾಲ ಟೈಟ್ರೆ ಸೇರಿದಂತೆ ಹಲವು ಮಾಹಿತಿಯನ್ನು ದಾಖಲಿಸಲಾಗಿದೆ. ಈ ಅಧ್ಯಯನವು ಮಾರ್ಚ್ 2021 ರಲ್ಲಿ ಆರಂಭವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಆಂಗ್ಲ ಮಾಧ್ಯಮದ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ಡಾ. ಭಟ್ಟಾಚಾರ್ಯ ಅವರು ಬೂಸ್ಟರ್ ಶಾಟ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ವೈಜ್ಞಾನಿಕ ಪುರಾವೆಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ. ಈ ಅಧ್ಯಯನದ ಮುಂದಿನ ಪ್ರಕ್ರಿಯೆಯು ಅಂತಹ ಪುರಾವೆಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಈ ರೆತಿಯ ಮೊದಲ ಅಧ್ಯಯನ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಕೊವಿಡ್-19 ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಏಕೆ?: ಕೇಂದ್ರದ ಸಮರ್ಥನೆ ಹೀಗಿದೆ ನೋಡಿ…
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.