Cloth Mask Latest News - ಕಾಟನ್ ಬಟ್ಟೆಯಿಂದ ತಯಾರಿಸಲಾಗಿರುವ ಮಾಸ್ಕ್ ಒಂದು ವರ್ಷದವರೆಗೆ ಪರಿಣಾಮಕಾರಿಯಾಗಿರುತ್ತವೆ, ಪದೇ ಪದೇ ತೊಳೆಯುವುದು ಮತ್ತು ಒಣಗಿಸುವುದು ಸೋಂಕನ್ನು ಉಂಟುಮಾಡುವ ಕಣಗಳನ್ನು ಶೋಧಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುವುದಿಲ್ಲ. ಇದನ್ನು ಅಧ್ಯಯನವೊಂದರಲ್ಲಿ ಹೇಳಲಾಗಿದೆ (Cloth Masks Latest Study). ಪಿಟಿಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ ಪ್ರಕಾರ, 'ಏರೋಸಾಲ್ ಅಂಡ್ ಏರ್ ಕ್ವಾಲಿಟಿ ರಿಸರ್ಚ್' ಸಂಶೋಧನಾ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಯು ಹಿಂದಿನ ಅಧ್ಯಯನವನ್ನು ದೃಢಪಡಿಸುತ್ತದೆ. ಸರ್ಜಿಕಲ್ ಮಾಸ್ಕ್ (Surgical Mask) ಮೇಲೆ ಹತ್ತಿ ಬಟ್ಟೆಯ ಮಾಸ್ಕ್ (Cotton Mask) ಅನ್ವಯಿಸುವುದು ಬಟ್ಟೆ ಮುಖವಾಡಕ್ಕಿಂತ ಹೆಚ್ಚಿನ ರಕ್ಷಣೆ ನೀಡುತ್ತದೆ. ಇದು ಪರಿಸರಕ್ಕೂ ಕೂಡ ಒಳ್ಳೆಯ ಸಂಗತಿಯಾಗಿದೆ ಎಂದು ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮತ್ತು ಅಧ್ಯಯನದ ಪ್ರಮುಖ ಲೇಖಕಿ ಮರೀನಾ ವ್ಯಾನ್ಸ್ ಹೇಳಿದ್ದಾರೆ. ನೀವು ತೊಳೆದು, ಒಣಗಿಸಿ ಮರುಬಳಕೆ ಮಾಡುತ್ತಿರುವ ಹತ್ತಿಬಟ್ಟೆಯ ಮಾಸ್ಕ್ ಬಹುಶಃ ಇನ್ನೂ ಚೆನ್ನಾಗಿದೆ. ಅದನ್ನು ಬೇಗನೆ ಎಸೆಯುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರತಿ 7 ಬಾರಿ ಸ್ವಚ್ಚತೆಯ ವೇಳೆ ನಡೆದ ಪರೀಕ್ಷೆ
ವರದಿಗಳ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ (Covid-19 Pandemic) ರೋಗದ ಆರಂಭದಿಂದಲೂ, ಒಮ್ಮೆ ಬಳಕೆ ಮಾಡಿ ಬಿಸಾಡುವ ಮಾಸ್ಕ್ ಸೇರಿದಂತೆ ಪ್ರತಿದಿನ ಸುಮಾರು 7,200 ಟನ್ ವೈದ್ಯಕೀಯ ತ್ಯಾಜ್ಯವನ್ನು ಉತ್ಪಾದಿಸಲಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಹೊರಗೆ ಹೋಗುವಾಗ ಮುಖವಾಡಗಳನ್ನು ಎಸೆಯುವುದನ್ನು ನೋಡಿ ನಾವು ವಿಚಲಿತರಾಗಿದ್ದೇವೆ ಎಂದು ವ್ಯಾನ್ಸ್ ಹೇಳಿದ್ದಾರೆ. ಆಗ ನಾವು ಕಾಟನ್ ಬಟ್ಟೆಯ ಎರಡ ಪದರುಗಳುಳ್ಳ ಮಾಸ್ಕ್ ತಯಾರಿಸಿ ಒಂದು ವರ್ಷದವರೆಗೆ ಪದೇ ಪದೇ ತೊಳೆದು ಒಣಗಿಸುವ ಮೂಲಕ ಪರೀಕ್ಷೆ ನಡೆಸಿದೆವು. ಪ್ರತಿ 7 ಬಾರಿ ಸ್ವಚ್ಚತೆಯ ವೇಳೆ ನಾವು ಅವುಗಳನ್ನು ಪರಿಶೀಲಿಸಿದೇವು ಎಂದು ವ್ಯಾನ್ಸ್ ಹೇಳಿದ್ದಾರೆ.
ಮಾಸ್ಕ್ ಪರಿಣಾಮಕಾರಿಯಾಗಿರುವ ಪರೀಕ್ಷೆ
ಸಂಶೋಧಕರು ಈ ಕಾಟನ್ ಮಾಸ್ಕ್ ಗಳ ಪರಿಣಾಮಕಾರಿತ್ವವನ್ನು ದೃಢಪಡಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪರೀಕ್ಷಿಸಿದ್ದರೆ. ಪದೇ ಪದೇ ತೊಳೆದು ಒಣಗಿಸಿದ ನಂತರ ಹತ್ತಿ ನಾರುಗಳು ಒಡೆಯಲು ಆರಂಭಿಸಿದವು, ಆದರೆ ಸೂಕ್ಷ್ಮ ಕಣಗಳನ್ನು ಶೋಧಿಸುವ ಬಟ್ಟೆಯ ಸಾಮರ್ಥ್ಯದ ಮೇಲೆ ಇದು ಗಮನಾರ್ಹವಾಗಿ ಪರಿಣಾಮ ಬೀರಲಿಲ್ಲ ಎಂಬುದನ್ನು ಸಂಶೋಧಕರು ಇದರಿಂದ ಕಂಡುಕೊಂಡಿದ್ದಾರೆ. ಆದರೆ ಕೆಲವು ಸಮಯದ ನಂತರ ಈ ಮುಖವಾಡಗಳೊಂದಿಗೆ ಉಸಿರಾಡಲು ಕಷ್ಟವಾಗಿರುವುದು ಕೂಡ ಅಧ್ಯಯನದಲ್ಲಿ ಕಂಡುಬಂದಿದೆ.
ಸೂಕ್ಷ್ಮ ಕಣಗಳನ್ನು ಶೋಧಿಸುವಲ್ಲಿ ಎಷ್ಟು ಯಶಸ್ವಿಯಾಗಿವೆ?
ಹತ್ತಿ ಬಟ್ಟೆಯಿಂದ ತಯಾರಿಸಲಾದ ಮಾಸ್ಕ್ ಗಳು 0.3 ಮೈಕ್ರಾನ್‌ಗಳ 23 ಶೇಕಡಾ ಸೂಕ್ಷ್ಮ ಕಣಗಳನ್ನು ಶೋಧಿಸಲು ಸಮರ್ಥವಾಗಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಸರ್ಜಿಕಲ್ ಮಾಸ್ಕ್ ಮೇಲೆ ಹತ್ತಿ ಬಟ್ಟೆಯ ಮುಖವಾಡವನ್ನು ಅನ್ವಯಿಸುವ ಮೂಲಕ, ಶೋಧನೆ ದಕ್ಷತೆಯು ಶೇ.40ರಷ್ಟು ಹೆಚ್ಚಾಗಿದೆ. KN-95 ಮತ್ತು N-95 ಮಾಸ್ಕ್ ಗಳು ಈ ಸೂಕ್ಷ್ಮ ಕಣಗಳನ್ನು ಶೇ. 83-99 ಶೋಧಿಸುವುದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ-Sprouted Moong Benefits : ಪ್ರತಿ ದಿನ ಈ ಸಮಯದಲ್ಲಿ ಮೊಳಕೆ ಕಾಳು ಸೇವಿಸಿ ; ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.