ನವದಹೆಲಿ: ದೆಹಲಿ ಡೆರ್ ಡೆವಿಲ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಕೆಲಸದ ಒತ್ತಡವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ನಾಯಕತ್ವ ಸ್ಥಾನಕ್ಕೆ ಬುಧವಾರದಂದು ರಾಜೀನಾಮೆ ನೀಡಿದ್ದಾರೆ.
ಈಗ ತೆರುವಾಗಿರುವ ನಾಯಕತ್ವದ ಹುದ್ದೆಯನ್ನು ಕನ್ನಡಿಗ ಶ್ರೇಯಸ್ ಅಯ್ಯರ್ ಅವರು ನಿರ್ವಹಿಸಲಿದ್ದಾರೆ. ಈಗಾಗಲೇ ಗಂಭೀರ್ ನೇತೃತ್ವದಲ್ಲಿ ತಂಡವು ತನ್ನ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತು ಅಂಕ ಪಟ್ಟಿಯಲ್ಲಿ ಎಂಟನೆಯ ಸ್ಥಾನದಲ್ಲಿದೆ.
True, that I’ve stepped down from DD captaincy. Just to clarify it was my call, nothing from the management or coaching staff. I may not be leading from the front but I will be the last man standing for @DelhiDaredevils. No individual bigger than d team. Very much a #DilDIlli
— Gautam Gambhir (@GautamGambhir) April 25, 2018
ತಮ್ಮ ಸ್ಥಾನದಿಂದ ಕೆಳಗಿಳಿದಿರುವ ಗೌತಮ್ ಗಂಭೀರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ "ನಾನು ಒಂಟಿಯಾಗಿ ಕುಳಿತುಕೊಂಡು ಯೋಚಿಸುತ್ತಿದ್ದೇನೆ, ಈಗ ನನಗೆ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಎಂದು ಅವರು ಕಾರಣ ನೀಡಿದ್ದಾರೆ.
ಈಗ 23 ರ ಹರೆಯದ ಆಟಗಾರ ಕನ್ನಡಿಗ ಶ್ರೇಯಸ್ ಅಯ್ಯರ್ ಈಗ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಅವರು ಈ ಟೂರ್ನಿಯಲ್ಲಿ ಸತತವಾಗಿ ಎರಡು ಅರ್ಧಶಕಗಳನ್ನು ಗಳಿಸಿದ್ದಾರೆ.