ನವದೆಹಲಿ : ವಾಟ್ಸಾಪ್ ಯಾವಾಗಲೂ ತನ್ನ ಬಳಕೆದಾರರಿಗೆ ಆಪ್ನಲ್ಲಿ ತಾಜಾತನವನ್ನು ಕಾಯ್ದುಕೊಳ್ಳಲು ಮತ್ತು ಹೆಚ್ಚು ಆಕರ್ಷಕವಾಗಿ ಮಾಡಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗ, ಬಳಕೆದಾರರಿಗೆ ಒಂದು ಸಿಹಿ ಸುದ್ದಿ ಇದೆ, ಮೆಸೇಜಿಂಗ್ ಆಪ್ ಹೊಸ ಮತ್ತು ಬಹುನಿರೀಕ್ಷಿತ ಫೀಚರ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ, ಅದು ವಾಯ್ಸ್ ನೋಟ್ ಕಳುಹಿಸುವ ಮೊದಲು ಅದನ್ನ ಕೇಳಬಹುದು ಅಂತಹ ಒಂದು ಫೀಚರ್ ಪರಿಚಯಿಸುತ್ತಿದೆ.
ವಾಯ್ಸ್ ನೋಟ್(Voice Note) ವೈಶಿಷ್ಟ್ಯವು ಈಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರಕಾರ, ಬಳಕೆದಾರರು ಸಧ್ಯ ತಮ್ಮ ವಾಯ್ಸ್ ರೆಕಾರ್ಡ್ ಮಾಡುವುದನ್ನು ಮುಗಿಸಿದ ತಕ್ಷಣ, ರೆಕಾರ್ಡಿಂಗ್ ಅನ್ನು ನೇರವಾಗಿ ಕಳುಹಿಸಲಾಗುತ್ತದೆ. ಇದಕ್ಕೆ ಹೊಸ ಫೀಚರ್ ಅನ್ನು ವಾಟ್ಸಾಪ್ ಹೊರತಂದಿದೆ ಬಳಕೆದಾರರು ಕಳುಹಿಸುವ ಮೊದಲು ಅವರ ವಾಯ್ಸ್ ಅನ್ನು ಕೇಳಬಹುದು ಮತ್ತು ಅಗತ್ಯವಿದ್ದರೆ ಅದರಲ್ಲಿ ಬದಲಾವಣೆಗಳನ್ನು ಕೂಡ ಮಾಡಬಹುದು.
ಇದನ್ನೂ ಓದಿ : Google Chrome ಬಳಕೆದಾರರೇ ಎಚ್ಚರ! ತಕ್ಷಣ ಸೆಟ್ಟಿಂಗ್ಗಳನ್ನು ಬದಲಾಯಿಸಿ, ಇಲ್ಲವೇ ತೊಂದರೆಯಾಗಬಹುದು
ಇದರ ಜೊತೆಗೆ, ಕಳುಹಿಸುವವರು ಅವನ/ಅವಳ ವಾಯ್ಸ್ ನೋಟ್ ಅನ್ನು ರೆಕಾರ್ಡ್ ಮಾಡುವಾಗ ವಾಟ್ಸಾಪ್(WhatsApp) ವೆವ್ ಫಾರಂ ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ ನ ಬೀಟಾ ಆವೃತ್ತಿಗೆ ಕಂಪನಿಯು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ.
Wabetainfo ಪ್ರಕಾರ, ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ(IOS Beta) ಪರೀಕ್ಷಕರಿಗಾಗಿ ವಾಟ್ಸಾಪ್ ಮೊದಲು ಈ 2 ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತದೆ. ಕಳುಹಿಸುವವರು ತಮ್ಮ ರೆಕಾರ್ಡಿಂಗ್ ಅನ್ನು ಸ್ಟಾಪ್ ಮಾಡಲು ಮತ್ತು ತಮಗೆ ಬೇಕೆಂದಾಗ ಮುಂದುವರಿಸಲುಬಹುದು ಎಂದು ವರದಿ ಮಾಡಿದೆ.
Wabetainfo ವರದಿ ಮಾಡಿದೆ, "WhatsApp ಎರಡು ವೈಶಿಷ್ಟ್ಯಗಳನ್ನು ಹೊರತಂದಿದೆ. ಮೊದಲನೆಯದು ರಿಯಲ್ ಟೈಮ್ ವಾಯ್ಸ್ ವೆವ್ ಫಾರಂ(Real-Time Voice Waveforms) ಮತ್ತು ವಾಯ್ಸ್ ನೋಟ್ ರೆಕಾರ್ಡ್ ಮಾಡುವುದನ್ನು ನಿಲ್ಲಿಸುವ ಸಂಕೇತ ತೋರಿಸುತ್ತದೆ. ಎರಡನೆಯ ವೈಶಿಷ್ಟ್ಯವು ಅದನ್ನು ಕಳುಹಿಸುವ ಮೊದಲು ರೆಕಾರ್ಡ್ ವಾಯ್ಸ್ ಸಂದೇಶವನ್ನು ಕೇಳಬಹುದು ಎಂದು ತಿಳಿಸಿದೆ.
ಇದನ್ನೂ ಓದಿ : Samsung Galaxy A52s 5G ಫೋನ್ ಭಾರತದಲ್ಲಿ ಬಿಡುಗಡೆಗೆ ದಿನಾಂಕ ಫಿಕ್ಸ್, ಸೆಪ್ಟೆಂಬರ್ 1ರಂದು ಭಾರತಕ್ಕೆ ಎಂಟ್ರಿ
ಫೇಸ್ಬುಕ್ ಒಡೆತನದ ವಾಟ್ಸಾಪ್ ಹೊಸ ಫೀಚರ್ ಅನ್ನು ಆರಂಭಿಸಿದ ನಂತರ ಬಳಕೆದಾರರು(Users) ಬಹಳ ಸಮಯದಿಂದ ಕಾಯುತ್ತಿದ್ದ ಈ ಹೊಸ ಬೆಳವಣಿಗೆಯು ಬಳಕೆದಾರರಿಗೆ ಅವರು ವಾಟ್ಸ್ಆ್ಯಪ್ನಲ್ಲಿ ಕಳುಹಿಸುವ ವಾಯ್ಸ್ ನೋಟ್ ಅನ್ನು ವೇಗವನ್ನು ಬದಲಿಸಲು ಅನುವು ಮಾಡಿಕೊಡುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.