ಬೆಂಗಳೂರು: ಬೆಂಗಳೂರಿನ ಕೋರಮಂಗಲ(Koramangala)ದಲ್ಲಿ ತಡರಾತ್ರಿ ಭೀಕರ ಅಪಘಾತ (Accident) ಸಂಭವಿಸಿದ್ದು, ತಮಿಳುನಾಡು ಶಾಸಕರ ಪುತ್ರ ಸೇರಿದಂತೆ 7 ಮಂದಿ ದುರ್ಮರಣ ಹೊಂದಿದ್ದಾರೆ. ವಿಐಪಿ ನಂಬರ್ ಪ್ಲೇಟ್ ಹೊಂದಿದ್ದ ಐಷಾರಾಮಿ Audi Q3 ಕಾರು ಫುಟ್ಪಾತ್ ಮೇಲಿನ ಕಂಬಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಯಾರೊಬ್ಬರೂ ಸಿಟ್ ಬೆಲ್ಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ.
ಮಧ್ಯರಾತ್ರಿ 2.30ರ ವೇಳೆಗೆ ಮಂಗಳ ಕಲ್ಯಾಣ ಮಂಟಪ(Mangala Kalyana Mantapa)ದ ಬಳಿ ಈ ಭೀಕರ ದುರಂತ ಸಂಭವಿಸಿದ್ದು, ಚಾಕಲನ ನಿಯಂತ್ರಣ ತಪ್ಪಿದ Audi Q3 ಕಾರು ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ತಮಿಳುನಾಡು ಡಿಎಂಕೆ ಶಾಸಕರ ಪುತ್ರ ಮತ್ತು ಅವರ ಪತ್ನಿ ಸೇರಿ 7 ಮಂದಿ(ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು)ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಅತಿ ವೇಗವೇ ಕಾರಣ. ನಿರ್ಲಕ್ಷ್ಯ, ವೇಗದ ಚಾಲನೆಯಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#WATCH
7 persons in #Bengaluru die in road accident after they #Audi Q3 they were traveling hit the wall in Koramangala in the early hours of Tuesday. @DarshanDevaiahB @IEBengaluru @IExpressSouth @IndianExpress pic.twitter.com/mtXOkGS2kr— Kiran Parashar (@KiranParashar21) August 31, 2021
ಇದನ್ನೂ ಓದಿ: Convert Petrol Scooter To Electric - Petrol ಚಾಲಿತ ಸ್ಕೂಟರ್ ಅನ್ನು ಈ ರೀತಿ Electric Scooter ಆಗಿ ಪರಿವರ್ತಿಸಿ
ಅಪಘಾತದ ಹೊಡೆತಕ್ಕೆ ಆಡಿ ಕಾರು(Audi Car) ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಕಂಬಕ್ಕೆ ಅಪ್ಪಳಿಸಿರುವ ಕ್ಷಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಕ್ರಗಳು ಹಾರಿಹೋಗಿರುವ ಭೀಕರ ದೃಶ್ಯವನ್ನು ಕಾಣಬಹುದು. ಘಟನೆಯಲ್ಲಿ ಮೂವರು ಮಹಿಳೆಯರು ಸೇರಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Karnataka: Seven people killed in a car accident in Koramangala area of Bengaluru in the wee hours of Tuesday, as per Adugodi Police Station pic.twitter.com/GTcob09pG4
— ANI (@ANI) August 31, 2021
ಇದನ್ನೂ ಓದಿ: Karnataka School Reopening : 'ರಾಜ್ಯದಲ್ಲಿ 1 ರಿಂದ 8 ನೇ ತರಗತಿಗಳ ಶಾಲೆ ಪುನರಾರಂಭ ಬಗ್ಗೆ ಆ.30 ರಂದು ತೀರ್ಮಾನ'
ಐಷಾರಾಮಿ ಆಡಿ ಕಾರಿನಲ್ಲಿದ್ದವರು ಎಲ್ಲಿಂದ ಬರುತ್ತಿದ್ದರು ಮತ್ತು ಎಲ್ಲಿಗೆ ಹೋಗುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದರಾ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸೀಟ್ ಬೆಲ್ಟ್ ಹಾಕದ ಕಾರಣ ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆಗಿಲ್ಲ. ಹೀಗಾಗಿ ಕಾರಿನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿದ್ದಾರೆ ಅಂತಾ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ(Adugodi Police Station)ಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.