Kabul Airport Alert: ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಹೇಳಿದ ಅಮೆರಿಕ

ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ  ಈ ಎಚ್ಚರಿಕೆಯನ್ನು ನೀಡಲಾಗಿದೆ. ಭಯೋತ್ಪಾದಕ ದಾಳಿಯ ಬಗ್ಗೆ ನಿರ್ದಿಷ್ಟ, ವಿಶ್ವಾಸಾರ್ಹ ಮಾಹಿತಿ ದೊರೆತಿದೆ ಎಂದು ಅಮೆರಿಕ ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ. 

Written by - Ranjitha R K | Last Updated : Aug 29, 2021, 09:22 AM IST
  • ಕಾಬೂಲ್ ವಿಮಾನ ನಿಲ್ದಾಣದ ಬಳಿ ಭಯೋತ್ಪಾದಕ ದಾಳಿಯ ಎಚ್ಚರಿಕೆ
  • ವಿಮಾನ ನಿಲ್ದಾಣ ಪ್ರದೇಶವನ್ನು ತಕ್ಷಣ ತೊರೆಯುವಂತೆ ನಾಗರಿಕರಿಗೆ ಹೇಳಿದ ಅಮೆರಿಕ
  • ಗುರುವಾರದ ದಾಳಿ ಬಗ್ಗೆಯೂ ಎಚ್ಚರಿಸಿತ್ತು ಯುಎಸ್
Kabul Airport Alert: ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಹೇಳಿದ ಅಮೆರಿಕ  title=
Kabul Airport Alert (file photo)

ನವದೆಹಲಿ : ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಳಿ ಭಯೋತ್ಪಾದಕ ದಾಳಿಯ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪ್ರದೇಶವನ್ನು (Kabul airport)  ತಕ್ಷಣವೇ ತೊರೆಯುವಂತೆ ಅಮೆರಿಕ ತನ್ನ ನಾಗರಿಕರಿಗೆ ಹೇಳಿದೆ. ನಿರ್ದಿಷ್ಟವಾದ, ಖಚಿತವಾದ ಬೆದರಿಕೆಯನ್ನು ಸ್ವೀಕರಿಸಿರುವ ಕಾರಣ ಕಾಬೂಲ್ ವಿಮಾನ ನಿಲ್ದಾಣದ ಪ್ರದೇಶದಿಂದ ತಕ್ಷಣವೇ ಹೊರಹೋಗುವಂತೆ  ಯುಎಸ್ (US) ತನ್ನ ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿದೆ. 

ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ (US Embassy in Kabul) ಈ ಎಚ್ಚರಿಕೆಯನ್ನು ನೀಡಲಾಗಿದೆ. ಭಯೋತ್ಪಾದಕ ದಾಳಿಯ (terror attack) ಬಗ್ಗೆ ನಿರ್ದಿಷ್ಟ, ವಿಶ್ವಾಸಾರ್ಹ ಮಾಹಿತಿ ದೊರೆತಿದೆ ಎಂದು ಅಮೆರಿಕ ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ. ಕಾಬೂಲ್ ವಿಮಾನ ನಿಲ್ದಾಣದ (Kabul airport) ಸುತ್ತಮುತ್ತಲಿರುವ ದಕ್ಷಿಣದ ಪಂಜಶೀರ್ ಪೆಟ್ರೋಲ್ ಸ್ಟೇಷನ್ ಬಳಿಯ ಹೊಸ ಆಂತರಿಕ ಸಚಿವಾಲಯ ಮತ್ತು ಗೇಟ್ ವಿಮಾನ ನಿಲ್ದಾಣದ ಪ್ರದೇಶವನ್ನು ತಕ್ಷಣವೇ ತೊರೆಯುವಂತೆ ಯುಎಸ್ ರಾಯಭಾರ ಕಚೇರಿ ಹೇಳಿದೆ.  

ಇದನ್ನೂ ಓದಿ : ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ

 

ಅಮೆರಿಕ (America) ಗುರುವಾರ ಭಯೋತ್ಪಾದಕ ದಾಳಿ ಎಚ್ಚರಿಕೆಯನ್ನು ನೀಡಿತ್ತು.  ನಂತರ ಅದೇ ದಿನ ಭಯೋತ್ಪಾದಕ ದಾಳಿ ನಡೆದಿದ್ದು, ಆ ಆತ್ಮಹತ್ಯಾ ದಾಳಿಯಲ್ಲಿ 200 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂದಿದ್ದಾರೆ. ಭಯೋತ್ಪಾದಕ ಸಂಘಟನೆ ISIS-Korarasan (ISIS-K) ವಿಮಾನ ನಿಲ್ದಾಣದ ಹೊರಗೆ ನಡೆಸಿದ ದಾಳಿಯಲ್ಲಿ 13 ಅಮೆರಿಕನ್ ಸೈನಿಕರು ಕೂಡ ಮೃತಪಟ್ಟಿದ್ದಾರೆ. 

ಇದೇ ವೇಳೆ, ಅಫ್ಘಾನಿಸ್ತಾನದಿಂದ (Aghanistan)110,000 ಕ್ಕೂ ಹೆಚ್ಚು ಜನರನ್ನು ಅಮೆರಿಕ ಸ್ಥಳಾಂತರಿಸಿದೆ ಎಂದು ಶ್ವೇತಭವನ ಹೇಳಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಎಲ್ಲಾ ಆಗಮನಗಳನ್ನು ಸ್ಕ್ರೀನಿಂಗ್ ಮತ್ತು ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ, COVID-19 ಪರೀಕ್ಷೆಗಳನ್ನೂ ಕೂಡಾ ನಡೆಸಲಾಗುತ್ತಿದೆ.  ಲಸಿಕೆಗಳನ್ನು ಕೂಡಾ ನೀಡಲಾಗುತ್ತದೆ. ಆಗಸ್ಟ್ 31 ರೊಳಗೆ ಅಮೆರಿಕ ತನ್ನ ಎಲ್ಲ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಕೆಲಸವನ್ನು ಪೂರ್ಣಗೊಳಿಸಲಿದೆ. 

ಇದನ್ನೂ ಓದಿ : Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News