ನವದೆಹಲಿ : ದೇಶಾದ್ಯಂತ ಏಪ್ರಿಲ್ 21ರಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 13 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 15 ಪೈಸೆ ಹೆಚ್ಚಳವಾಗಿದೆ. ಈ ದರವು ಏಪ್ರಿಲ್ 21, 2018ರ ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಈ ಕೆಳಗಿನಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 74.21 | 65.46 |
ಕೋಲ್ಕತ್ತಾ | 76.91 | 68.16 |
ಮುಂಬೈ | 82.06 | 69.70 |
ಚೆನ್ನೈ | 76.99 | 69.06 |
ಬೆಂಗಳೂರು | 75.39 | 66.57 |
ಹೈದರಾಬಾದ್ | 78.59 | 71.12 |
ತಿರುವನಂತಪುರಂ | 78.17 | 71.02 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx