Why Enactment Of CAA Necessary: ಅಫ್ಘಾನಿಸ್ಥಾನದಲ್ಲಿ ಹಿಂದೂ-ಸಿಖ್ಖರ ಪಲಾಯನ ಕುರಿತು ಮೋದಿ ಸರ್ಕಾರ ಹೇಳಿದ್ದೇನು?

Why Enactment Of CAA Necessary - ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಆಕ್ರಮಣದ ನಂತರ, ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯದ ಜನರು ಬಹಳ ಭಯದಲ್ಲಿದ್ದಾರೆ. ಅವರು ತಮ್ಮ ಜೀವ ಉಳಿಸಲು ಮತ್ತು ಭಾರತದಲ್ಲಿ ಆಶ್ರಯ ಪಡೆಯಲು ಹತಾಶರಾಗಿದ್ದಾರೆ. ಇವರಲ್ಲಿ ಕೆಲವರು ಕಾಬೂಲ್‌ನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

Written by - Nitin Tabib | Last Updated : Aug 22, 2021, 06:57 PM IST
  • ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಭಾರತೀಯ ಮೂಲದ ಸಿಕ್ಖರು ಪಲಾಯನಗೈಯುತ್ತಿದ್ದಾರೆ.
  • ಭಾರತದಲ್ಲಿ ಆಶ್ರಯ ಪಡೆಯಲು ಹತಾಶರಾಗಿದ್ದಾರೆ.
  • ಇದೇ ಕಾರಣಕ್ಕೆ CAA ಜಾರಿಗೆ ತರುವುದು ಅನಿವಾರ್ಯವಾಗಿತ್ತು ಎಂದ ಕೇಂದ್ರ ಸಚಿವ
Why Enactment Of CAA Necessary: ಅಫ್ಘಾನಿಸ್ಥಾನದಲ್ಲಿ ಹಿಂದೂ-ಸಿಖ್ಖರ ಪಲಾಯನ ಕುರಿತು ಮೋದಿ ಸರ್ಕಾರ ಹೇಳಿದ್ದೇನು? title=
Why Enactment Of CAA Necessary (File Photo)

ನವದೆಹಲಿ: Why Enactment Of CAA Necessary - ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಆಕ್ರಮಣದ ನಂತರ, ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯದ ಜನರು ಬಹಳ ಭಯದಲ್ಲಿದ್ದಾರೆ. ಅವರು ತಮ್ಮ ಜೀವ ಉಳಿಸಲು ಮತ್ತು ಭಾರತದಲ್ಲಿ ಆಶ್ರಯ ಪಡೆಯಲು ಹತಾಶರಾಗಿದ್ದಾರೆ. ಇವರಲ್ಲಿ ಕೆಲವರು ಕಾಬೂಲ್‌ನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕಾಬೂಲ್‌ನಿಂದ 168 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಭಾನುವಾರ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ತಲುಪಿದ ನಂತರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Union Minister Hardeep Singh Puri) ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಗತ್ಯವಾಗಿರುವುದಕ್ಕೆ ಇದು ಕಾರಣ ಎಂದು ಹೇಳಿದ್ದಾರೆ.

ಈ ಕುರಿತಾದ ನ್ಯೂಸ್ ಆರ್ಟಿಕಲ್ ಹಂಚಿಕೊಂಡ ಸಿಂಗ್, "ಅಸ್ಥಿರವಾಗಿರುವ ನೆರೆರಾಷ್ಟ್ರದಲ್ಲಿನ  ಇತ್ತೀಚಿನ ಬೆಳವಣಿಗೆಗಳ ಕಾರಣ ಅಲ್ಲಿರುವ ಸಿಖ್ಖರು ಮತ್ತು ಹಿಂದುಗಳು ಭಯಾನಕ ಕಾಲಘಟ್ಟದಲ್ಲಿ ಸಾಗುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದು ಅನಿವಾರ್ಯವಾಗಿತ್ತು" ಎಂದಿದ್ದಾರೆ.  ಡಿಸೆಂಬರ್ 2019 ಸಿದ್ಧಪಡಿಸಲಾಗಿರುವ ಈ ಕಾನೂನಿನ ಅಡಿಯಲ್ಲಿ , ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಶೋಷಣೆಗೆ ಒಳಗಾದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದ ಜನರಿಗೆ ಭಾರತೀಯ ಪೌರತ್ವವನ್ನು ನೀಡಲು ಅವಕಾಶವಿದೆ. ಮುಸ್ಲಿಂ ಸಮುದಾಯದ ಪ್ರತಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಕ್ಕೆ ಒಳಗಾಗಿರುವ ಈ ಕಾನೂನಿನ ವಿರುದ್ಧ ದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-First Taliban Fatwa: Afghanistanನಲ್ಲಿ ಮೊದಲ ತಾಲಿಬಾನಿ ಫತ್ವಾ ಜಾರಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಓದುವಂತಿಲ್ಲ!

ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದೆ. ತಾಲಿಬಾನ್ ಹೋರಾಟಗಾರರು ಕಾಬೂಲ್ ಪ್ರವೇಶಿಸುವ ಮುನ್ನವೇ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದಿದ್ದಾರೆ. ಮೂಲಭೂತವಾದಿ ಬಂಡುಕೋರ ಗುಂಪು ಅಧಿಕಾರಕ್ಕೆ ಬಂದ ತಕ್ಷಣ ಭಾರತ ಸೇರಿದಂತೆ ಬಹುತೇಕ ದೇಶಗಳು ತಮ್ಮ ಪ್ರಜೆಗಳನ್ನು ಕಾಬೂಲ್ ನಿಂದ ಸ್ಥಳಾಂತರಿಸಲು ಆರಂಭಿಸಿವೆ. ಹೆಚ್ಚಿನ ಸಂಖ್ಯೆಯ ಜನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ ಮತ್ತು ಹೇಗಾದರೂ ಮಾಡಿ ಅಫ್ಘಾನಿಸ್ತಾನ್ ತೊರೆಯಲು ಹಾತ್ರೆಯುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದರೆ ಕೆಲವರು ಅಮೆರಿಕನ್ ಜೋತು ಬಿದ್ದು, ವಿಮಾನ ಉಡಾವಣೆಗೊಂಡ ಬಳಿಕ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ-ಭಾರತೀಯ ಪ್ರಭಾವವನ್ನು ಎದುರಿಸಲು ಅಫ್ಘಾನಿಸ್ತಾನದಲ್ಲಿ ಪಾಕ್ ಆಸಕ್ತಿ -ಯುಎಸ್ ವರದಿ

ಈ ಕುರಿತು ಈಗಾಗಲೇ ತನ್ನ ಪ್ರತಿಬದ್ಧತೆಯನ್ನು ಸ್ಪಷ್ಟಪಡಿಸಿರುವ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತನ್ನ ಪ್ರಜೆಗಳ ಸುರಕ್ಷಿತ ವಾಪಸಾತಿಗೆ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದೆ. ಇದೇ ವೇಳೆ ಭಾರತಕ್ಕೆ ಬರಲು ಬಯಸುವ ಅಫ್ಘಾನಿಸ್ತಾನದ ಹಿಂದುಗಳು ಮತ್ತು ಸಿಖ್ಖರಿಗೆ ಸಂಪೂರ್ಣ ಸಹಾಯವನ್ನು ನೀಡಲಾಗುವುದು ಎಂದೂ ಹೇಳಲಾಗಿದೆ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Why Enactment Of CAA Necessary) ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ- Kabul Kidnapping Update: ಕಾಬೂಲ್ ವಿಮಾನ ನಿಲ್ದಾಣದಲ್ಲಿ 150 ಭಾರತೀಯರ ಅಪಹರಣದ ಸುದ್ದಿ ಸುಳ್ಳು: ಮೂಲಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News