ವಿಸ್ತಾರ ಏರ್ಲೈನ್ಸ್ ನಿಂದ ದೀಪಾವಳಿ ಧಮಾಕ: ದೊರೆಯಲಿದೆ ಅಗ್ಗದ ಟಿಕೇಟ್

ವಿಸ್ತಾರ ವಿಮಾನ ಕಂಪನಿಯು 48 ಗಂಟೆಗಳವರೆಗೆ ಬಂಪರ್ ರಿಯಾಯಿತಿ ಕೊಡುಗೆಗಳನ್ನು ನೀಡಿದೆ.   

Last Updated : Oct 11, 2017, 12:33 PM IST
ವಿಸ್ತಾರ ಏರ್ಲೈನ್ಸ್ ನಿಂದ ದೀಪಾವಳಿ ಧಮಾಕ: ದೊರೆಯಲಿದೆ ಅಗ್ಗದ ಟಿಕೇಟ್   title=

ನವ ದೆಹಲಿ: ವಿಸ್ತಾರ ವಿಮಾನ ಕಂಪನಿಯು ಪ್ರಯಾಣಿಕರಿಗೆ 'ಹಬ್ಬದ ಕೊಡುಗೆ' ನೀಡಲು ನಿರ್ಧರಿಸಿದೆ. ಈ ಕೊಡುಗೆ ಅಕ್ಟೋಬರ್ 11 ಬುಧವಾರ ರಾತ್ರಿ 12:01 ನಿಮಿಷದಿಂದ ಅಕ್ಟೋಬರ್ 13 ಶುಕ್ರವಾರ ರಾತ್ರಿ 11:59 ರವರೆಗೆ ಲಭ್ಯವಿರುತ್ತದೆ. ನೀವು ಅಕ್ಟೋಬರ್ 28, 2017 ರಿಂದ ಮಾರ್ಚ್ 24, 2018 ರವರೆಗೆ ಟಿಕೇಟ್ ಕಾಯ್ದಿರಿಸಬಹುದು. ಅಗ್ಗದ ಬೆಲೆ 1,149 ರೂ.ಗಳಿಗೆ ಟಿಕೇಟ್ ಆಫರ್ ನೀಡುವ ಮೂಲಕ ವಿಸ್ತಾರ ಏರ್ಲೈನ್ಸ್ ಟಿಕೆಟ್ ಬೆಲೆಯಲ್ಲಿ ಭಾರಿ ಕಡಿತ ನೀಡಿದೆ.

ಕಂಪನಿಯು ಇದನ್ನು 'ಹಬ್ಬದ ಕೊಡುಗೆ' ಎಂದು ಹೆಸರಿಸಿದೆ. ಈ ಕೊಡುಗೆಯಲ್ಲಿ ನೀವು ಗೋವಾ, ಪೋರ್ಟ್ ಬ್ಲೇರ್, ಲಡಾಖ್, ಜಮ್ಮು, ಶ್ರೀನಗರ, ಬೆಂಗಳೂರು, ಕೊಚ್ಚಿ, ಗೋವ್ಹತಿ, ಅಮೃತ್ಸರ್, ಭುವನೇಶ್ವರ್, ದೆಹಲಿ ಮತ್ತು ಕೋಲ್ಕತ್ತಾಗಳಿಗೆ ಟಿಕೇಟ್ ಕಾಯ್ದಿರಿಸಬಹುದು.

Trending News