ನವದೆಹಲಿ : ಡೆಲ್ಟಾ ರೂಪಾಂತರ ಕರೋನಾದ (Coronavirus) ಇದುವರೆಗಿನ ಮಾರಕ ರೂಪವಾಗಿದೆ. ಆದರೆ ಕೊವಾಕ್ಸಿನ್ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಎನ್ನುವ ಅಂಶ ಇದೀಗ ಐಸಿಎಂಆರ್ (ICMR) ಅಧ್ಯಯನದಲ್ಲಿ ತಿಳಿದುಬಂದಿದೆ. ಡೆಲ್ಟಾ ರೂಪಾಂತರಗಳಲ್ಲಿ ಕೋವಾಕ್ಸಿನ್ 77% ವರೆಗೆ ಪರಿಣಾಮಕಾರಿಯಾಗಿದೆ. ಈ ಅಧ್ಯಯನದ ಪ್ರಕಾರ, ಕೊವಾಕ್ಸಿನ್ (Covaxin) ಪಡೆದಿದ್ದರೆ, ನೀವು ಡೆಲ್ಟಾ ರೂಪಾಂತರದಿಂದ ರಕ್ಷಣೆ ಪಡೆಯಬಹುದು.
ಡೆಲ್ಟಾ ರೂಪಾಂತರದ ವಿರುದ್ಧ ಕೋವಾಕ್ಸಿನ್ ಎಷ್ಟು ಪರಿಣಾಮಕಾರಿ?
ಲಸಿಕೆ ಹಾಕಿದ ಜನರನ್ನು ಅಧ್ಯಯನಕ್ಕೆ ಒಳಪಡಿಸುವುದರ ಮೂಲಕ, ಡೆಲ್ಟಾ ಸೋಂಕಿನ (Delta Variant) ವಿರುದ್ಧ ಈ ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕಂಡುಹಿಡಿಯಲಾಯಿತು. ಡೆಲ್ಟಾ ರೂಪಾಂತರದ ವಿರುದ್ಧ ಕೋವಾಕ್ಸಿನ್ (Covaxin) ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯಲು, 25 ಸಾವಿರದ 798 ಜನರ ಮೇಲೆ ಅಧ್ಯಯನ ನಡೆಸಲಾಯಿತು. ಕರೋನಾದಿಂದ (Coronavirus) ಬಳಲುತ್ತಿರುವ ಜನರಲ್ಲಿ ಈ ಲಸಿಕೆ 63.6% ಪರಿಣಾಮಕಾರಿ ಎಂದು ಕಂಡುಬಂದಿದೆ.
ಇದನ್ನೂ ಓದಿ: Covid Positive Patient ಗಳ ಕಣ್ಣೀರು ಕೂಡ ಸೋಂಕು ಹರಡಬಲ್ಲದು: ಹೊಸ ಅಧ್ಯಯನ
ಒಟ್ಟು ಪ್ರಕರಣಗಳಲ್ಲಿ, 90 ಪ್ರತಿಶತವು ಡೆಲ್ಟಾ ರೂಪಾಂತರ:
ಪ್ರಸ್ತುತ ಭಾರತದಲ್ಲಿ ವರದಿಯಾಗುತ್ತಿರುವ ಒಟ್ಟು ಕರೋನಾ (COVID-19) ಪ್ರಕರಣಗಳಲ್ಲಿ 90 ಪ್ರತಿಶತ ಡೆಲ್ಟಾ ರೂಪಾಂತರ ಎನ್ನಲಾಗಿದೆ. ಇನ್ನು ಬ್ರಿಟನ್ ಮತ್ತು ಅಮೆರಿಕದಲ್ಲಿ, ಡೆಲ್ಟಾ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಇತರ ಮೂರು ರೂಪಾಂತರಗಳಾದ ಆಲ್ಫಾ, ಬೀಟಾ, ಗಾಮಾಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗಿದೆ.
ಎರಡೂ ಡೋಸ್ಗಳ ನಂತರ ಹೆಚ್ಚು ಪರಿಣಾಮಕಾರಿ :
ಡೆಲ್ಟಾದ ನಾಲ್ಕು ರೂಪಾಂತರಗಳಿವೆ. ಡೆಲ್ಟಾ AY.1, AY.2 ಮತ್ತು AY.3. ಏಪ್ರಿಲ್ 2021 ರಲ್ಲಿ ಭಾರತದಲ್ಲಿ ಮೊದಲ ಡೆಲ್ಟಾ ಕೇಸ್ ಪತ್ತೆಯಾಯಿತು. ಈಗ ಡೆಲ್ಟಾ ಯುರೋಪ್, ಏಷ್ಯಾ ಮತ್ತು ಅಮೆರಿಕದಲ್ಲಿ ತಾಂಡವವಾಡುತ್ತಿದೆ. ಆದರೂ, ಲಸಿಕೆಯ (Vaccine) ಎರಡೂ ಡೋಸ್ ಗಳ ನಂತರ, ಡೆಲ್ಟಾ ರೂಪಾಂತರದ ವಿರುದ್ಧ ಹೆಚ್ಚಿನ ರಕ್ಷಣೆ ಪಡೆಯಬಹುದು ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
ಇದನ್ನೂ ಓದಿ: School Reopening News : ಈ ರಾಜ್ಯದಲ್ಲಿ ಆಗಸ್ಟ್ 16ರಿಂದ ಆರಂಭವಾಗಲಿದೆ ಶಾಲೆ, ಸರ್ಕಾರದ ಮಹತ್ವದ ನಿರ್ಧಾರ
ಮಕ್ಕಳಿಗೂ ಕೋವಾಕ್ಸಿನ್ ಟ್ರಯಲ್ :
ಕೋವಾಕ್ಸಿನ್ ಅನ್ನು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ (ICMR) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಈಗ ಈ ಮಕ್ಕಳ ಮೇಲೆಯೂ ಈ ಲಸಿಕೆಯ ಟ್ರಯಲ್ ನಡೆಯುತ್ತಿದೆ. ಸೆಪ್ಟೆಂಬರ್ ವೇಳೆಗೆ, ಈ ಟ್ರಯಲ್ ಪೂರ್ಣಗೊಳ್ಳು ವ ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ