ನವದೆಹಲಿ : ಕುಂಬಳಕಾಯಿಯ ಇಷ್ಟಪಡುವವರು ಬಹಳ ಕಡಿಮೆ. ಆದರೆ, ಕುಂಬಳಕಾಯಿಯನ್ನು ತಿನ್ನುವುದರಿಂದ ಅನೇಕ (Benefits of pumpkin) ಪ್ರಯೋಜನಗಳಿವೆ. ಮೊದಲನೆಯದಾಗಿ, ಕುಂಬಳಕಾಯಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಐರನ್, ಫೈಬರ್ ಮುಂತಾದ ಪೋಷಕಾಂಶಗಳಿಂದ ತುಂಬಿರುತ್ತವೆ. ಹಾಗಾಗಿ ಕುಂಬಳಕಾಯಿ ಕಂಡು ಮೂಗು ಮುರಿಯುವ ಬದಲು ಅದರ ಗುಣಗಳನ್ನು ತಿಳಿದು ಸೇವಿಸುವುದು ಒಳ್ಳೆಯದು.
ಕುಂಬಳಕಾಯಿ ತಿನ್ನುವುದರಿಂದ ಸಿಗುವ 7 ಅದ್ಭುತ ಪ್ರಯೋಜನಗಳಳು ಇವು :
ಮಲಬದ್ಧತೆಗೆ ಪರಿಹಾರ : ಮಲಬದ್ಧತೆಯ (Constipation) ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಕುಂಬಳಕಾಯಿಯನ್ನು ಸೇವಿಸಬೇಕು. ಕುಂಬಳಕಾಯಿ ಬೀಜಗಳು ಫೈಬರ್ ಅನ್ನು ಹೊಂದಿರುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆಯಿಂದಲೂ ಪರಿಹಾರ ನೀಡುತ್ತದೆ.
ಇದನ್ನೂ ಓದಿ : ಇದನ್ನೊಮ್ಮೆ ಓದಿ.! ಕಡಲೆ ನೆನೆಹಾಕಿದ ನೀರನ್ನು ನೀವೆಂದೂ ಚೆಲ್ಲಲ್ಲ..!
ಕಣ್ಣುಗಳಿಗೆ ಪ್ರಯೋಜನಕಾರಿ : ಬೀಟಾ ಕ್ಯಾರೋಟಿನ್ ಕುಂಬಳಕಾಯಿಯಲ್ಲಿ ಕಂಡುಬರುತ್ತದೆ. ಈ ಅಂಶವು ಕಣ್ಣುಗಳನ್ನು ಆರೋಗ್ಯವಾಗಿಡಲು (eye health) ಬಹಳ ಸಹಾಯಕವಾಗಿದೆ.
ಮೂಳೆಗಳನ್ನು ಬಲಪಡಿಸುತ್ತದೆ : ಕುಂಬಳಕಾಯಿಯಲ್ಲಿ ಬಹಳಷ್ಟು ಕ್ಯಾಲ್ಸಿಯಂ ಇರುತ್ತದೆ. ಇದರಿಂದಾಗಿ ಮೂಳೆಗಳನ್ನು ಸದೃಢವಾಗಿರುವಂತೆ (Strong bones) ನೋಡಿಕೊಳ್ಳುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.
ಮಧುಮೇಹಿಗಳಿಗೆ ಪ್ರಯೋಜನಕಾರಿ : ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಕುಂಬಳಕಾಯಿ ಸೇವನೆಯು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : fitness tips to stay healthy: ಸದಾ ಆರೋಗ್ಯದಿಂದಿರಲು ಈ ವಿಧಾನಗಳನ್ನು ಅನುಸರಿಸಿ
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ : ಕುಂಬಳಕಾಯಿಯಲ್ಲಿ ಪೊಟ್ಯಾಶಿಯಂ ಇದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಕುಂಬಳಕಾಯಿಯಲ್ಲಿ ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಇ ಇರುತ್ತದೆ. ಈ ಕಾರಣದಿಂದಾಗಿ ರೋಗನಿರೋಧಕ ಶಕ್ತಿ (Immunity) ಬಲವಾಗಿರುತ್ತದೆ.
ಬೊಜ್ಜು ಕಡಿಮೆಯಾಗುತ್ತದೆ : ಕುಂಬಳಕಾಯಿ ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಆಹಾರದಲ್ಲಿ ಸೇರಿಸುವ ಮೂಲಕ, ನೀವು ತೂಕವನ್ನು ನಿಯಂತ್ರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ