ನವದೆಹಲಿ: PM Kisan Samman Nidhi- ಸರ್ಕಾರದ ಹಲವು ಯೋಜನೆಗಳು ಅರ್ಹರಿಗೆ ಸಿಗುತ್ತದೆಯೋ ಇಲ್ಲವೋ. ಆದರೆ ಹಲವು ಸಂದರ್ಭಗಳಲ್ಲಿ ಅರ್ಹತೆ ಇಲ್ಲದ ಕೆಲವರು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯೋಜನೆ ಕೂಡ ಇದಕ್ಕೆ ಹೊರತಾಗಿಲ್ಲ. ಈ ಯೋಜನೆಯಲ್ಲಿಯೂ ಅದರ ವ್ಯಾಪ್ತಿಗೆ ಬರದ ಹಲವರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಲಕ್ಷಾಂತರ ಅನರ್ಹರು ಲಾಭ ಪಡೆದುಕೊಂಡಿದ್ದಾರೆ:-
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಪಿಎಂ-ಕಿಸಾನ್ (PM Kisan) ಯೋಜನೆಯಡಿಯಲ್ಲಿ ಸುಮಾರು 42 ಲಕ್ಷ ಅನರ್ಹ ರೈತರು ಸರ್ಕಾರದ ಯೋಜನೆಯಿಂದ ಲಾಭ ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ ಅಂತಹ 42 ಲಕ್ಷ ಅನರ್ಹ ರೈತರಿಂದ ಕೇಂದ್ರ ಸರ್ಕಾರ 3,000 ಕೋಟಿ ರೂ. ಹಣವನ್ನು (ಪಿಎಂ ಕಿಸಾನ್ ಯೋಜನೆಯಿಂದ ಅನರ್ಹ ರೈತರು ಪಡೆದಿರುವ ಹಣ) ಹಿಂಪಡೆಯಲಿದೆ.
ಕೇವಲ ಉತ್ತರ ಪ್ರದೇಶ ರಾಜ್ಯ ಒಂದರಲ್ಲೇ ಇಂತಹ 7.10 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ರಾಜ್ಯ ಕೃಷಿ ಇಲಾಖೆ ನಡೆಸಿದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅಂತಹ ಅನರ್ಹ ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಯೋಜನೆಯನ್ನು ಅನುಷ್ಠಾನಗೊಳಿಸುವುದರ ಜೊತೆಗೆ, ಕೇಂದ್ರ ಸರ್ಕಾರವು ಅಂತಹ ಜನರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿತ್ತು, ಇದರಲ್ಲಿ ಈ ಯೋಜನೆಯ ಲಾಭವನ್ನು ಯಾರು ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- PM Kisan: ಪಿಎಂ ಕಿಸಾನ್ ಫಲಾನುಭವಿಗಳು ಕೈಗೆಟುಕುವ ದರದಲ್ಲಿ ಸಾಲ ಪಡೆಯಲು ಇಲ್ಲಿದೆ ಸುಲಭ ಪ್ರಕ್ರಿಯೆ
ಈಗ ಅಂತಹ ಜನರಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ:
ಯೋಜನೆಯ ಲಾಭ ಪಡೆಯಲು ಅರ್ಹರಲ್ಲದಿದ್ದರೂ ಯೋಜನೆಯ ಲಾಭ ಪಡೆದಿರುವ ಅಂತಹ ಅನರ್ಹ ರೈತರನ್ನು ಈ ಯೋಜನೆಯಿಂದ ಹೊರಗಿಡಲು ಮತ್ತು ಇದುವರೆಗೂ ಅವರು ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯೋಜನೆಯಿಂದ ಪಡೆದಿರುವ ಹಣವನ್ನು ಅವರಿಂದ ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ಅಂತಹ ರೈತರನ್ನು ಗುರುತಿಸಿದ್ದು, ಅವರನ್ನು ಈ ಯೋಜನೆಯಿಂದ ಹೊರಗಿಡಲಾಗುವುದು. ಅಸ್ಸಾಂನ ಪಿಎಂ ಕಿಸಾನ್ ಯೋಜನೆಯ ಅನರ್ಹ ರೈತರಿಂದ 554 ಕೋಟಿ ರೂ., ಉತ್ತರ ಪ್ರದೇಶದ ಅನರ್ಹ ರೈತರಿಂದ 258 ಕೋಟಿ ರೂ., ಬಿಹಾರದ ಅನರ್ಹ ರೈತರಿಂದ 425 ಕೋಟಿ ರೂ. ಮತ್ತು ಪಂಜಾಬ್ನ ಅನರ್ಹ ರೈತರಿಂದ 437 ಕೋಟಿ ರೂ. ಹಣವನ್ನು ಹಿಂಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ.
ಉತ್ತರ ಪ್ರದೇಶದಲ್ಲಿ, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದ ಸುಮಾರು 2.34 ಲಕ್ಷ ಜನರನ್ನು ತೆರಿಗೆ ಪಾವತಿದಾರರು ಎಂದು ಗುರುತಿಸಲಾಗಿದೆ. ಅಲ್ಲದೆ, ಈಗಾಗಲೇ ಮರಣ ಹೊಂದಿರುವ ಅಂತಹ 32,300 ಜನರ ಖಾತೆಗಳು ಸಹ ಯೋಜನೆಯಡಿಯಲ್ಲಿ ಕಂತುಗಳನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, 3,86,000 ಜನರು ನಕಲಿ ಆಧಾರ್ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಇದಲ್ಲದೆ ಬೇರೆ ಬೇರೆ ಕಾರಣಗಳಿಂದಾಗಿ ಸುಮಾರು 57,900 ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- PM Kisan: 27 ಲಕ್ಷ ರೈತರ ಪಾವತಿ ವಿಫಲ, ನೀವೂ ಈ ತಪ್ಪು ಮಾಡುತ್ತಿದ್ದೀರಾ? ತಕ್ಷಣ ಪರಿಶೀಲಿಸಿ
ಈ ಜನರಿಗೆ ಪಿಎಂ ಕಿಸಾನ್ ಯೋಜನೆಯ ಲಾಭ ಸಿಗುವುದಿಲ್ಲ:-
ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆದ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಈ ಯೋಜನೆಗೆ ಅರ್ಹರಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅದಕ್ಕಾಗಿ ಕೆಳಗೆ ನೀಡಲಾದ ಸಂಪೂರ್ಣ ಪಟ್ಟಿಯನ್ನು ಎಚ್ಚರಿಕೆಯಿಂದ ಓದಿ.
1. ರೈತನ ಕುಟುಂಬದ ಯಾವುದೇ ಸದಸ್ಯರು ತೆರಿಗೆ ಪಾವತಿಸುತ್ತಿದ್ದರೆ, ಅವರನ್ನು ಈ ಯೋಜನೆಯಿಂದ ಹೊರಗಿಡಬಹುದು. ಇಲ್ಲಿ ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು.
2. ರೈತನ ಭೂಮಿಯು ಕೃಷಿ ಯೋಗ್ಯತಾ ಭೂಮಿ ಅಲ್ಲದಿದ್ದರೆ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ.
3. ಕೃಷಿ ಭೂಮಿಯನ್ನು ಹೊಂದಿರದ ಅಂತಹ ರೈತರಿಗೆ ಈ ಯೋಜನೆಯ ಲಾಭವೂ ಸಿಗುವುದಿಲ್ಲ.
4. ನಿಮ್ಮ ಕುಟುಂಬದಲ್ಲಿನ ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿಲ್ಲ ಆದರೆ ನಿಮ್ಮ ಅಜ್ಜ, ತಂದೆ ಅಥವಾ ಇನ್ನಾವುದೇ ಸದಸ್ಯರ ಹೆಸರಿನಲ್ಲಿ ಇದ್ದರೆ, ನಿಮಗೆ ಯೋಜನೆಯ ಲಾಭ ದೊರೆಯುವುದಿಲ್ಲ.
5. ನೀವು ಇತರರ ಭೂಮಿಯನ್ನು ಬಾಡಿಗೆಗೆ ತೆಗೆದುಕೊಂಡು ಕೃಷಿ ಮಾಡಿದರೆ, ಈ ಯೋಜನೆಯ ಲಾಭ ನಿಮಗೆ ಸಿಗುವುದಿಲ್ಲ.
6. ನೀವು ಕೃಷಿ ಭೂಮಿಯ ಮಾಲೀಕರಾಗಿದ್ದರೂ, ನೀವು ಸರ್ಕಾರಿ ನೌಕರರಾಗಿದ್ದರೆ ಈ ಯೋಜನೆಯ ಲಾಭವನ್ನು ನೀವು ಪಡೆಯಲು ಸಾಧ್ಯವಿಲ್ಲ.
7. ನೀವು ಹಾಲಿ ಅಥವಾ ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ ನೀವು ಪ್ರಧಾನಿ ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
8. ನೀವು ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರೂ ಸಹ, ನೀವು ಈ ಯೋಜನೆಗೆ ಅರ್ಹರಾಗಲು ಸಾಧ್ಯವಿಲ್ಲ.
9. ನೀವು ಕೃಷಿಕರಾಗಿದ್ದರೂ ಕೂಡ ಮಾಸಿಕ 10,000 ರೂ. ಪಿಂಚಣಿ ಪಡೆದರೆ, ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
10. ನೀವು ಕೃಷಿಕರಾಗಿದ್ದರೆ ಮತ್ತು ಕಳೆದ ತಿಂಗಳುಗಳಲ್ಲಿ ಆದಾಯ ತೆರಿಗೆಯನ್ನು ಠೇವಣಿ ಇಟ್ಟಿದ್ದರೆ, ನೀವು ಈ ಯೋಜನೆಗೆ ಅರ್ಹರಲ್ಲ.
11. ನೀವು ನಗರ ಸಭೆಯ ಮಾಜಿ ಅಥವಾ ಪ್ರಸ್ತುತ ಮೇಯರ್ ಆಗಿದ್ದರೂ, ಜಿಲ್ಲಾ ಪಂಚಾಯಿತಿಗಳ ಮಾಜಿ ಅಥವಾ ಪ್ರಸ್ತುತ ಅಧ್ಯಕ್ಷರಾಗಿದ್ದರೂ ಸಹ, ನೀವು ಈ ಯೋಜನೆಗೆ ಅರ್ಹರಲ್ಲ.
12. ನೀವು ನಿವೃತ್ತ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ ಮತ್ತು ಪಿಎಸ್ಯುಗಳ ನೌಕರರು (ಮಲ್ಟಿ ಟಾಸ್ಕಿಂಗ್ ಸ್ಟಾಫ್ / ಕ್ಲಾಸ್ IV ಮತ್ತು ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ) ಆಗಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.