WhatsApp New Feature - ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ನಿತ್ಯ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈ ಸರಣಿಯಲ್ಲಿ ಇತ್ತೀಚೆಗೆ ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಹೊಸ ವೈಶಿಷ್ಟ್ಯವನ್ನು (WhatsApp Latest Update) ಸೇರಿಸಿದೆ. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಮಿಸ್ ಮಾಡಿರುವ ಗುಂಪು ವೀಡಿಯೊ ಅಥವಾ ಧ್ವನಿ ಕರೆಗಳಿಗೆ ನಂತರ ಮತ್ತೆ ಸೇರಲು ಸಾಧ್ಯವಾಗಲಿದೆ. ಗುಂಪು ಕರೆ ಅಥವಾ ಕರೆ ಬಂದ ಸಂದರ್ಭದಲ್ಲಿ ಬಳಕೆದಾರರು ಬೇರೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿದ್ದರೆ, ಅವರು ಆ ಗುಂಪು ವಿಡಿಯೋ ಕರೆ ಅಥವಾ ವಿಡಿಯೋ ಕರೆ ಮಿಸ್ ಮಾಡದೆ ಇರಲಿ ಎಂಬುದು ಈ ವೈಶಿಷ್ಟ್ಯ ಪರಿಚಯಿಸುವುದರ ಹಿಂದಿನ ಉದ್ದೇಶವಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ.
WhatsApp Latest News - ಇದುವರೆಗೆ ವಾಟ್ಸಾಪ್ ಬಳಕೆದಾರರಿಗೆ ಗುಂಪು ಕರೆಗಳಿಗೆ ಸೇರುವ ಆಯ್ಕೆಯನ್ನು ನೀಡಲಾಗುತ್ತಿರಲಿಲ್ಲ. ಆದರೆ ಇದೀಗ ಬಳಕೆದಾರರು ಕಾಲ್ ಟ್ಯಾಬ್ಗೆ ಹೋಗುವ ಮೂಲಕ ತಪ್ಪಿದ ಧ್ವನಿ ಅಥವಾ ವೀಡಿಯೊ ಕರೆಗೆ ಸುಲಭವಾಗಿ ಸೇರಬಹುದು. ನೀವು ತಪ್ಪಿಸಿಕೊಂಡ ಗುಂಪು ಕರೆ ನಡೆಯುತ್ತಿದ್ದರೆ, ಕರೆ ಲಾಗ್ನಲ್ಲಿ "ಟ್ಯಾಪ್ ಟು ಜಾಯಿನ್" ಆಯ್ಕೆಯನ್ನು ನೀವು ನೋಡಬಹುದು. ಆದರೆ ಈ ವೈಶಿಷ್ಟ್ಯವನ್ನು ಬಳಸಲು, ಮೊದಲು ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ವಾಟ್ಸಾಪ್ನಲ್ಲಿ ತಪ್ಪಿದ ವೀಡಿಯೊ ಮತ್ತು ಧ್ವನಿ ಕರೆಗಳನ್ನು ಸೇರಲು ಹಂತ-ಹಂತದ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ- Google Chrome Updates: ತನ್ನ Chrome ಬ್ರೌಸರ್ ಬಳಕೆದಾರರಿಗೆ ಎರಡು ನೂತನ ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ಕ್ರೋಮ್
WhatsAppನಲ್ಲಿ ಮಿಸ್ ಆಗಿರುವ ವಿಡಿಯೋ ಅಥವಾ ಧ್ವನಿ ಕರೆಗಳಿಗೆ ಈ ರೀತಿ ಪುನಃ ಸೇರಿಕೊಳ್ಳಿ (WhatsApp News Today In Kannada)
>> ಗ್ರೂಪ್ ವಿಡಿಯೋ ಅಥವಾ ವಾಯಿಸ್ ಕರೆ ಮಿಸ್ ಆದಾಗ ನಿಮಗೆ ಒಂದು ಸೂಚನೆ ಬರಲಿದೆ.
>> ಒಂದು ವೇಳೆ ನೀವು ಮಿಸ್ ಆಗಿರುವ ಕಾಲ್ ಅನ್ನು ಸೇರಲು ಬಯಸುತ್ತಿಲ್ಲ ಎಂದಾದರೆ 'ignore' ಮೇಲೆ ಟೈಪ್ ಮಾಡಿ. ಇದೇ ವೇಳೆ ಒಂದು ವೇಳೆ ನೀವು ಕಾಲ್ ಜ್ವಾಯಿನ್ ಮಾಡಲು ಬಯಸುತ್ತಿದ್ದರೆ, 'join' ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕು.
>> ಕಾಲ್ ಮೆನ್ಯೂನಲ್ಲಿ ನಿಮಗೆ ಕಾಲ್ ನಲ್ಲಿ ಭಾಗವಹಿಸುವವರ ಹಾಗೂ ಇತರೆ ಆಹ್ವಾನಿತರ ಪ್ರಿವ್ಯೂ ಸಿಗಲಿದೆ.
ಇದನ್ನೂ ಓದಿ-YouTube Super Thanks: YouTuberಗಳಿಗಾಗಿ ತೆರೆದುಕೊಂಡ ಆದಾಯದ ಹೊಸ ಮಾರ್ಗ
>> ಒಂದು ವೇಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಬಯಸುತ್ತಿದ್ದರೆ, Add participant ಆಯ್ಕೆಯ ಮೇಲೆ ಕ್ಲಿಕ್ಕಿಸಿ.
>> ಇನ್ವೈಟ್ ಮಾಡಲಾಗಿರುವ ವ್ಯಕ್ತಿಗಳಿಗೆ ಸೂಚನೆಯನ್ನು ಕಳುಹಿಸಲು RING ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ