Mumbai: ಮುಂಬೈನಲ್ಲಿ ಭಾರೀ ಮಳೆ ಮಧ್ಯೆ ಕಟ್ಟಡ ಕುಸಿದು ಮೂವರ ಮೃತ್ಯು, 7 ಮಂದಿಗೆ ಗಾಯ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ, ನದಿಗಳು ಉಕ್ಕಿ ಹರಿಯುವುದರಿಂದ ಅನೇಕ ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.  

Written by - Zee Kannada News Desk | Last Updated : Jul 23, 2021, 11:07 AM IST
  • ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಭಾರಿ ಮಳೆ
  • ಭಾರಿ ಮಳೆಯು ಕಳೆದ ವಾರಗಳಲ್ಲಿ ಮುಂಬೈನಲ್ಲಿ ಕಟ್ಟಡ ಕುಸಿದ ಹಲವಾರು ಘಟನೆಗಳಿಗೆ ಕಾರಣವಾಗಿದೆ
  • ಮುಂಬೈ ಮತ್ತು ಉಪನಗರಗಳಲ್ಲಿ ಶುಕ್ರವಾರದಿಂದ ಮಧ್ಯಮ ಮತ್ತು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ
Mumbai: ಮುಂಬೈನಲ್ಲಿ ಭಾರೀ ಮಳೆ ಮಧ್ಯೆ ಕಟ್ಟಡ ಕುಸಿದು ಮೂವರ ಮೃತ್ಯು, 7 ಮಂದಿಗೆ ಗಾಯ title=
Mumbai Rain building collapsed (Image courtesy: ANI)

Mumbai Rain building collapsed : ಮಹಾರಾಷ್ಟ್ರದಲ್ಲಿ ಶುಕ್ರವಾರ ಭಾರಿ ಮಳೆಯ ಮಧ್ಯೆ, ರಾಜ್ಯ ರಾಜಧಾನಿ ಮುಂಬಯಿಯಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ.  ಮುಂಬೈನ ಗೋವಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು ಇದರಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮುಂಬೈನ ಗೋವಂಡಿ ಪ್ರದೇಶದಲ್ಲಿ  ಎರಡು ಅಂತಸ್ತಿನ ಕಟ್ಟಡ ಕುಸಿತದಿಂದ (Building Collapsed) ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು, ಇದುವರೆಗೆ 7 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಬಿಎಂಸಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ನಡೆಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ- PM Kisan: 27 ಲಕ್ಷ ರೈತರ ಪಾವತಿ ವಿಫಲ, ನೀವೂ ಈ ತಪ್ಪು ಮಾಡುತ್ತಿದ್ದೀರಾ? ತಕ್ಷಣ ಪರಿಶೀಲಿಸಿ

ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಭಾರಿ ಮಳೆ (Heavy Rain In Mumbai) ಆಗಿದೆ. ಭಾರಿ ಮಳೆಯು ಕಳೆದ ವಾರಗಳಲ್ಲಿ ಮುಂಬೈನಲ್ಲಿ ಕಟ್ಟಡ ಕುಸಿದ ಹಲವಾರು ಘಟನೆಗಳಿಗೆ ಕಾರಣವಾಗಿದೆ. ಮುಂಬೈ ಮತ್ತು ಉಪನಗರಗಳಲ್ಲಿ ಶುಕ್ರವಾರದಿಂದ ಮಧ್ಯಮ ಮತ್ತು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮತ್ತು ನದಿಗಳ ಪ್ರವಾಹದಿಂದಾಗಿ, ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸೇವೆಗಳಿಗೆ ಗುರುವಾರ ತೊಂದರೆಯಾಗಿದೆ. ಭಾರೀ ಮಳೆಯಿಂದಾಗಿ ಮುಂಬೈ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಈ ಕಾರಣದಿಂದಾಗಿ, ರಕ್ಷಣಾ ಕಾರ್ಯದಲ್ಲಿ ಆಡಳಿತಕ್ಕೆ ಸಹಾಯ ಮಾಡಲು ಅಧಿಕಾರಿಗಳು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ನೆರವು ಪಡೆದಿದ್ದಾರೆ.

ಇದನ್ನೂ ಓದಿ- Voter ID Card ಕಳೆದುಹೋಗಿದೆಯೇ? ಭಯಪಡಬೇಡಿ, ತುರ್ತು ಪರಿಸ್ಥಿತಿಯಲ್ಲಿ ಈ ರೀತಿ ಡೌನ್‌ಲೋಡ್ ಮಾಡಿ

ಜುಲೈ 17-18 ರಂದು ಮುಂಬೈನಲ್ಲಿ ಭಾರೀ ಮಳೆಯಿಂದಾಗಿ 30 ಜನರು ಸಾವನ್ನಪ್ಪಿದ್ದರೆ. ಮುಂಬೈ ಬೆಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕಾಂಪೌಂಡ್ ಗೋಡೆ ಕುಸಿದು 19 ಜನರು ಸಾವನ್ನಪ್ಪಿದ್ದಾರೆ. ಮುಂಬೈನ ವಿಖ್ರೋಲಿ ಉಪನಗರದಲ್ಲಿ ಭಾರಿ ಮಳೆಯಿಂದಾಗಿ ಮಧ್ಯ ರಾತ್ರಿ 2.30 ರ ಸುಮಾರಿಗೆ ಉಂಟಾಗಿರುವ ಭೂಕುಸಿತದಿಂದಾಗಿ ಆರು ಕಚ್ಚಾ ಮನೆಗಳು ಕುಸಿದು ಹತ್ತು ಜನರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ, ಚೆಂಬೂರು ಮತ್ತು ವಿಖ್ರೋಲಿಯಲ್ಲಿ ಕೂಡ ಗೋಡೆ ಕುಸಿದು ಜನರು ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News