ಒಂದು ದೊಡ್ಡ ಕ್ಷುದ್ರಗ್ರಹವು ಅತಿ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಇದು ಗಾತ್ರದಲ್ಲಿ ಕ್ರೀಡಾಂಗಣದಷ್ಟು ದೊಡ್ಡದಾಗಿದೆ ಎನ್ನಲಾಗಿದೆ.
ನವದೆಹಲಿ : ಒಂದು ದೊಡ್ಡ ಕ್ಷುದ್ರಗ್ರಹವು (Asteroid) ಅತಿ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಇದು ಗಾತ್ರದಲ್ಲಿ ಕ್ರೀಡಾಂಗಣದಷ್ಟು ದೊಡ್ಡದಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ, ಯುಎಸ್ ಬಾಹ್ಯಾಕಾಶ ಸಂಸ್ಥೆ (NASA) ವಿಜ್ಞಾನಿಗಳು ಅದರ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದಾರೆ. ಜುಲೈ 24 ರ ತಡರಾತ್ರಿ ಭೂಮಿಯ ಬಳಿ ಹಾದುಹೋಗುವ ಈ ಕ್ಷುದ್ರಗ್ರಹಕ್ಕೆ 2008Go20 ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ಕ್ಷುದ್ರಗ್ರಹವು ಬಾಹ್ಯಾಕಾಶದಿಂದ ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ ಬರುತ್ತಿದೆ. ಈ ವೇಗವು ಬಹಳ ಹೆಚ್ಚಾಗಿದ್ದು, ಒಂದು ಗ್ರಹ ಅಥವಾ ವಸ್ತುವು ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆದರೆ, ಭೀಕರ ವಿನಾಶ ಸಂಭವಿಸಬಹುದು.
220 ಮೀಟರ್ ಅಗಲ ಅಂದರೆ ಚೀನಾದ ಬರ್ಡ್ಸ್ ನೆಸ್ಟ್ ಸ್ಟೇಡಿಯಂನಷ್ಟು ಅಗಲ ಇದರ ಗಾತ್ರ ಎನ್ನಲಾಗಿದೆ. ಈ ಕ್ಷುದ್ರಗ್ರಹವು ಭೂಮಿಯಿಂದ ಸುಮಾರು 2870847.607 ಕಿ.ಮೀ ದೂರದಿಂದ ಹೊರಹೊಮ್ಮುತ್ತದೆ. ಈ ಅಂತರವು ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 8 ಪಟ್ಟು ಹೆಚ್ಚಾಗಿದೆ.
ಡೈಲಿ ಸ್ಟಾರ್‌ನ ವರದಿಯ ಪ್ರಕಾರ, ಹೆಚ್ಚಿನ ಅಂತರದಿಂದಾಗಿ, ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಈ ಕ್ಷುದ್ರಗ್ರಹವು ಹಾದುಹೋಗುವ ಕಕ್ಷೆಯನ್ನು ಅಪೊಲೊ ಎಂದು ಕರೆಯಲಾಗುತ್ತದೆ. ನಾಸಾ ಇದನ್ನು ಅಪಾಯಕಾರಿ ಕ್ಷುದ್ರಗ್ರಹಗಳ ವಿಭಾಗಕ್ಕೆ ಸೇರಿಸಿದೆ. ಅದಕ್ಕಾಗಿಯೇ ನಿರಂತರವಾಗಿ ಇದರ ಮೇಲೆ ನಿಗಾ ಇಡಲಾಗಿದೆ.
ಮಾಹಿತಿಯ ಪ್ರಕಾರ, ಈ ಹಿಂದೆ ಭೂಮಿಯ ಕಕ್ಷೆಯ ಮೂಲಕ 2020 PMZ ಕ್ಷುದ್ರ ಗ್ರಹ ಹಾದುಹೋಗಿತ್ತು. ಇದು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಬ್ರಿಡ್ಜ್ ನಷ್ಟು ಉದ್ದವಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಸೂರ್ಯನ ಶಾಖದಿಂದಾಗಿ ಬಾಹ್ಯಾಕಾಶದಲ್ಲಿ ಚಲಿಸುವ ಕಲ್ಲು ತನ್ನ ಮಾರ್ಗವನ್ನು ಸ್ವಲ್ಪ ಬದಲಾಯಿಸಿದಾಗ, ಅದನ್ನು ಯಾರ್ಕೊವಸ್ಕಿ ಪರಿಣಾಮ ಎಂದು ಕರೆಯಲಾಗುತ್ತದೆ. ದಿಕ್ಕು ಬದಲಾದಂತೆ ಕ್ಷುದ್ರಗ್ರಹದ ವೇಗವೂ ಬದಲಾಗುತ್ತದೆ. ಕೆಲವೊಮ್ಮೆ ಅದು ಕಡಿಮೆಯಾಗುತ್ತದೆ. ಕೆಲವೊಮ್ಮೆ ಬಹಳ ವೇಗವಾಗಿರುತ್ತದೆ.