ಡೆಹ್ರಾಡೂನ್ : ಕನ್ವರ್ ಯಾತ್ರೆ 2021 (Kanwar Yatra 2021) ಕುರಿತು ಉತ್ತರಾಖಂಡ ಸರ್ಕಾರ ಬಹು ಮುಖ್ಯ ನಿರ್ಧಾರ ತೆಗೆದುಕೊಂಡಿದೆ. ಕರೋನಾ ವೈರಸ್ (Coronavirus) ಹಿನ್ನೆಲೆಯಿಂದಾಗಿ, ಕನ್ವರ್ ಯಾತ್ರೆಯನ್ನು ರದ್ದುಪಡಿಸಲಾಗಿದೆ. ಕನ್ವರ್ ಯಾತ್ರೆ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ಆದರೆ ನಂಬಿಕೆಯ ಮಧ್ಯೆ ಜನರ ಜೀವನ ಕೂಡಾ ಅಪಾಯದಲ್ಲಿದೆ. ಜನ್ COVID ಕಾರಣದಿಂದಾಗಿ ಪ್ರಾಣ ಕಳೆದು ಕೊಳ್ಳುವುದು ದೇವರಿಗೂ ಇಷ್ಟವಾಗುವುದಿಲ್ಲ ಎಂದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ನಿರ್ಧಾರ :
ಕನ್ವರ್ ಯಾತ್ರೆ 2021 ಗೆ (Kanwar Yatra 2021) ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಉತ್ತರಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, (Pushkar Singh Dhami) ಈ ವರ್ಷ ಕನ್ವರ್ ಯಾತ್ರೆ ಇರುವುದಿಲ್ಲ ಎಂದು ಜೂನ್ 30 ರಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಕನ್ವರ್ ಯಾತ್ರೆ ನಂಬಿಕೆಯೊಂದಿಗೆ ಸಂಬಂಧ ಹೊಂದಿದೆ. ಏನೇ ಗೊಂದಲಗಳಿದ್ದರೂ, ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಜನರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಹಾಗಾಗಿ ಕನ್ವರ್ ಯಾತ್ರೆ (Kanwar Yatra) ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : Auto Debit EMI Transaction Failure: ಕೊರೊನಾದಿಂದ ಜನರ ಜೇಬಿಗೆ ಭಾರಿ ಪೆಟ್ಟು, ಜೂನ್ ತಿಂಗಳಿನಲ್ಲಿ ಶೇ.37ರಷ್ಟು EMI ಪಾವತಿ ವಿಫಲ
ಕುಂಭ ಮೇಳದ ಸಂದರ್ಭ ಟೀಕೆಗೆ ಗುರಿಯಾಗಿದ್ದ ಸರ್ಕಾರ :
ಕರೋನಾದ (Coronavirus) ಎರಡನೇ ಅಲೆಯ ವೇಳೆ ಕರೋನ ಪ್ರಕರಣಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾಗಲೇ, ಕುಂಭ ಮೇಳ 2021 ಅನ್ನು ಉತ್ತರಾಖಂಡದಲ್ಲಿ ಆಯೋಜಿಸಲಾಗಿತ್ತು. ಕುಂಭ ಮೇಳದ (Kmba mela) ಸಮಯದಲ್ಲಿ, ಅನೇಕ ಸಾಧು, ಸಂತರು ಮತ್ತು ಅಧಿಕಾರಿಗಳು ಸೋಂಕಿಗೆ ಒಳಗಾಗಿದ್ದರು. ಇದಾದ ನಂತರ ಉತ್ತರಾಖಂಡ ಸರ್ಕಾರ ಮತ್ತು ಬಿಜೆಪಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಕರೋನಾ (COVID-19) ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಟ್ಟುಗೂಡಿಸಲು ಅವಕಾಶ ನೀಡಿರುವ ಬಗ್ಗೆ ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ : NEET PG Exam 2021 Date: ಸೆಪ್ಟೆಂಬರ್ 11 ಕ್ಕೆ NEET ಸ್ನಾತಕೋತ್ತರ ಪರೀಕ್ಷೆಆಯೋಜನೆ, ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವರ ಸಂದೇಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ