How To Check Milk Purity: ಹಾಲಿನ ಶುದ್ಧತೆ ಪತ್ತೆ ಹಚ್ಚಲು ಈ ಮಾರ್ಗ ಅನುಸರಿಸಿ

How To Check Milk Purity: ನೀವು ಮನೆಯಲ್ಲಿಯೇ ಹಾಲು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಗುರುತಿಸಬಹುದು.

Written by - Yashaswini V | Last Updated : Jul 2, 2021, 01:10 PM IST
  • ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ
  • ಹಾಲು ಕೂಡ ಇದಕ್ಕೆ ಹೊರತಾಗಿಲ್ಲ
  • ಇತ್ತೀಚಿನ ದಿನಗಳಲ್ಲಿ ನಕಲಿ ಹಾಲನ್ನು ಸಹ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ
How To Check Milk Purity: ಹಾಲಿನ ಶುದ್ಧತೆ ಪತ್ತೆ ಹಚ್ಚಲು ಈ ಮಾರ್ಗ ಅನುಸರಿಸಿ title=
How To Check Milk Purity At Home| ಹಾಲಿನ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ ? ಇಲ್ಲಿದೆ ಸುಲಭ ವಿಧಾನ

How To Check Milk Purity: ಹಾಲನ್ನು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಬಳಸಲಾಗುತ್ತದೆ. ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾಗಿಯೇ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಹಾಲನ್ನು ಸೇವಿಸುತ್ತಾರೆ. ಹಾಲಿನ ಸೇವನೆಯಿಂದ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಬಹುದು. ಆದರೆ ನೀವು ಸೇವಿಸುವ ಹಾಲು ಶುದ್ಧವಾಗಿದೆಯೋ ಇಲ್ಲವೋ ಎಂದು ನಿಮಗೆ ತಿಳಿದಿದೆಯೇ? 

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ಹಾಲು ಕೂಡ ಇದಕ್ಕೆ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ನಕಲಿ ಹಾಲನ್ನು ಸಹ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಹಲವು ವರದಿಗಳನ್ನು ನೀವು ನೋಡಿರಬಹುದು. ಈ ಕಲಬೆರಕೆ ಹಾಲು ನೈಜವಾದ ಹಾಲಿನಂತೆ ಕಾಣುತ್ತದೆಯಾದರೂ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಾಲಿನ ಶುದ್ಧತೆಯನ್ನು ಪರೀಕ್ಷಿಸಲು (How To Check Milk Purity) ಇಂದು ನಾವು ನಿಮಗೆ ಕೆಲವು ಮಾರ್ಗಗಳನ್ನು ತಿಳಿಸಲಿದ್ದೇವೆ. ಇದರೊಂದಿಗೆ ನೀವು ಮನೆಯಲ್ಲಿಯೇ ಹಾಲಿನ ಶುದ್ಧತೆ ಮತ್ತು ಅಶುದ್ಧತೆಯನ್ನು ಗುರುತಿಸಬಹುದು. 

ಇದನ್ನೂ ಓದಿ- Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ

ಹಾಲಿನ ಶುದ್ಧತೆಯನ್ನು ಪತ್ತೆಹಚ್ಚಲು ಈ ವಿಧಾನಗಳು ನಿಮಗೆ ಸಹಕಾರಿಯಾಗಬಹುದು:
* ಹಳೆಯ ವಿಧಾನ-
ಹಾಲನ್ನು ಪರೀಕ್ಷಿಸುವ ಅತ್ಯಂತ ಹಳೆಯ ವಿಧಾನವೆಂದರೆ ಕೆಲವು ಹನಿ ಹಾಲನ್ನು ನಯವಾದ ಮೇಲ್ಮೈಯಲ್ಲಿ ಬಿಡುವುದು. ಇದರ ಹನಿಗಳು ನಿಧಾನವಾಗಿ ಹರಿಯುತ್ತಿದ್ದರೆ ಮತ್ತು ಗುರುತು ಬಿಟ್ಟರೆ, ಹಾಲು (Milk) ಶುದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಆದರೆ ಕಲಬೆರಕೆಯ ಹಾಲಿನ ಹನಿಗಳು ಬೇಗನೆ ಹರಿಯುತ್ತವೆ.

* ಯೂರಿಯಾದ ಕಲಬೆರಕೆಯನ್ನು ಗುರುತಿಸಿ- ಕಲಬೆರಕೆ ಹಾಲಿನಲ್ಲಿ ಯೂರಿಯಾವನ್ನು ಬೆರೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯೂರಿಯಾವನ್ನು ಗುರುತಿಸಲು, ಪರೀಕ್ಷಾ ಟ್ಯೂಬ್‌ನಲ್ಲಿ ಸ್ವಲ್ಪ ಹಾಲು ಮತ್ತು ಸೋಯಾಬೀನ್ ಪುಡಿಯನ್ನು ಮಿಶ್ರಣ ಮಾಡಿ. ನಂತರ 5 ನಿಮಿಷಗಳ ನಂತರ ಅದರಲ್ಲಿ ಕೆಂಪು ಲಿಟ್ಮಸ್ ಕಾಗದವನ್ನು ಅದ್ದಿ. ಈ ಕಾಗದದ ಬಣ್ಣವು ನೀಲಿ ಬಣ್ಣಕ್ಕೆ ತಿರುಗಿದರೆ, ಹಾಲಿನಲ್ಲಿ ಕಲಬೆರಕೆ ಇದೆ ಎಂದು ಅರ್ಥಮಾಡಿಕೊಳ್ಳಿ.

ಇದನ್ನೂ ಓದಿ- Foods Avoid With Milk: ಹಾಲು ಕುಡಿಯುವ ಮುನ್ನ ಐದು ಆಹಾರಗಳನ್ನು ಖಂಡಿತಾ ಸೇವಿಸಬೇಡಿ

* ವಾಸನೆಯಿಂದ ಪರಿಶೀಲಿಸಿ- ಹಾಲಿನ ವಾಸನೆ ಮೂಲಕವೂ ನೀವು ಅದರ ಶುದ್ಧತೆಯನ್ನು ಗುರುತಿಸಬಹುದು. ಹಾಲಿನಲ್ಲಿ ಸೋಪಿನಂತೆ ವಾಸನೆ ಬಂದರೆ ಹಾಲು ಸಂಶ್ಲೇಷಿತ ಎಂದರ್ಥ.

* ಹಾಲಿನ ರುಚಿ- ಹಾಲಿನ ರುಚಿ ಕೂಡ ಹಾಲು ಶುದ್ಧವೋ ಅಥವಾ ಅಶುದ್ಧವೋ ಎಂಬುದನ್ನು ತಿಳಿಸುತ್ತದೆ. ನಿಜವಾದ ಹಾಲಿನ ರುಚಿ ಸ್ವಲ್ಪ ಸಿಹಿಯಾಗಿರುತ್ತದೆ. ಅದೇ ಸಮಯದಲ್ಲಿ, ಡಿಟರ್ಜೆಂಟ್, ಸೋಡಾ ಅಥವಾ ಅದರಲ್ಲಿರುವ ಯಾವುದೇ ವಸ್ತುವಿನ ಕಲಬೆರಕೆಯಾಗಿದ್ದರೆ ಅಂತಹ ಹಾಲಿನ ರುಚಿ ಸ್ವಲ್ಪ ಕಹಿಯಾಗಿ ಭಾಸವಾಗುತ್ತದೆ.

(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News