Changes in Banking Services: ನೀವೂ ಕೂಡ ಈ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ

Changes in Banking Services: ಆಕ್ಸಿಸ್ ಬ್ಯಾಂಕ್ ಖಾತೆದಾರರು ಇಂದಿನಿಂದ ಎಸ್‌ಎಂಎಸ್ ಅಲರ್ಟ್ ಗಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಂದಿನಿಂದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಹೊಸ ಐಎಫ್‌ಎಸ್‌ಸಿ ಕೋಡ್ ಬಳಸಬೇಕಾಗುತ್ತದೆ. 

Written by - Yashaswini V | Last Updated : Jul 1, 2021, 11:29 AM IST
  • ಇಂದಿನಿಂದ ಕೆಲವು ಬ್ಯಾಂಕುಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ
  • ಆಕ್ಸಿಸ್ ಬ್ಯಾಂಕ್ ಎಸ್‌ಎಂಎಸ್ ಅಲರ್ಟ್ ಶುಲ್ಕ ಹೆಚ್ಚಳ
  • ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಇಂದಿನಿಂದ ಹಳೆಯ ಐಎಫ್‌ಎಸ್‌ಸಿ ಕೋಡ್‌ನಿಂದ ಯಾವುದೇ ವ್ಯವಹಾರ, ಆನ್‌ಲೈನ್ ಹಣ ವರ್ಗಾವಣೆ ಇತ್ಯಾದಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ
Changes in Banking Services: ನೀವೂ ಕೂಡ ಈ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ  title=
ಇಂದಿನಿಂದ Axis Bank, BoB, IDBI ಬ್ಯಾಂಕ್ ಸೇರಿದಂತೆ ಈ ಬ್ಯಾಂಕುಗಳ ನಿಯಮಗಳಲ್ಲಿ ಬದಲಾವಣೆ

Changes in Banking Services From July 1: ಜುಲೈ 1 ರಿಂದ ಜನರು ಬ್ಯಾಂಕಿಂಗ್ ಸೇವೆಗಳಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿನ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದು ಅದು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಬ್ಯಾಂಕಿಂಗ್ ಸೇವೆಗಳಿಗೆ (Banking Service) ಸಂಬಂಧಿಸಿದಂತೆ ಹೇಳುವುದಾದರೆ ನೀವೂ ಕೂಡ ಈ 6 ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯ. ಏಕೆಂದರೆ ಜುಲೈ 1 ರಿಂದ, ಅಂದರೆ ಇಂದಿನಿಂದ ಕೆಲವು ಬ್ಯಾಂಕುಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ.  ಹಾಗಾಗಿ ನೀವು ಈ ನಿಯಮಗಳನ್ನು ತಿಳಿಯುವುದು ಅಗತ್ಯವಾಗಿದೆ.

1. ಆಕ್ಸಿಸ್ ಬ್ಯಾಂಕ್ ಎಸ್‌ಎಂಎಸ್ ಅಲರ್ಟ್ ಶುಲ್ಕ ಹೆಚ್ಚಳ: 
ಆಕ್ಸಿಸ್ ಬ್ಯಾಂಕ್ (Axis Bank) ಖಾತೆದಾರರು ಇಂದಿನಿಂದ ಎಸ್‌ಎಂಎಸ್ ಅಲರ್ಟ್ ಗಳಿಗಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಂದಿನಿಂದ ಮೌಲ್ಯವರ್ಧಿತ ಸೇವೆಗಳ ಎಚ್ಚರಿಕೆಗಳಿಗಾಗಿ ಗ್ರಾಹಕರು ಪ್ರತಿ ಎಸ್‌ಎಂಎಸ್‌ಗೆ 25 ಪೈಸೆ ಪಾವತಿಸಬೇಕಾಗುತ್ತದೆ. ಆಯ್ದ ಮೌಲ್ಯವರ್ಧಿತ ಸೇವೆಗಳ ಎಚ್ಚರಿಕೆಗಳಿಗಾಗಿ ಜೂನ್ 30 ರವರೆಗೆ ಚಂದಾದಾರಿಕೆ ಆಧಾರದ ಮೇಲೆ ತಿಂಗಳಿಗೆ 5 ರೂ. ಮೌಲ್ಯವರ್ಧಿತ ಎಸ್‌ಎಂಎಸ್ ಶುಲ್ಕ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ತಿಂಗಳಿಗೆ ಗರಿಷ್ಠ 25 ರೂ. ವರೆಗೆ ಎಸ್‌ಎಂಎಸ್ ಎಚ್ಚರಿಕೆ ಶುಲ್ಕ ವಿಧಿಸಬಹುದಾಗಿದೆ. ಆದಾಗ್ಯೂ, ಬ್ಯಾಂಕ್ ಕಳುಹಿಸಿದ ಪ್ರಚಾರ ಸಂದೇಶಗಳು ಮತ್ತು ಒಟಿಪಿ ಎಚ್ಚರಿಕೆಗಳನ್ನು ಇದರಲ್ಲಿ ಸೇರಿಸಲಾಗಿಲ್ಲ.

2. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಐಎಫ್‌ಎಸ್‌ಸಿ ಕೋಡ್:
ಸಿಂಡಿಕೇಟ್ ಬ್ಯಾಂಕ್ (Syndicate Bank) ಗ್ರಾಹಕರಿಗೆ ಇಂದಿನಿಂದ ಹಳೆಯ ಐಎಫ್‌ಎಸ್‌ಸಿ (IFSC) ಕೋಡ್ ಬಳಸಲು ಸಾಧ್ಯವಾಗುವುದಿಲ್ಲ. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ 2020 ಏಪ್ರಿಲ್ 1 ರಂದು ವಿಲೀನಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಇಂದಿನಿಂದ ಹಳೆಯ ಐಎಫ್‌ಎಸ್‌ಸಿ ಕೋಡ್‌ನಿಂದ ಯಾವುದೇ ವ್ಯವಹಾರ, ಆನ್‌ಲೈನ್ ಹಣ ವರ್ಗಾವಣೆ ಇತ್ಯಾದಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ಕೆನರಾ ಬ್ಯಾಂಕ್‌ನಿಂದ ಹೊಸ ಐಎಫ್‌ಎಸ್‌ಸಿ ಕೋಡ್ ನೀಡಲಾಗಿದೆ, ಅದೇ ಕೋಡ್ ಅನ್ನು ಇಂದಿನಿಂದ ಬಳಸಬೇಕಾಗಿದೆ.

ಇದನ್ನೂ ಓದಿ-  PPF, KVP, SSY, NSC: ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರಿಗೆ ಸಂತಸದ ಸುದ್ದಿ

ಸಿಂಡಿಕೇಟ್ ಬ್ಯಾಂಕ್ ವಿಲೀನದ ನಂತರ ಐಎಫ್‌ಎಸ್‌ಸಿ ಕೋಡ್ ಆಫ್ ಸಿಂಡಿಕೇಟ್ ಬ್ಯಾಂಕ್ ಶಾಖೆಯನ್ನು ಬದಲಾಯಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಹಲವಾರು ಬಾರಿ ಮಾಹಿತಿ ನೀಡಿದೆ. ಕೆನರಾ ಬ್ಯಾಂಕ್ ಪ್ರಕಾರ, ಸಿಂಡಿಕೇಟ್ ಬ್ಯಾಂಕಿನ ಹಳೆಯ ಐಎಫ್‌ಎಸ್‌ಸಿ ಕೋಡ್‌ಗೆ 10000 ಸೇರಿಸಿ. ಉದಾಹರಣೆಗೆ, ಹಳೆಯ IFSC ಕೋಡ್ SYNB0003687 ಆಗಿದ್ದರೆ, ಈಗ ಹೊಸ IFSC ಕೋಡ್ CNRB0013687 ಆಗಿರುತ್ತದೆ.

3. ಐಡಿಬಿಐ ಬ್ಯಾಂಕ್ ಚೆಕ್ ಬುಕ್ ದುಬಾರಿ: 
ನಿಮ್ಮ ಖಾತೆ ಐಡಿಬಿಐ ಬ್ಯಾಂಕಿ (IDBI Bank) ನಲ್ಲಿದ್ದರೆ, ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ. ಈ ಬ್ಯಾಂಕಿನ ಗ್ರಾಹಕರು ಇನ್ನು ಮುಂದೆ ಚೆಕ್ ಬುಕ್ ಲೀಫ್ಸ್ ಪಡೆಯಲು ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ತನ್ನ ಗ್ರಾಹಕರಿಗೆ  ಪ್ರತಿವರ್ಷ 20 ಚೆಕ್ ಬುಕ್ ಲೀಫ್ಸ್ ಅನ್ನು ಉಚಿತವಾಗಿ ನೀಡುತ್ತದೆ. ಜೂನ್ 30 ರವರೆಗೆ, ಗ್ರಾಹಕರು ಖಾತೆ ತೆರೆಯುವ ದಿನಾಂಕದಿಂದ ಒಂದು ವರ್ಷದವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 60 ಚೆಕ್ ಲೀಫ್ಸ್ ಪಡೆಯಬಹುದಿತ್ತು. ಅದರ ನಂತರ 50 ಚೆಕ್ ಲೀಫ್ಸ್  ಅನ್ನು ಉಚಿತವಾಗಿ ಪಡೆಯಬಹುದಿತ್ತು. ಆದರೆ ಇಂದಿನಿಂದ ಅಂದರೆ ಜುಲೈ 1, 2021 ರಿಂದ 20 ಚೆಕ್ ಲೀಫ್ಸ್ ಬಳಿಕ ನೀವು ಚೆಕ್ ತೆಗೆದುಕೊಂಡರೆ, ಪ್ರತಿ ಚೆಕ್‌ಗೆ 5 ರೂ. ಪಾವತಿಸಬೇಕಾಗುತ್ತದೆ. ಆದರೆ ಈ ಶುಲ್ಕಗಳು ಐಡಿಬಿಐ 'ಸಬ್ಕಾ ಉಳಿತಾಯ ಖಾತೆ'ಗೆ ಅನ್ವಯಿಸುವುದಿಲ್ಲ.

ಇದನ್ನೂ ಓದಿ-  Government Scheme: ಕೇವಲ 7 ರೂ. ಉಳಿಸಿ ಮಾಸಿಕ 5,000 ರೂ. ಪಿಂಚಣಿ ಪಡೆಯಿರಿ

4. ಕಾರ್ಪೊರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಗ್ರಾಹಕರು ಹೊಸ ಚೆಕ್ ಬುಕ್ ಪಡೆಯುತ್ತಾರೆ:
ಕಾರ್ಪೊರೇಷನ್ ಬ್ಯಾಂಕ್ (Corporation Bank) ಮತ್ತು ಆಂಧ್ರ ಬ್ಯಾಂಕ್ (Andhra Bank) ಯೂನಿಯನ್ ಬ್ಯಾಂಕ್‌ನೊಂದಿಗೆ (Union Bank) ವಿಲೀನಗೊಂಡಿವೆ. ಎರಡೂ ಬ್ಯಾಂಕುಗಳ ಗ್ರಾಹಕರು ಇಂದಿನಿಂದ ಹೊಸ ಚೆಕ್ ಬುಕ್  ತೆಗೆದುಕೊಳ್ಳಬೇಕಾಗುತ್ತದೆ. ಹಳೆಯ ಚೆಕ್ ಬುಕ್ ಕಾರ್ಯನಿರ್ವಹಿಸುವುದಿಲ್ಲ. ಈ ಹೊಸ ಚೆಕ್ಬುಕ್ ಅನೇಕ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಆರ್‌ಬಿಐ ನೀಡಿರುವ ಸೂಚನೆಯಲ್ಲಿ, ಈ ಎರಡು ಬ್ಯಾಂಕುಗಳ ಗ್ರಾಹಕರು ಕೂಡಲೇ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ ಹಳೆಯ ಚೆಕ್ ಬುಕ್ ಅನ್ನು ಹೊಸ ಚೆಕ್ ಬುಕ್‌ನೊಂದಿಗೆ ಬದಲಾಯಿಸಬೇಕು ಎಂದು ಹೇಳಲಾಗಿದೆ. ಈ ಎರಡೂ ಬ್ಯಾಂಕುಗಳನ್ನು 2020 ರ ಏಪ್ರಿಲ್ 1 ರಂದು ಯೂನಿಯನ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಯಿತು.
ಈ ಎರಡು ಬ್ಯಾಂಕುಗಳ ಗ್ರಾಹಕರು ಹಳೆಯ ಚೆಕ್ ಪುಸ್ತಕದಿಂದ ಚೆಕ್ ನೀಡಿದ್ದರೆ, ತಕ್ಷಣ ಅದನ್ನು ಹೊಸದರೊಂದಿಗೆ ಬದಲಾಯಿಸಿ. ಏಕೆಂದರೆ ಹಳೆಯ ಚೆಕ್ ಬುಕ್ ದಾಖಲೆಗಳನ್ನು ಕೋರ್ ಬ್ಯಾಂಕಿಂಗ್ ಪರಿಹಾರ ವ್ಯವಸ್ಥೆಯಿಂದ ಅಳಿಸಲಾಗುತ್ತದೆ ಎಂದು ಯೂನಿಯನ್ ಬ್ಯಾಂಕ್ ಹೇಳಿದೆ.

5. ಬ್ಯಾಂಕ್ ಆಫ್ ಬರೋಡಾ ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ನೀಡುತ್ತದೆ:
ಇಂದಿನಿಂದ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರಿಗೆ ಹೊಸ ಐಎಫ್‌ಎಸ್‌ಸಿ ಕೋಡ್ ಮಾತ್ರ ಕಾರ್ಯನಿರ್ವಹಿಸುತ್ತದೆ. ಈ ಎರಡೂ ಬ್ಯಾಂಕುಗಳನ್ನು 2019 ರಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) ವಿಲೀನಗೊಳಿಸಲಾಯಿತು. ಬ್ಯಾಂಕ್ ಆಫ್ ಬರೋಡಾ ಹೊಸ ಐಎಫ್‌ಎಸ್‌ಸಿ ಕೋಡ್‌ಗಳನ್ನು ಬಿಡುಗಡೆ ಮಾಡಿದೆ. ಜುಲೈ 1, 2021 ರಿಂದ ಅಂದರೆ ಇಂದಿನಿಂದ ಈ ಎರಡು ಬ್ಯಾಂಕುಗಳ ಹಳೆಯ ಐಎಫ್‌ಎಸ್‌ಸಿ ಕೋಡ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News