Good News! ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಪ್ರಭಾವ ಬೀರುವುದಿಲ್ಲ, ಕಾರಣ ಹೇಳಿದೆ ಆರೋಗ್ಯ ಸಚಿವಾಲಯ

Coronavirus Third Wave Impact On Children - ಮಕ್ಕಳಲ್ಲಿ ಕರೋನಾ ವೈರಸ್ ಸೋಂಕಿನ ಬಗ್ಗೆ ಭಯದ ಪರಿಸ್ಥಿತಿ ಇದೆ,ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮೂರನೇ ಅಲೆಯ (Coronavirus Third Wave) ಕುರಿತು. ಈ ಬಗ್ಗೆ ಬುಧವಾರ ಸ್ಪಷ್ಟಪಡಿಸಿರುವ ಆರೋಗ್ಯ ಸಚಿವಾಲಯ (Union Health Ministry) ಹೆಚ್ಚಿನ ಮಕ್ಕಳು ಲಕ್ಷಣ ರಹಿತರಾಗಿದ್ದಾರೆ ಮತ್ತು ತುಂಬಾ ವಿರಳವಾಗಿ ಆಸ್ಪತ್ರೆಗೆ ಅವರಿಗೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಬೀಳುತ್ತದೆ. 

Written by - Nitin Tabib | Last Updated : Jun 30, 2021, 08:27 PM IST
  • ಮಕ್ಕಳ ಮೇಲೆ ಮೂರನೇ ಅಲೆ ಗಂಭೀರವಾಗಿರುವುದಿಲ್ಲ.
  • ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ.
  • ಮಕ್ಕಳ ಚಿಕಿತ್ಸೆಗಾಗಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸುವ ಪ್ರಯತ್ನಗಳು ಜಾರಿಯಲ್ಲಿವೆ
Good News! ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಪ್ರಭಾವ ಬೀರುವುದಿಲ್ಲ, ಕಾರಣ ಹೇಳಿದೆ ಆರೋಗ್ಯ ಸಚಿವಾಲಯ title=
Coronavirus Third Wave Impact On Children (File Photo)

Coronavirus Third Wave Impact On Children - ಮಕ್ಕಳಲ್ಲಿ ಕರೋನಾ ವೈರಸ್ ಸೋಂಕಿನ ಬಗ್ಗೆ ಭಯದ ಪರಿಸ್ಥಿತಿ ಇದೆ,ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮೂರನೇ ಅಲೆಯ (Coronavirus Third Wave) ಕುರಿತು. ಈ ಬಗ್ಗೆ ಬುಧವಾರ ಸ್ಪಷ್ಟಪಡಿಸಿರುವ ಆರೋಗ್ಯ ಸಚಿವಾಲಯ (Union Health Ministry) ಹೆಚ್ಚಿನ ಮಕ್ಕಳು ಲಕ್ಷಣ ರಹಿತರಾಗಿದ್ದಾರೆ ಮತ್ತು ತುಂಬಾ ವಿರಳವಾಗಿ ಆಸ್ಪತ್ರೆಗೆ ಅವರಿಗೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಬೀಳುತ್ತದೆ. ಕರೋನದ ಎರಡನೇ ಅಲೆ (Coronavirus Second Wave) ಮೊದಲನೆ ಅಲೆಗಿಂತ (Coronavirus First Wave) ಹೆಚ್ಚು ಮಾರಕವೆಂದು ಸಾಬೀತಾಗಿದೆ. ಈ ಅಲೆಯಲ್ಲಿಯೂ ಕೂಡ ಕರೋನಾ ಪಾಸಿಟಿವ್ ಮಕ್ಕಳ ಸಂಖ್ಯೆಯೂ ಕಂಡುಬಂದಿದೆ. ಮಕ್ಕಳ ಮೇಲೆ ಈ ವೈರಸ್‌ನ ದುಷ್ಪರಿಣಾಮಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಮಾಧ್ಯಮಗಳಲ್ಲಿ ಕೇಳಿಬಂದಿವೆ.

ಹೀಗಿರುವಾಗ ಕೊರೋನಾದ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವತಿಯಿಂದ ಹೇಳಲಾಗಿದೆ. ಕೊರೊನಾ ಸೋಂಕಿಗೆ ಗುರಿಯಾದ ಮಕ್ಕಳಲ್ಲಿ ಹೆಚ್ಚಿನ ಮಕ್ಕಳು ಅಸಿಪ್ಟಮ್ಯಾಟಿಕ್ (Asymptomatic)ಆಗಿದ್ದಾರೆ ಅಥವಾ ಅವರಲ್ಲಿ ಅತಿ ಕಡಿಮೆ ಲಕ್ಷಣಗಳು ಇರುತ್ತವೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಬಹುತೇಕ ಸೋಂಕಿತ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಕಡಿಮೆ ಬೀಳುತ್ತದೆ.

ಇದನ್ನೂ ಓದಿ- Covid-19 Vaccine News: ಇನ್ಮುಂದೆ ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ

ಒಂದು ವೇಳೆ ಸಂಪೂರ್ಣವಾಗಿ ಆರೋಗ್ಯವಂತವಾಗಿರುವ ಮಗುವಿನ ಕೊರೊನಾ (Covid-19) ಸೋಂಕು ತಗುಲಿದರೆ, ಮಗುವಿನ ಆರೋಗ್ಯ ತುಂಬಾ ಕಡಿಮೆ ಪ್ರಮಾಣದಲ್ಲಿ ಹದಗೆಡುತ್ತದೆ. ಆ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯದೆ ಮನೆಯಲ್ಲಿಯೇ ಆರೈಕೆ ಮಾಡಿ ಬೇಗನೆ ಗುಣಪಡಿಸಬಹುದು. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಯಾವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೋ, ಆ ಮಕ್ಕಳಲ್ಲಿ ಇಮ್ಯೂನಿಟಿ ತುಂಬಾ ಕಡಿಮೆ ಇರುವುದು ಗಮನಕ್ಕೆ ಬಂದಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ-Supreme Court Big Verdict: ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರ ಪರಿಹಾರ ಒದಗಿಸಬೇಕು

ಮಕ್ಕಳಲ್ಲಿ ಈ ಸೋಂಕು (Coronavirus) ವ್ಯಾಪಕ ಮತ್ತು ಗಂಭೀರ  ಪ್ರಮಾಣದಲ್ಲಿ ಹರಡುತ್ತದೆ ಎಂಬುದಕ್ಕೆ ಭಾರತದಲ್ಲಾಗಲಿ ಅಥವಾ ವಿಶ್ವದಲ್ಲಾಗಲಿ ಇದುವರೆಗೆ ಯಾವುದೇ ದತ್ತಾಂಶಗಳಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.  ಮಕ್ಕಳ ಆರೈಕೆಯನ್ನು ಗಮನದಲ್ಲಿಟ್ಟುಕೊಂಡು ಹೆಲ್ತ್ ಇನ್ಫ್ರಾಸ್ಟ್ರಕ್ಚರ್ (Health Infrastructure) ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಈ ಸೋಂಕಿನಿಂದ ಸೋಂಕಿತರಾಗಿರುವ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಗಾಗಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಇದಲ್ಲದೆ 12-18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ (Covaxin Trail) ನ ಟ್ರಯಲ್ ಈಗಾಗಲೇ ಆರಂಭಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ-New Covid-19 Vaccine: Moderna ಲಸಿಕೆಯ ತುರ್ತುಬಳಕೆಗೆ ಸಿಕ್ತು ಅನುಮತಿ, ಅನುಮೋದನೆ ಪಡೆದ 4ನೇ ಲಸಿಕೆ ಇದಾಗಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News