ನವದೆಹಲಿ : ಅಡುಗೆ ಮನೆಯಲ್ಲಿರುವ ಗರಂ ಮಸಾಲೆಗೆ (Garam masala) ಅದರದ್ದೇ ಆದ ಮಹತ್ವವಿದೆ. ಗರಂ ಮಸಾಲೆ ಆರೋಗ್ಯ ವಿಚಾರದಲ್ಲೂ ಅತ್ಯಂತ ಲಾಭದಾಯಕ. ಗರಂ ಮಸಾಲೆಯಲ್ಲಿ ಸಾಕಷ್ಟು ಆಯುರ್ವೇದೀಯ ಗುಣಗಳಿರುತ್ತವೆ. ಆರೋಗ್ಯ ಹಾಗೂ ರುಚಿ ಎರಡೂ ಕಾರ್ಯವನ್ನು ನಿರ್ವಹಿಸುತ್ತದೆ ಗರಂ ಮಸಾಲೆ. ಗರಂ ಮಸಾಲೆ ನಮ್ಮ ಅಡುಗೆಯನ್ನು ಸಾಕಷ್ಟು ಸ್ವಾದಿಷ್ಟವಾಗಿಸತ್ತದೆ. ಇದು ಎಲ್ಲರಿಗೂ ಗೊತ್ತು. ಆದರೆ, ಗರಂ ಮಸಾಲೆಯ ಔಷಧೀಯ ಗುಣಗಳ (Benefits of garam masala) ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಬೊಜ್ಜು ಕರಗಿಸುತ್ತದೆ. ಇಮ್ಯೂನಿಟ (Immunity booster) ಹೆಚ್ಚಿಸುತ್ತದೆ. ಸಾಕಷ್ಟು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಶೀತ, ತಲೆನೋವು, ಜ್ವರಗಳಿಂದಲೂ ನಮಗೆ ಇದು ರಕ್ಷಣೆ ನೀಡುತ್ತದೆ. ಇದರಲ್ಲಿ ಸಾಕಷ್ಟು ಮಿನರಲ್, ವಿಟಮಿನ್, ಅಂಟಿಆಕ್ಸಿಡೆಂಟ್ ಪೋಷಕಾಂಶಗಳಿರುತ್ತವೆ. ಇದೀಗ
ಗರಂ ಮಸಾಲೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ
ಆರೋಗ್ಯಕ್ಕೆ ಗರಂ ಮಸಾಲೆಯ ಲಾಭ :
1. ಜೀರ್ಣ ಕ್ರಿಯೆ:
ತಿಂದದ್ದು ಸರಿಯಾಗಿ ಜೀರ್ಣವಾಗುವ ನಿಟ್ಟಿನಲ್ಲಿ ಗರಂ ಮಸಾಲೆ ಕೆಲಸ ಮಾಡುತ್ತದೆ. ಗರಂ ಮಸಾಲೆಯಲ್ಲಿ ಫೈಬರ್ ಗುಣ ಸಾಕಷ್ಟು ಕಂಡು ಬರುತ್ತದೆ. ಹಾಗಾಗಿ ಇದು ಜೀರ್ಣಕ್ರಿಯೆಗೆ (Digestion) ನೆರವಾಗುತ್ತದೆ.
ಇದನ್ನೂ ಓದಿ : Benefits of Green Chili : ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ, ಕಣ್ಣಿನ ಕಾಳಜಿ ವಹಿಸುತ್ತದೆ ಹಸಿರು ಮೆಣಸಿನಕಾಯಿ!
2. ಬಾಯಿಯ ದುರ್ವಾಸನೆ
ಗರಂ ಮಸಾಲೆಯಲ್ಲಿರುವ ಸೋಂಪು, ಲವಂಗ, ಏಲಕ್ಕಿ ಇತ್ಯಾದಿ ಅಂಟಿ ಆಕ್ಸಿಡೆಂಟ್ ರೀತಿಯಲ್ಲಿ ಕೆಲಸಮಾಡುತ್ತದೆ. ಇವುಗಳ ಸೇವನೆಯಿಂದ ಬಾಯಿಯ ದುರ್ವಾಸನೆ ತೊಲಗುತ್ತದೆ.
3. ಶೀತ ಮತ್ತು ಕೆಮ್ಮು
ಹವಾಮಾನ ಬದಲಾಗುತ್ತಿದ್ದಂತೆಯೇ ಶೀತ (Cold), ತಲೆನೋವು, ಕೆಮ್ಮು ಶುರುವಾಗುತ್ತದೆ. ಇದು ಸಹಜ ಕೂಡಾ. ಗರಂ ಮಸಾಲೆ ಸೇವನೆಯಿಂದ ಶೀತ, ತಲೆನೋವು, ಕೆಮ್ಮು ದೂರವಾಗುತ್ತದೆ.
4. ಶಾರೀರಿಕ ನೋವು
ದೈಹಿಕ ನೋವಿನಿಂದ ಯಾತನೆ ಅನುಭವಿಸಿದ್ದರೆ, ಗರಂ ಮಸಾಲೆ ತಿನ್ನಬಹುದು. ಗರಂ ಮಸಾಲೆಯಲ್ಲಿ ಸಾಕಷ್ಟು ಆಂಟಿ ಇನ್ಫ್ಲ್ಮೇಟರಿ ಗುಣವಿದೆ. ಇದರಿಂದ ದೇಹದ ನೋವು ನಿವಾರಣೆಯಾಗುತ್ತದೆ.
ಇದನ್ನೂ ಓದಿ : ಅದ್ಭುತ ಸ್ಮರಣ ಶಕ್ತಿಗೆ ನಾಲ್ಕು ಆರ್ಯುವೇದಿಕ್ ಉಪಾಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ