ನವದೆಹಲಿ : Indian Navy Recruitment 2021: ಭಾರತೀಯ ನೌಕಾಪಡೆಯ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಇದೆ. ಇದಕ್ಕಾಗಿ ನೌಕಾಪಡೆಯು ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಕೋರಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್, joinindiannavy.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆ ಅಂದರೆ ಜೂನ್ 26, 2021.
ಇಲ್ಲಿ ಅರ್ಜಿ ಸಲ್ಲಿಸಬಹುದು :
ಇದಲ್ಲದೆ, ಅಭ್ಯರ್ಥಿಗಳು ಈ ಹುದ್ದೆಗಳಿಗೆ (Indian Navy Recruitment 2021) ನೇರವಾಗಿ ಅರ್ಜಿ ಸಲ್ಲಿಸಬಹುದು . https://www.joinindiannavy.gov.in ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, https://www.joinindiannavy.gov.in/en ಈ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ನೋಡಬಹುದು. (ಈ ನೇಮಕಾತಿ ಪ್ರಕ್ರಿಯೆಯಡಿ 50 ಎಸ್ಎಸ್ಸಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕೇರಳದ ಐಎನ್ಎ ಎಜಿಮಾಲಾದ ಭಾರತೀಯ ನೌಕಾ ಅಕಾಡೆಮಿಯಲ್ಲಿ 2022 ರ ಜನವರಿಯಿಂದ ಕೋರ್ಸ್ ಪ್ರಾರಂಭವಾಗಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಜನರಲ್ ಸರ್ವಿಸ್ (ಎಕ್ಸಿಕ್ಯುಟಿವ್) ಮತ್ತು ಹೈಡ್ರೋಗ್ರಫಿ ಎಂಬ ಎರಡು ವಿಭಿನ್ನ ಕೋರ್ಸ್ಗಳೊಂದಿಗೆ ತರಬೇತಿ ಪಡೆಯಬೇಕಾಗುತ್ತದೆ.
ಇದನ್ನೂ ಓದಿ : 150 ಬಿಜೆಪಿ ಕಾರ್ಯಕರ್ತರಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಾಗತಿಸಿದ ಟಿಎಂಸಿ ನಾಯಕರು
ಭಾರತೀಯ ನೌಕಾಪಡೆಯ (Indian Navy Recruitment 2021) ನೇಮಕಾತಿಗಾಗಿ ಪ್ರಮುಖ ದಿನಾಂಕಗಳು 2021
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 11 ಜೂನ್
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಜೂನ್
ಭಾರತೀಯ ನೌಕಾಪಡೆಯ ನೇಮಕಾತಿಗಾಗಿ ಖಾಲಿ ವಿವರಗಳು :
ಎಸ್ಎಸ್ಸಿ ಸಾಮಾನ್ಯ ಸೇವೆಗಳು: 47 ಹುದ್ದೆಗಳು
ಹೈಡ್ರೋ ಕೇಡರ್: 3 ಹುದ್ದೆಗಳು
ಭಾರತೀಯ ನೌಕಾಪಡೆಯ ನೇಮಕಾತಿಗೆ ಅರ್ಹತೆ :
ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಬಿಇ / ಬಿಟೆಕ್ ಹೊಂದಿರಬೇಕು.
ಇದನ್ನೂ ಓದಿ : ಸುಪ್ರೀಂಕೋರ್ಟ್ ಎಚ್ಚರಿಕೆ ನಂತರ 10, 12 ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಆಂಧ್ರಪ್ರದೇಶ
ಭಾರತೀಯ ನೌಕಾಪಡೆಯ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆ 2021:
ಐದನೇ ಸೆಮಿಸ್ಟರ್ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಎಸ್ಎಸ್ಸಿ ಸಂದರ್ಶನಗಳನ್ನು ಜುಲೈ 21 ರಿಂದ ಬೆಂಗಳೂರು (Bengaluru), ಭೋಪಾಲ್, ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾದಲ್ಲಿ ನಿಗದಿಪಡಿಸಲಾಗುವುದು. ಎಸ್ಎಸ್ಬಿ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು. ಮೆರಿಟ್ ಪಟ್ಟಿ ಮತ್ತು ಆಯಾ ಪ್ರವೇಶದಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ SSB ಶಿಫಾರಸು ಮಾಡಿದ ಮತ್ತು ವೈದ್ಯಕೀಯವಾಗಿ ಫಿಟ್ ಎಂದು ಘೋಷಿಸಿದ ಅಭ್ಯರ್ಥಿಗಳನ್ನು ತರಬೇತಿಗಾಗಿ ನೇಮಕ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.