ನವದೆಹಲಿ: ಕೋವಿಡ್ -19 ಎರಡನೇ ತರಂಗ (Covid-19 Second Wave) ದೇಶದ ಮೇಲೆ ಹಾನಿ ಉಂಟುಮಾಡಿದ್ದು, ಸಾವಿರಾರು ಜನರನ್ನು ಬಲಿ ಪಡೆದಿದೆ. ಅಷ್ಟೇ ಅಲ್ಲ, ಕರೋನಾದ ಡೆಲ್ಟಾ ರೂಪಾಂತರವು ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳ ಸಮಸ್ಯೆಯಾಗಿದೆ. ಇದರಿಂದ ಡೆಲ್ಟಾ ಪ್ಲಸ್ ವೇರಿಯಂಟ್ ಎಂದು ಹೆಸರಿಸಲಾದ ಮತ್ತೊಂದು ಹೊಸ ರೂಪಾಂತರವು ಹುಟ್ಟಿಕೊಂಡಿದೆ. ಈ ಹೊಸ ರೂಪಾಂತರದ ಪ್ರಕರಣಗಳು ಈಗಾಗಲೇ ಭಾರತದ ಹಲವು ರಾಜ್ಯಗಳಿಂದ ಬರಲು ಪ್ರಾರಂಭಿಸಿವೆ.
ಮಹಾರಾಷ್ಟ್ರದಲ್ಲಿ 21 ಪ್ರಕರಣಗಳು ಪತ್ತೆ:
ಕರೋನಾದಿಂದಾಗಿ ಹೆಚ್ಚು ಪೀಡಿತ ರಾಜ್ಯವಾದ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ (Delta Plus Variant) 21 ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 9 ಪ್ರಕರಣಗಳು ರತ್ನಗಿರಿ, 7 ಜಲ್ಗಾಂವ್, 2 ಮುಂಬೈ, ಸಿಂಧುದುರ್ಗ್, ಥಾಣೆ ಮತ್ತು ಪಾಲ್ಗಢ ಜಿಲ್ಲೆಗಳಿಂದ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಸೋಮವಾರ ಹೇಳಿದ್ದಾರೆ. ರಾಜ್ಯ ಸರ್ಕಾರವು ಈಗ ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ನಿರ್ಧರಿಸಿದೆ ಮತ್ತು ಪ್ರತಿ ಜಿಲ್ಲೆಯಿಂದ 100 ಮಾದರಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಮೇ 15 ರಿಂದ 7,500 ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ ಡೆಲ್ಟಾ ಪ್ಲಸ್‌ನ ಸುಮಾರು 21 ಪ್ರಕರಣಗಳು ವರದಿಯಾಗಿವೆ ಎಂದು ವಿವರಿಸಿದರು.
ಮತ್ತೊಂದೆಡೆ, ಡೆಲ್ಟಾ ಪ್ಲಸ್ ರೂಪಾಂತರವು ದಕ್ಷಿಣ ರಾಜ್ಯ ಕೇರಳದಲ್ಲೂ (Kerala) ಕಂಡು ಬಂದಿದೆ. ಪಾಲಕ್ಕಾಡ್ ಮತ್ತು ಪಥನಂತ್ತಟ್ಟ ಎಂಬ ಎರಡು ಜಿಲ್ಲೆಗಳಿಂದ ಸಂಗ್ರಹಿಸಲಾದ ಮಾದರಿಗಳಿಂದ ಡೆಲ್ಟಾ-ಪ್ಲಸ್ ರೂಪಾಂತರದ ಕನಿಷ್ಠ ಮೂರು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ ಕಡಪರಾ ಪಂಚಾಯತ್ ಮೂಲದ ನಾಲ್ಕು ವರ್ಷದ ಮಗುವಿಗೆ ವೈರಸ್‌ನ ಹೊಸ ಡೆಲ್ಟಾ-ಪ್ಲಸ್ ರೂಪಾಂತರ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ಪಥನಂತ್ತಟ್ಟಾ ಜಿಲ್ಲಾಧಿಕಾರಿ ಡಾ.ನರಸಿಂಘುಗರಿ ಟಿ.ಎಲ್.ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ - Health Insurance: ಆರೋಗ್ಯ ವಿಮಾ ಕಂಪನಿಯು ನಿಮ್ಮ ಕ್ಲೈಂ ತಿರಸ್ಕರಿಸಿದರೆ ಭಯಪಡಬೇಡಿ, ಇಲ್ಲಿ ದೂರು ನೀಡಿ
ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ:
ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಹರಡುವಿಕೆಯನ್ನು ತಡೆಗಟ್ಟಲು ಆಡಳಿತವು ಎರಡು ಜಿಲ್ಲೆಗಳ ಪೀಡಿತ ಪ್ರದೇಶಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ, ಹೊಸದಾಗಿ ಕಂಡುಹಿಡಿದ ಡೆಲ್ಟಾ ಪ್ಲಸ್ ರೂಪಾಂತರವನ್ನು ಇನ್ನೂ ಕಳವಳಕಾರಿ ಎಂದು ಪರಿಗಣಿಸಲಾಗಿಲ್ಲ ಎಂದು ನೀತಿ ಆಯೋಗ್ ಸದಸ್ಯ (ಆರೋಗ್ಯ) ಡಾ.ವಿ.ಕೆ ಪಾಲ್ ಹೇಳಿದ್ದಾರೆ.
ಭೋಪಾಲ್‌ನಲ್ಲಿ ಮೊದಲ ಪ್ರಕರಣ:
ಡೆಲ್ಟಾ ಪ್ಲಸ್ ರೂಪಾಂತರದ ಮೊದಲ ಪ್ರಕರಣ ಮಧ್ಯಪ್ರದೇಶದ (Madhya Pradesh) ಭೋಪಾಲ್ ನಿಂದ ವರದಿಯಾಗಿದೆ. ರಾಜಧಾನಿಯಲ್ಲಿ ಗುರುವಾರ, 65 ವರ್ಷದ ಮಹಿಳೆಗೆ ಕರೋನಾ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಧ್ಯಪ್ರದೇಶದಲ್ಲಿ, ಸಾಂಕ್ರಾಮಿಕ ರೋಗದ ಎರಡನೇ ತರಂಗದ ವೇಗವು ನಿಧಾನವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.
ಇದನ್ನೂ ಓದಿ - ಒಂದೇ ದಿನದಲ್ಲಿ 13 ಲಕ್ಷ ಕೊರೊನಾ ಲಸಿಕೆ ಹಾಕುವಲ್ಲಿ ಯಶಸ್ವಿಯಾದ ಆಂಧ್ರಪ್ರದೇಶ
ಅಂತಹ ಸಮಯದಲ್ಲಿ, ಹೊಸ ರೂಪಾಂತರದ ಪ್ರವೇಶದೊಂದಿಗೆ ಆಡಳಿತ ಕಟ್ಟೆಚ್ಚರ ವಹಿಸಿದೆ. ಅಧಿಕಾರಿಗಳ ಪ್ರಕಾರ, ಮೇ 23 ರಂದು ಮಹಿಳೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಎನ್‌ಸಿಡಿಸಿಯಿಂದ ಬುಧವಾರ ಬಂದ ವರದಿಯಲ್ಲಿ ಆಕೆಗೆ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದೇ ಸಮಯದಲ್ಲಿ, ಮಹಿಳೆ ಕೋವಿಡ್ -19 ಲಸಿಕೆಯ ಎರಡೂ ಪ್ರಮಾಣವನ್ನು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ವರದಿಗಳ ಪ್ರಕಾರ, ಭಾರತದಲ್ಲಿ ಮೊದಲು ಕಂಡುಬಂದ ಕೋವಿಡ್ -19 ರ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರ ಬಿ .1.617.2 ಡೆಲ್ಟಾ ಪ್ಲಸ್ ರೂಪಾಂತರವಾಗಿ ಪರಿವರ್ತನೆಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಡೆಲ್ಟಾ ರೂಪಾಂತರವನ್ನು ಮೊದಲು ಭಾರತದಲ್ಲಿ ಗುರುತಿಸಲಾಯಿತು ಮತ್ತು ಇದು ದೇಶದ ಎರಡನೇ ತರಂಗಕ್ಕೆ ಮತ್ತು ಯುಕೆ ಸೇರಿದಂತೆ ಇತರ ಸ್ಥಳಗಳಿಗೆ ಸೋಂಕಿನ ಹರಡುವಿಕೆಗೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.