ಸಲ್ಮಾನ್ ಖಾನ್ ವಿಡಿಯೋ ಬಳಸಿ ಮೋದಿಯನ್ನು ವ್ಯಂಗವಾಡಿದ ರಾಹುಲ್ ಗಾಂಧಿ

    

Last Updated : Apr 4, 2018, 07:21 PM IST
ಸಲ್ಮಾನ್ ಖಾನ್ ವಿಡಿಯೋ ಬಳಸಿ ಮೋದಿಯನ್ನು ವ್ಯಂಗವಾಡಿದ ರಾಹುಲ್ ಗಾಂಧಿ title=

ನವದೆಹಲಿ: ಪೆಟ್ರೋಲ್ ಡಿಸೇಲ್ ಬೆಲೆಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಸಲ್ಮಾನ್ ವಿಡಿಯೋ ಬಳಸಿ ರಾಹುಲ್ ಗಾಂಧಿ ಟ್ರೋಲ್ ಮಾಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಪ್ರತಿಕ್ರಯಿಸಿರುವ ರಾಹುಲ್ ಗಾಂಧಿ "ಬಡ ಮತ್ತು ಮಧ್ಯಮ ವರ್ಗದ ಜನರು ಇಂಧನಗಳ ಬೆಲೆ ಏರಿಕೆಗೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಈ ವಿಡಿಯೋ ದಲ್ಲಿ ನಮ್ಮ ಪ್ರಧಾನಿಗಳೂ ನಿಜಕ್ಕೂ ಬೇರೆ ದೇಶದ ಕುರಿತಾಗಿ ಮಾತನಾಡುತ್ತಿರಬಹುದು" ಎಂದು ವ್ಯಂಗವಾಡಿದ್ದಾರೆ.

ಎಡಿಟ್ ಮಾಡಿರುವ ಈ ವಿಡಿಯೋದಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ 'ಕಿಂಗ್ ಆಫ್ ಮಿಸ್ ಇನ್ಫಾರ್ಮೇಷನ್' ಎಂದು ಬರೆಯಲಾಗಿದೆ. 

Trending News