ಮೊಬೈಲ್ ನಲ್ಲಿ ಈ ಐದು ಆಪ್ ಗಳಿದ್ದರೆ ಸುಲಭವಾಗಲಿದೆ ನಿಮ್ಮ ಕೆಲಸ

ಈ ಆಪ್ ಗಳು  ನಿಮ್ಮ ಕೆಲಸವನ್ನು ಸರಳಗೊಳಿಸುತ್ತದೆ. ಆಧಾರ್ ಕಾರ್ಡ್‌ನಿಂದ ಹಿಡಿದು ಪಾಸ್‌ಪೋರ್ಟ್‌ವರೆಗಿನ ಅನೇಕ ಕಾರ್ಯಗಳು ಸುಲಭವಾಗಿ ಮಾಡಬಹುದು. 

ನವದೆಹಲಿ : ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಸಾಮಾಜಿಕ ಮಾಧ್ಯಮ, ಕಚೇರಿ ಕೆಲಸ, ಗೇಮಿಂಗ್‌ಗೆ ಸಂಬಂಧಿಸಿದ ಅನೇಕ ಅಪ್ಲಿಕೇಶನ್‌ಗಳನ್ನು ತಮ್ಮ ಮೊಬೈಲ್‌ನಲ್ಲಿ ಇರಿಸಿಕೊಳ್ಳುತ್ತಾರೆ ಮತ್ತು ಅವುಗಳನ್ನು ಸಹ ಬಳಸುತ್ತಾರೆ. ಆದರೆ ಇಂದು ನಾವು ಅಂತಹ 5 ಅಪ್ಲಿಕೇಶನ್‌ಗಳ ಬಗ್ಗೆ ಹೇಳಲಿದ್ದೇವೆ. ಪ್ರತಿಯೊಬ್ಬರ ಮೊಬೈಲ್ ನಲ್ಲೂ ಈ ಆಪ್ ಗಳು ಇರುವುದು ಬಹಳ ಮುಖ್ಯವಾಗಿದೆ.  ಈ ಐದು ಆ್ಯಪ್‌ಗಳನ್ನು ಭಾರತ ಸರ್ಕಾರವು ಪ್ರಾರಂಭಿಸಿದೆ. ಈ ಆಪ್ ಗಳು  ನಿಮ್ಮ ಕೆಲಸವನ್ನು ಸರಳಗೊಳಿಸುತ್ತದೆ. ಆಧಾರ್ ಕಾರ್ಡ್‌ನಿಂದ ಹಿಡಿದು ಪಾಸ್‌ಪೋರ್ಟ್‌ವರೆಗಿನ ಅನೇಕ ಕಾರ್ಯಗಳು ಸುಲಭವಾಗಿ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

mParivahan ಅಪ್ಲಿಕೇಶನ್ ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಾರಂಭಿಸಿದೆ. ಈ ಮೂಲಕ ನಿಮ್ಮ ಹತ್ತಿರದ ಆರ್‌ಟಿಒ ಕಚೇರಿ ಮತ್ತು ಹತ್ತಿರದ ಮಾಲಿನ್ಯ ಪರಿಶೀಲನಾ ಕೇಂದ್ರ ಎಲ್ಲಿದೆ ಎಂಬುದನ್ನು  ಸುಲಭವಾಗಿ ಕಂಡುಹಿಡಿಯಬಹುದು. ಈ ಅಪ್ಲಿಕೇಶನ್ ಮೂಲಕ Moke Driving License Test ಸಹ ನೀಡಬಹುದು. ಅದೇ ಸಮಯದಲ್ಲಿ, ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸುವಾಗಲೂ ಈ ಆಪ್ ಸಹಾಯಕ್ಕೆ ಬರುತ್ತದೆ. ಈ ಅಪ್ಲಿಕೇಶನ್ ನಲ್ಲಿ ಕಾರು, ಬೈಕು ನೋಂದಣಿಗೆ ಸಂಬಂಧಿಸಿದ ಎಲ್ಲಾ ವಿವರಗಳು ಸಹಾ ಸಿಗುತ್ತದೆ.   

2 /5

mPassport ಅಪ್ಲಿಕೇಶನ್ ಅನ್ನು ವಿದೇಶಾಂಗ ಸಚಿವಾಲಯ ಪ್ರಾರಂಭಿಸಿದೆ. ಇದರ ಸಹಾಯದಿಂದ, ಕುಳಿತಲ್ಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿಯ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಈ ಅಪ್ಲಿಕೇಶನ್‌ನಲ್ಲಿ, ಪಾಸ್‌ಪೋರ್ಟ್ ಸೇವೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇನ್ನು ಹತ್ತಿರದ ಪಾಸ್‌ಪೋರ್ಟ್ ಕೇಂದ್ರಕ್ಕೆ ಹೋಗಲು ಬಯಸಿದರೆ, ಅದರ ವಿಳಾಸವನ್ನೂ ತಿಳಿಸುತ್ತದೆ.

3 /5

BHIM UPI ಅಪ್ಲಿಕೇಶನ್ ಅನ್ನು ಯುಪಿಐ ಆಧರಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಯಾರಿಗೆ ಬೇಕಾದರೂ ಹಣವನ್ನು ಕಳುಹಿಸಬಹುದು. ಇದಲ್ಲದೆ, ಯಾವುದೇ ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ಈವರೆಗೆ ಭಾರತದಲ್ಲಿ ಕೋಟ್ಯಂತರ ಜನರು ಈ ಅಪ್ಲಿಕೇಶನ್‌ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. 

4 /5

mAadhaar ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಸಚಿವಾಲಯ ಸಿದ್ಧಪಡಿಸಿದೆ. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಇರಿಸಬಹುದು. ಇದನ್ನು ಆಧಾರ್ ಕಾರ್ಡ್ ಸ್ಟೋರ್ ಮಾಡುವ ಸಾಫ್ಟ್ ಕೋಪಿ ಆವೃತ್ತಿ ಎಂದು ಹೇಳಬಹುದು. ಇಲ್ಲಿ ಆಧಾರ್ ನ ವಿಳಾಸ, ಭಾಷೆ ಮುಂತಾದ ಕೆಲಸಗಳನ್ನು ಸಹ ಮಾಡಬಹುದು. 

5 /5

ಡಿಜಿಲಾಕರ್ (DigiLocker) ಅಪ್ಲಿಕೇಶನ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಪ್ರಮುಖ ದಾಖಲೆಗಳಾದ ಆಧಾರ್, ಡ್ರೈವಿಂಗ್ ಲೈಸೆನ್ಸ್, ಬೈಕ್ ಇನ್ಶುರೆನ್ಸ್, Rc ಇತ್ಯಾದಿಗಳನ್ನು ಕ್ಲೌಡ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದರಲ್ಲಿ, ನಿಮ್ಮ ಕಾನೂನು ದಾಖಲೆಗಳ ಸ್ಕ್ಯಾನ್ ಮಾಡಿದ ನಕಲನ್ನು 1 ಜಿಬಿ ವರೆಗೆ ಅಪ್‌ಲೋಡ್ ಮಾಡಬಹುದು. ಇದರ ನಂತರ ನೀವು ಆ ದಾಖಲೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾಗಿಲ್ಲ. ಯಾವುದೇ ಅಧಿಕಾರಿ ಅಥವಾ ಪೊಲೀಸರು ನಿಮ್ಮನ್ನು ಆಧಾರ್ ಕಾರ್ಡ್ ಕೇಳಿದರೆ ನೀವು ಅವರಿಗೆ ಈ ಸಾಫ್ಟ್ ಕಾಪಿ ತೋರಿಸಬಹುದು. ಇದು ಸಂಪೂರ್ಣವಾಗಿ ಮಾನ್ಯವಾಗಿರುತ್ತದೆ.