Top 4 Batsman: ಈ 4 ಬ್ಯಾಟ್ಸ್‌ಮನ್‌ಗಳು ಎಂದಿಗೂ ಶೂನ್ಯಕ್ಕೆ ಔಟಾಗಿಲ್ಲ, ಈ ಪಟ್ಟಿಯಲ್ಲಿರುವ ಭಾರತೀಯ ಆಟಗಾರ ಯಾರು ಗೊತ್ತೇ?

ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಕೂಡ ಶೂನ್ಯಕ್ಕೆ ಔಟಾಗಲಿಲ್ಲ. ಅಂತಹ 4 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿಯೋಣ...  

Written by - Yashaswini V | Last Updated : Jun 16, 2021, 01:05 PM IST
  • ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಕೂಡ ಶೂನ್ಯಕ್ಕೆ ಔಟಾಗಲಿಲ್ಲ
  • ಭಾರತದ ಬ್ಯಾಟ್ಸ್‌ಮನ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ
  • ಬ್ಯಾಟ್ಸ್‌ಮನ್ ಜಾಕ್ವೆಸ್ ರೊಡ್ಲೋಫ್ 7 ಅರ್ಧಶತಕಗಳು ಸೇರಿದಂತೆ 45 ಏಕದಿನ ಪಂದ್ಯಗಳಲ್ಲಿ 1174 ರನ್ ಗಳಿಸಿದ್ದಾರೆ
Top 4 Batsman: ಈ 4 ಬ್ಯಾಟ್ಸ್‌ಮನ್‌ಗಳು ಎಂದಿಗೂ ಶೂನ್ಯಕ್ಕೆ ಔಟಾಗಿಲ್ಲ, ಈ ಪಟ್ಟಿಯಲ್ಲಿರುವ ಭಾರತೀಯ ಆಟಗಾರ ಯಾರು ಗೊತ್ತೇ? title=
ಈ 4 ಬ್ಯಾಟ್ಸ್‌ಮನ್‌ಗಳು ಎಂದಿಗೂ ಡಕ್ ಔಟ್ ಆಗಿಲ್ಲ

ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಹಲವು ಬ್ಯಾಟ್ಸ್‌ಮನ್‌ಗಳು ತಮ್ಮ ವೃತ್ತಿಜೀವನದಲ್ಲಿ ಅತ್ಯಧಿಕ ರನ್ ಮತ್ತು ಶತಕಗಳನ್ನು ಗಳಿಸಿ ಖ್ಯಾತಿ ಪಡೆದಿದ್ದಾರೆ. ಆದರೆ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಶೂನ್ಯಕ್ಕೆ ಎಂದಿಗೂ ಔಟಾಗದ ಕೆಲವು ಅದೃಷ್ಟ ಬ್ಯಾಟ್ಸ್‌ಮನ್‌ಗಳು ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಅಂತಹ 4 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಜಾಕ್ವೆಸ್ ರೊಡಾಲ್ಫ್- ದಕ್ಷಿಣ ಆಫ್ರಿಕಾ (Jacques Rodalf-South Africa) :
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಜಾಕ್ವೆಸ್ ರೊಡ್ಲೋಫ್ 7 ಅರ್ಧಶತಕಗಳು ಸೇರಿದಂತೆ 45 ಏಕದಿನ ಪಂದ್ಯಗಳಲ್ಲಿ 1174 ರನ್ ಗಳಿಸಿದ್ದಾರೆ. ಅವರು 6 ಬಾರಿ ಅಜೇಯರಾಗಿದ್ದಾರೆ, ಏಕದಿನ ಪಂದ್ಯಗಳಲ್ಲಿ ಜಾಕ್ವೆಸ್ ಗಳಿಸಿದ ಗರಿಷ್ಠ ಸ್ಕೋರ್ 81 ರನ್ಗಳು ಮತ್ತು ಇವರು ಎಂದೂ ಕೂಡ ಶೂನ್ಯಕ್ಕೆ ಹೊರಬಂದಿಲ್ಲ.

ಇದನ್ನೂ ಓದಿ- Sri Lanka Cricket Tour: ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್

ಯಶ್ಪಾಲ್ ಶರ್ಮಾ-ಭಾರತ (Yashpal Sharma-India):
ಈ ಮಾಜಿ ಭಾರತದ ಬ್ಯಾಟ್ಸ್‌ಮನ್ (Indian Batsman) ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ, ಯಶ್ಪಾಲ್ ಶರ್ಮಾ (Yashpal Sharma) 42 ಏಕದಿನ ಪಂದ್ಯಗಳಲ್ಲಿ 883 ರನ್ ಗಳಿಸಿದ್ದಾರೆ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಅವರ ಗರಿಷ್ಠ ಸ್ಕೋರ್ 89 ರನ್. ಈ ಭಾರತೀಯ ಬ್ಯಾಟ್ಸ್‌ಮನ್ ಏಕದಿನ ಪಂದ್ಯಗಳಲ್ಲಿ ಎಂದಿಗೂ ಡಕ್ ಔಟ್ ಆಗಿಲ್ಲ.

ಪೀಟರ್ ಕ್ರಿಸ್ಟನ್-ದಕ್ಷಿಣ ಆಫ್ರಿಕಾ (Peter Kristen-South Africa):
ದಕ್ಷಿಣ ಆಫ್ರಿಕಾದ (South Africa) ಬ್ಯಾಟ್ಸ್‌ಮನ್ ಪೀಟರ್ ಕ್ರಿಸ್ಟನ್ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು, ಆದರೆ ಈ ಬ್ಯಾಟ್ಸ್‌ಮನ್ ಎಂದಿಗೂ ದಕ ಔಟ್ ಆಗಿಲ್ಲ. ಪೀಟರ್ ಮೂರು ವರ್ಷಗಳಲ್ಲಿ 40 ಏಕದಿನ ಪಂದ್ಯಗಳನ್ನು ಆಡಿದ್ದು 1293 ರನ್ ಗಳಿಸಿದ್ದಾರೆ. ಇದು 9 ಅರ್ಧಶತಕಗಳನ್ನು ಒಳಗೊಂಡಿದೆ. ಈ ಇನ್ನಿಂಗ್ಸ್ ಸಮಯದಲ್ಲಿ ಪೀಟರ್ ಸಹ 6 ಬಾರಿ ಅಜೇಯರಾಗಿದ್ದರು. ಏಕದಿನ ಪಂದ್ಯಗಳಲ್ಲಿ ಅವರ ಅತ್ಯಧಿಕ ಸ್ಕೋರ್ 97 ರನ್.

ಇದನ್ನೂ ಓದಿ- WTC Final 2021: WTC ಫೈನಲ್ ಗೆ ತಂಡ ಪ್ರಕಟಿಸಿದ BCCI, ಯಾವ ಯಾವ ಆಟಗಾರರಿಗೆ ಸಿಕ್ತು ಅವಕಾಶ?

ಕೆಪ್ಲರ್ ವೆಸೆಲ್ಸ್-ದಕ್ಷಿಣ ಆಫ್ರಿಕಾ (Kepler Wessels-South Africa):
ಈ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡಕ್ಕೂ ಆಡಿದ್ದಾರೆ, ಹೆಸರು ಕೆಪ್ಲರ್ ವೆಸೆಲ್ಸ್. ಅವರು ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ 109 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಈ ಸಮಯದಲ್ಲಿ ಅವರು 1 ಶತಕ ಮತ್ತು 26 ಅರ್ಧಶತಕಗಳ ಸಹಾಯದಿಂದ 3367 ರನ್ ಗಳಿಸಿದರು. ಏಕದಿನ ಪಂದ್ಯದಲ್ಲಿ ಅವರ ಗರಿಷ್ಠ ಸ್ಕೋರ್ 107 ರನ್. ವೆಸೆಲ್ಸ್ ಅವರ ವೃತ್ತಿಜೀವನದಲ್ಲಿ ಎಂದಿಗೂ ಶೂನ್ಯಕ್ಕೆ ಹೊರಬಂದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News