ಲಂಡನ್: China Warning To G-7 Leaders - ನೈಋತ್ಯ ಇಂಗ್ಲೆಂಡ್ನ ಕಾರ್ಬಿಸ್ ಕೊಲ್ಲಿಯಲ್ಲಿ (Carbis Bay) ಶುಕ್ರವಾರ ಪ್ರಾರಂಭವಾದ ಜಿ -7 ಸಭೆಯಿಂದ ಚೀನಾ ತೀವ್ರ ಸಿಡಿಮಿಡಿಗೊಂಡಿದೆ. ಈ ಗುಂಪನ್ನು ತನ್ನ ವಿರುದ್ಧದ ಬಣವಾದವೆಂದು ಭಾವಿಸಿರುವ ಚೀನಾ (China), ಕೆಲವೇ ದೇಶಗಳ "ಸಣ್ಣ ಗುಂಪುಗಳು" ವಿಶ್ವದ ಕಳೆಬರಹ ನಿರ್ಧರಿಸುವ ಯುಗ ಅಂತ್ಯವಾಗಿದೆ ಎಂದು ಹೇಳುವ ಮೂಲಕ ಬೆದರಿಕೆ ಹಾಕಿದೆ.
ಈ ಕುರಿತು ಲಂಡನ್ (London) ನಲ್ಲಿ ಮಾತನಾಡಿರುವ ಚೀನಾ ದೂತಾವಾಸದ ವಕ್ತಾರರು, 'ಕೆಲ ದೇಶಗಳ ಸಣ್ಣ ಗುಂಪುಗಳು ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಹಳ ಹಿಂದೆಯೇ ಮುಗಿದು ಹೋಗಿದೆ. ದೇಶವು ದೊಡ್ಡದಾಗಿರಲಿ, ಸಣ್ಣದಾಗಿರಲಿ, ಬಲಶಾಲಿಯಾಗಿರಲಿ, ದುರ್ಬಲವಾಗಿರಲಿ, ಬಡ ದೇಶವಾಗಿರಲಿ ಅಥವಾ ಶ್ರೀಮಂತ ರಾಷ್ಟ್ರವಾಗಿರಲಿ, ಎಲ್ಲರೂ ಸಮಾನರು ಮತ್ತು ವಿಶ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎಲ್ಲಾ ದೇಶಗಳೊಂದಿಗೆ ಸಮಾಲೋಚಿಸಿದ ನಂತರವೆ ನಿರ್ಧರಿಸಬೇಕು ಎಂದು ನಾವು ಮೊದಲಿನಿಂದಲೂ ನಂಬುತ್ತೇವೆ' ಎಂದಿದ್ದಾರೆ.
ಜಿ -7 ನಾಯಕರು (G-7 Leaders) ಚೀನಾದ ಜಾಗತಿಕ ಅಭಿಯಾನದೊಂದಿಗೆ ಸ್ಪರ್ಧಿಸಲು ಮೂಲಸೌಕರ್ಯ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ, ಆದರೆ ಚೀನಾ ವತಿಯಿಂದ ಆಗುತ್ತಿರುವ ಮಾನವ ಹಕ್ಕುಗಳನ್ನು ಉಲ್ಲಂಘನೆ ಹೇಗೆ ತಡೆಯುವುದು ಎಂಬುದರ ಮೇಲೆ ಇದುವರೆಗೆ ಯಾವುದೇ ಒಮ್ಮತ ಮೂಡಿಬಂದಿಲ್ಲ.
ಬಾಂಡೆಡ್ ಲೇಬರ್ (Bonded Labor) ಪದ್ಧತಿಯ ಹಿನ್ನೆಲೆ ಚೀನಾವನ್ನು ಬಹಿಷ್ಕರಿಸುವಂತೆ ಜಿ-7 ಶೃಂಗಸಭೆಯಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ಯುಎಸ್ ಅಧ್ಯಕ್ಷ ಜೋ ಬಿಡನ್ (Joe Biden) ಯೋಜನೆಯನ್ನು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ-ಬಾವಲಿಗಳಲ್ಲಿ ಹೊಸ ಕೊರೊನಾ ಪತ್ತೆ ಹಚ್ಚಿದ ಚೀನಾ ಸಂಶೋಧಕರು
ಇನ್ನೊಂದೆಡೆ ಶನಿವಾರ ನಡೆದ ಚೈನಾ ಕುರಿತಾದ ಚರ್ಚೆಯೊಂದರಲ್ಲಿ ಪಾಲ್ಗೊಂಡು ಮಾತನಾಡಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರಡೊ (Justin Trudeau), ಚೀನಾ ಕಡೆಯಿಂದ ಹೆಚ್ಚಾಗುತ್ತಿರುವ ಬೆದರಿಕೆಗಳನ್ನು ತಡೆಯಲು ಜಂಟಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಲ್ಲಾ ಮುಖಂಡರಿಗೆ ಮನವಿ ಮಾಡಿದ್ದಾರೆ. ಚೀನಾದ ಬಹು-ಟ್ರಿಲಿಯನ್ ಡಾಲರ್ ಬೆಲ್ಟ್ ಮತ್ತು ರಸ್ತೆ ಉಪಕ್ರಮದೊಂದಿಗೆ ಸ್ಪರ್ಧಿಸಬಲ್ಲ ಮೂಲಸೌಕರ್ಯ ಯೋಜನೆಯ ಭಾಗವಾಗುವ ಪ್ರಸ್ತಾವನೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೀಡಲು ಜಿ -7 ದೇಶಗಳು ಯೋಜಿಸುತ್ತಿವೆ ಎಂಬುದು ಇಲ್ಲಿ ಗಮನಾರ್ಹ.
ನೈಋತ್ಯ ಇಂಗ್ಲೆಂಡ್ ನ ಕಾರ್ಬಿಸ್ ನಲ್ಲಿ ಶುಕ್ರವಾರ ಆರಂಭಗೊಂಡಿರುವ ಈ ಶೃಂಗಸಭೆ ಇಂದು ಮುಕ್ತಾಯಗೊಳ್ಳಲಿದೆ. ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಹಾಗೂ ಅಮೇರಿಕಾ ರಾಷ್ಟ್ರಗಳು G-7 ಸಮೂಹದ ಸದಸ್ಯ ರಾಷ್ಟ್ರಗಳಾಗಿವೆ.
ಇದನ್ನೂ ಓದಿ-Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ US ಹಿಂದಿಕ್ಕಿ 5ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ
ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಶನಿವಾರ ವಿಡಿಯೋ ಕಾನ್ಫರನ್ಸ್ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಒಂದೇ ಪೃಥ್ವಿ, ಒಂದೇ ಆರೋಗ್ಯ' (One Earth, One Health) ಘೋಷಣೆ ನೀಡಿದ್ದರು, ಪ್ರಧಾನಿ ಅವರ ಈ ಘೋಷಣೆಗೆ ಜರ್ಮನಿಯ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಬೆಂಬಲ ನೀಡಿದ್ದರು. ಭವಿಷ್ಯದಲ್ಲಿ ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಸಮಾಜಗಳನ್ನು ವಿಶೇಷವಾಗಿ ಹೊಣೆಗಾರರನ್ನಾಗಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Narendra Modi), ಜಾಗತಿಕ ನೇತೃತ್ವ ಹಾಗೂ ಏಕಮತಕ್ಕೆ ಕರೆ ನೀಡಿದ್ದರು. COVID-19ಗೆ ಸಂಬಂಧಿಸಿದ ತಂತ್ರಜ್ಞಾನಗಳಿಗೆ ಪೇಟೆಂಟ್ ವಿನಾಯಿತಿ ನೀಡುವಂತೆ ಭಾರತ, ದಕ್ಷಿಣ ಆಫ್ರಿಕಾವತಿಯಿಂದ WHO ಪ್ರಸ್ತಾವನೆಗೆ ಜಿ -7 ರಾಷ್ಟ್ರಗಳು ಬೆಂಬಲ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ-ಭಾರತೀಯ ಮೂಲದ ಪತ್ರಕರ್ತೆಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.