Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 1000 ಇಳಿಕೆ!

 ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ

Last Updated : Jun 11, 2021, 10:26 AM IST
  • ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು
  • ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ
  • 22 ಕ್ಯಾರೆಟ್ 100 ಗ್ರಾಂ ಚಿನ್ನದಲ್ಲಿ 1000 ರೂ. ಇಳಿಕೆ ಕಂಡಿದೆ
Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 1000 ಇಳಿಕೆ! title=

ನವದೆಹಲಿ : ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. 22 ಕ್ಯಾರೆಟ್ 100 ಗ್ರಾಂ ಚಿನ್ನದಲ್ಲಿ 1000 ರೂ. ಇಳಿಕೆ ಕಂಡಿದೆ.

22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,800 ರೂ.ಗೆ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ(Gold Rate) 4,58,000 ರೂ. ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,970 ರೂ. ಇದೆ.

ಇದನ್ನೂ ಓದಿ : Home Loan Rates:ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ

ಬೆಳ್ಳಿ ಬೆಲೆ(Silver Rate) ಪ್ರತಿ ಕೆ.ಜಿ.ಗೆ 264 ಅಥವಾ 0.37 ರಷ್ಟು ಹೆಚ್ಚಳವಾಗಿ 72,263 ರೂ. ನಿನ್ನೆಯ ಬೆಲೆ 72,000 ರೂ.

ದೆಹಲಿ(Delhi)ಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ.  24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 52,300 ರೂ.ಗೆ ಇಳಿಕೆ ಕಂಡಿದೆ. 

ಇದನ್ನೂ ಓದಿ : Petrol Price Today : ಮತ್ತೆ ಏರಿಕೆಯಾದ ಪೆಟ್ರೋಲ್ ಬೆಲೆ, ತಿಳಿಯಿರಿ ಇಂದಿನ ದರ

ಮುಂಬೈನಲ್ಲಿ ಇಂದು ಚಿನ್ನದ ದರ ಏರಿಕೆಯಾಗಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate)ಯಲ್ಲಿ 2000 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 47,880 ರೂ. ತಲುಪಿದೆ.

ಚೆನ್ನೈ(Chennai) 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 46,150 ರೂ., 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,350  ರೂ.

ಇದನ್ನೂ ಓದಿ : ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ

ಕೋಲ್ಕತಾ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ. 48,200 ರೂ. 24 ಕ್ಯಾರೆಟ್(24 Carat Gold Rate) 100 ಗ್ರಾಂ ಚಿನ್ನದ ಬೆಲೆ 50,900 ರೂ. 

ಇಲ್ಲಿ ಉಲ್ಲೇಖಿಸಲಾದ ಚಿನ್ನದ ಬೆಲೆಗಳು ಬೆಳಿಗ್ಗೆ 8 ಗಂಟೆಗೆ ಬರಲಿವೆ ಮತ್ತು ಪ್ರತಿದಿನವೂ ಏರಿಳಿತವನ್ನು ಮುಂದುವರಿಸುತ್ತವೆ. ಚಿನ್ನದ ದರ ಏರಿಳಿತಗೊಳ್ಳಲು ಹಲವು ಕಾರಣಗಳಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ, ಅಂತರರಾಷ್ಟ್ರೀಯ ಮಾರುಕಟ್ಟೆ ಕರೆನ್ಸಿ ಬೆಲೆಗಳಲ್ಲಿನ ಬದಲಾವಣೆ, ಹಣದುಬ್ಬರ, ಕೇಂದ್ರ ಬ್ಯಾಂಕುಗಳಲ್ಲಿನ ಚಿನ್ನದ ಮೀಸಲು, ಅವುಗಳ ಬಡ್ಡಿದರಗಳು, ಕರೋನವೈರಸ್ ಏಕಾಏಕಿ, ಆಭರಣ ಮಾರುಕಟ್ಟೆ, ಭೌಗೋಳಿಕ ಉದ್ವಿಗ್ನತೆ, ವ್ಯಾಪಾರ ಯುದ್ಧಗಳು ಮತ್ತು ಇತರ ಹಲವು ಅಂಶಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News