Aloe Vera Juice : ರೋಗ ನಿರೋಧಕ ಶಕ್ತಿಗೆ 'ಅಲೋವೆರಾ ಜ್ಯೂಸ್' : ಇಲ್ಲಿದೆ ಪ್ರಯೋಜನಗಳು!

ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಅಲ್ಲದೆ ಇದರ ರಸವನ್ನು ಸೇವಿಸುವುದರಿಂದ ಹೊಟ್ಟೆ, ಚರ್ಮದ ಸಮಸ್ಯೆ ಇತ್ಯಾದಿಗಳು ನಿವಾರಣೆ

Last Updated : Jun 4, 2021, 03:39 PM IST
  • ಆಯುರ್ವೇದದಲ್ಲಿ ಅಲೋವೆರಾ ಬಹಳ ಮುಖ್ಯವಾಗಿದೆ
  • ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟುಗಳು
  • ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿ
Aloe Vera Juice : ರೋಗ ನಿರೋಧಕ ಶಕ್ತಿಗೆ 'ಅಲೋವೆರಾ ಜ್ಯೂಸ್' : ಇಲ್ಲಿದೆ ಪ್ರಯೋಜನಗಳು! title=

ಆಯುರ್ವೇದದಲ್ಲಿ ಅಲೋವೆರಾ ಬಹಳ ಮುಖ್ಯವಾಗಿದೆ. ಇದು ಸೌಂದರ್ಯದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಅಲ್ಲದೆ ಇದರ ರಸವನ್ನು ಸೇವಿಸುವುದರಿಂದ ಹೊಟ್ಟೆ, ಚರ್ಮದ ಸಮಸ್ಯೆ ಇತ್ಯಾದಿಗಳು ನಿವಾರಣೆಯಾಗುತ್ತದೆ. ಅದರ ಪ್ರಯೋಜನಗಳ ಬಗ್ಗೆ ನೋಡೋಣ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :

ಅಲೋವೆರಾ ಜ್ಯೂಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ(Immunity Boost) ಹೆಚ್ಚುತ್ತದೆ. ಇದು ಆಂಟಿ ಆಕ್ಸಿಡೆಂಟ್ ಆಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕೊರೊನಾ ಅವಧಿಯಲ್ಲಿ ಇಮ್ಯೂನಿಟಿ ಬಲಪಡಿಸಲು ಅಲೋವೆರಾ ರಸವು ಅತ್ಯಂತ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Health Tips: ಮಧುಮೇಹ ರೋಗಿಗಳು ಈ ಆಹಾರಗಳನ್ನು ತಪ್ಪದೇ ತಿನ್ನಬೇಕು, ತಜ್ಞರು ಏನ್ ಹೇಳ್ತಾರೆ?

ಮಲಬದ್ಧತೆಯನ್ನು ತೊಡೆದುಹಾಕುತ್ತದೆ :

ಅಲೋವೆರಾ ರಸ(Aloe Vera Juice)ವು ಜೀರ್ಣಕ್ರಿಯೆಯನ್ನು ಸುಧಾರಿಸಲು ಅತ್ಯಂತ ಸಹಾಯಕವಾಗಿದೆ. ಇದರಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುವ ಅನೇಕ ಕಿಣ್ವಗಳು ಮತ್ತು ನಾರುಗಳಿವೆ. ಮಲಬದ್ಧತೆಗೆ ಚಿಕಿತ್ಸೆ ನೀಡಲು ಅಲೋವೆರಾ ರಸವನ್ನು ಬಳಸಬಹುದು.

ಇದನ್ನೂ ಓದಿ : Boiling Food Health Benefits: ಈ ತರಕಾರಿಗಳನ್ನು ಬೇಯಿಸಿ ಸೇವಿಸುವುದರಿಂದ ಸಿಗಲಿದೆ ಡಬಲ್ ಲಾಭ

ತೂಕ ಇಳಿಸಿಕೊಳ್ಳಲು ಸಹಾಯ :

ಅಲೋವೆರಾ ಜ್ಯೂಸ್ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಏಕೆಂದರೆ ಅಲೋವೆರಾ(Aloe Vera)ದಲ್ಲಿ ವಿಟಮಿನ್ ಬಿ ಸಮೃದ್ಧವಾಗಿದ್ದು, ಇದು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಅಲೋವೆರಾ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯಿರಿ.

ಇದನ್ನೂ ಓದಿ : Boost Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆಯಲ್ಲಿ ಪಾಲಿಸಿ ಈ ಸರಳ ನಿಯಮಗಳು!

ಸಂಧಿವಾತ ನಿವಾರಣೆಗೆ ಪ್ರಯೋಜನಕಾರಿ :

ಸಂಧಿವಾತದ ನೋವ(Joint Pain)ನ್ನು ನಿವಾರಿಸುವಲ್ಲಿ ಅಲೋವೆರಾ ರಸವೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದೇಹದಲ್ಲಿ ನೋವಿನೊಂದಿಗೆ ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ.

ಇದನ್ನೂ ಓದಿ : World Bicycle Day 2021 : ಕೊರೋನಾ ನಡುವೆ ಸೈಕ್ಲಿಂಗ್! ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News