Heavy Rainfall : ರಾಷ್ಟ್ರರಾಜಧಾನಿಗೆ ತಟ್ಟಿದ 'ತೌಕ್ತೆ ಸೈಕ್ಲೋನ್' ಬಿಸಿ : ದೆಹಲಿಯಲ್ಲಿ ಭಾರೀ ಮಳೆ..!

ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ದೆಹಲಿಯ ದೌಲ ಕೌನ್ ಪ್ರದೇಶದಲ್ಲಿನ ದೃಶ್ಯವನ್ನು ಇಲ್ಲಿ ನಾವು ನೋಡಬಹುದು

Last Updated : May 20, 2021, 11:18 AM IST
  • ತೌಕ್ತೆ ಚಂಡಮಾರುತ ಪರಿಣಾಮ ರಾಷ್ಟ್ರರಾಜಧಾನಿಯಲ್ಲಿ ಭಾರೀ ಮಳೆ
  • ಇಂದು ಬೆಳಗ್ಗೆಯಿಂದಲೇ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆ
  • ನಗರದ ಹಲವು ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
Heavy Rainfall  : ರಾಷ್ಟ್ರರಾಜಧಾನಿಗೆ ತಟ್ಟಿದ 'ತೌಕ್ತೆ ಸೈಕ್ಲೋನ್' ಬಿಸಿ : ದೆಹಲಿಯಲ್ಲಿ ಭಾರೀ ಮಳೆ..! title=

ನವದೆಹಲಿ : ತೌಕ್ತೆ ಚಂಡಮಾರುತ(Tauktae Cyclone) ಪರಿಣಾಮ ರಾಷ್ಟ್ರರಾಜಧಾನಿಯಲ್ಲಿ ಇಂದು ಬೆಳಗ್ಗೆಯಿಂದಲೇ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಅಲ್ಲದೆ, ಕೆಲವು ಪ್ರದೇಶಗಳು ಜಲಾವೃತವಾಗಿವೆ.

ಇದನ್ನೂ ಓದಿ : SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್

ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ದೆಹಲಿ(Delhi)ಯ ದೌಲ ಕೌನ್ ಪ್ರದೇಶದಲ್ಲಿನ ದೃಶ್ಯವನ್ನು ಇಲ್ಲಿ ನಾವು ನೋಡಬಹುದು. ನಿನ್ನೆ ದೆಹಲಿಯಲ್ಲಿ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು. ಈ ತಿಂಗಳಿನ ತಾಪಮಾನದಲ್ಲಿ ಸಾಮಾನ್ಯಕ್ಕಿಂತ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ಎಂದು ಹೇಳಲಾಗುತ್ತಿದ್ದು, 1951ರ ನಂತರ ಅತಿ ಕಡಿಮೆ ತಾಪಮಾನವಾಗಿದೆ.

ಇದನ್ನೂ ಓದಿ : JP Nadda : ಕೊರೋನಾ ಲಸಿಕೆ ಬಗ್ಗೆ ದೇಶದ ಜನತೆಗೆ 'ಸಿಹಿ ಸುದ್ದಿ' ನೀಡಿದ ಜೆ.ಪಿ. ನಡ್ಡಾ!

ನಿನ್ನೆ  ರಾತ್ರಿ 8.30ಕ್ಕೆ ನೋಡಿದಾಗ 24 ಗಂಟೆಯಲ್ಲಿ ದೆಹಲಿಯಲ್ಲಿ 60 ಮಿಲಿ ಮೀಟರ್ ಮಳೆ(Heavy Rainfall)ಯಾಗಿದೆ. ಇದು ಕಳೆದ 35 ವರ್ಷಗಳಲ್ಲಿಯೇ ಅಧಿಕವಾಗಿದೆ, ತೌಕ್ತೆ ಚಂಡಮಾರುತದ ಪರಿಣಾಮವಿದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : Doorstep Banking: Cash ಬೇಕೇ! ಈ ಕೆಲಸ ಮಾಡಿದರೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ATM

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News