ಪಾನಿಪೂರಿಗೆ ಬೇರೆ ಬೇರೆ ಹೆಸರಿದೆ. ಕೆಲವೆಡೆ ಗೋಲ್ ಗಪ್ಪಾ ಅಂತ ಕರೆದರೆ, ಇನ್ನು ಕೆಲವಡೆ ಪತಾಶೆ, ಗುಪ್ ಚುಪ್, ಫುಲ್ಕಿ, ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ.
ನವದೆಹಲಿ : ಮಕ್ಕಳಿಂದ ಮುದುಕರವರೆಗೆ ಪಾನಿಪುರಿ ಇಷ್ಟಪಡದವರೇ ಇಲ್ಲ. ಕೆಲವರಿಗೆ ಹುಳಿ, ಖಾರ ಮಸಾಲೆ ನೀರಿನ ಪಾನಿಪುರಿ ಇಷ್ಟವಾದರೆ ಇನ್ನು ಕೆಲವರಿಗೆ ಸಿಹಿ ನೀರಿನ ಪಾನಿಪೂರಿ ಇಷ್ಟವಾಗುತ್ತದೆ. ಪಾನಿಪೂರಿಗೆ ಬೇರೆ ಬೇರೆ ಹೆಸರಿದೆ. ಕೆಲವೆಡೆ ಗೋಲ್ ಗಪ್ಪಾ ಅಂತ ಕರೆದರೆ, ಇನ್ನು ಕೆಲವಡೆ ಪತಾಶೆ, ಗುಪ್ ಚುಪ್, ಫುಲ್ಕಿ, ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ. ಸ್ಟ್ರೀಟ್ ಫುಡ್ ಅಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುವವರಿಗೇನೂ ಕೊರತೆಯಿಲ್ಲ. ಆದರೆ, ಈ ಪಾನಿಪೂರಿ ಅಥವಾ ಗೋಲ್ ಗಪ್ಪಾವನ್ನು ಮೊದಲು ಕಂಡು ಹಿಡಿದದ್ದು ಯಾರು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದ್ರೌಪದಿ (Draupadi) ಮೊದಲು ತನ್ನ ಗಂಡಂದಿರೊಂದಿಗೆ ಅತ್ತೆಯ ಮನೆಗೆ ಬಂದಾಗ, ಕುಂತಿ ಪಾಂಡವರಿಗಾಗಿ ಅಡುಗೆ ಮಾಡುವಂತೆ ದ್ರೌಪದಿಯಲ್ಲಿ ಕೇಳುತ್ತಾಳಂತೆ. ಆಗ ದ್ರೌಪದಿ ತನ್ನ ಪ್ರತಿಭೆಯನ್ನು ಉಪಯೋಗಿಸಿ, ಪಾನಿಪೂರಿ ಅಥವಾ ಗೋಲ್ ಗಪ್ಪಾವನ್ನು ಸಿದ್ದಪಡಿಸುತ್ತಾಳಂತೆ. ಇದನ್ನು ತಿಂದು ಪಾಂಡವರು ಕೂಡಾ ಬಹಳ ಸಂತೋಷಗೊಂಡಿದ್ದರಂತೆ. ಇದಾದ ನಂತರ ಕುಂತಿ ದ್ರೌಪದಿಗೆ ಅಮರತ್ವದ ವರವನ್ನು ನೀಡುತ್ತಾಳಂತೆ. (Mahabharata Facts)
ಗ್ರೀಕ್ ಇತಿಹಾಸಕಾರರಾದ Megasthenes ಮತ್ತು ಚೀನಾದ ಬೌದ್ಧ ಯಾತ್ರಿ Faxian ಮತ್ತು Xuanzang ಅವರ ಪುಸ್ತಕಗಳಲ್ಲಿ, ಪಾನಿಪೂರಿಯನ್ನು ಮೊದಲು ಗಂಗಾ ತೀರದ ಮಗಧ ಸಾಮ್ರಾಜ್ಯದಲ್ಲಿ ತಯಾರಿಸಲಾಗಿತ್ತು.
ಪಾನಿ ಪುರಿ ಮೊದಲಿಗೆ ಮಗಧದಿಂದ ಪ್ರಾರಂಭವಾಯಿತು ಎಂದು ಕೂಡಾ ಹೇಳಲಾಗುತ್ತದೆ. ಅಂದಿನ ಮಗಧವನ್ನು ಇಂದು ದಕ್ಷಿಣ ಬಿಹಾರ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಅದರ ಹೆಸರು ಏನೆಂದು ಯಾರಿಗೂ ತಿಳಿದಿಲ್ಲ. ಆದರೂ, ಅದರ ಪ್ರಾಚೀನ ಹೆಸರು 'ಫುಲ್ಕಿ' ಎಂದು ಉಲ್ಲೇಖಿಸಲಾಗಿದೆ.
ಹೆಲ್ತ್ ಮೇನಿಯಾದ ಚೀಫ್ ಡಯಟೀಶಿಯನ್ ಮೇಘ ಮುಖಿಜಾ ಪ್ರಕಾರ, ಗೋಲ್ಗಪ್ಪ ಮತ್ತು ಅದರ ನೀರನ್ನು ಮನೆಯಲ್ಲಿಯೇ ತಯಾರಿಸಿ ತಿಂದರೆ, ದೇಹ ತೂಕ ಕಡಿಮೆ (Weight Loss) ಮಾಡಬಹುದಂತೆ. ಒಂದು ಪಾನಿಪೂರಿಯಲ್ಲಿ, ಕೇವಲ 36 ಕ್ಯಾಲೊರಿಗಳಿವೆ. 6 ಗೊಲ್ಗಪ್ಪಗಳ 1 ತಟ್ಟೆಯಲ್ಲಿ 216 ಕ್ಯಾಲೊರಿಗಳಿರುತ್ತವೆ. ಪಾನಿಪೂರಿಯ ಮಸಾಲೆಯುಕ್ತ ನೀರು ಕುಡಿದ ನಂತರ, ಬಹಳ ಸಮಯದವರೆಗೆ ಹಸಿವು ಇರುವುದಿಲ್ಲ. ಆದರೆ ನೆನಪಿಡಿ, ಪೂರಿ ಮತ್ತು ಪಾನಿ ಎರಡನ್ನೂ ಮನೆಯಲ್ಲಿಯೇ ತಯಾರಿಸಬೇಕಾಗುತ್ತದೆ. (Golgappa Dieting For Weight Loss).