ಅಕ್ಷಯ ತೃತೀಯ ದಿನಕ್ಕೆ ಬಹಳ ಮಹತ್ವವಿದೆ. ಈ ದಿನ ತಪ್ಪಿಯೂ ಕೆಲ ಕೆಲಸಗಳನ್ನು ಮಾಡಲು ಹೋಗಬೇಡಿ. ಇಲ್ಲವಾದರೆ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ. ಲಕ್ಷ್ಮೀ ಮುನಿಯುವುದು ಅಂದರೆ, ಹಣದ ಅಭಾವ ಎದುರಿಸುವುದು ಎಂದರ್ಥ..
ನವದೆಹಲಿ : ವೈಶಾಖ ಮಾಸದ ಶುಕ್ಷ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇ 14ರಂದು ಅಕ್ಷಯ ತೃತೀಯದ ಹಬ್ಬ ಬಂದಿದೆ. ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯವನ್ನು ವರ್ಷದ ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಯಾವುದೇ ಶುಭ ಕಾರ್ಯ ಮಾಡಲು ಪಂಚಾಂಗ ನೋಡುವ ಅಗತ್ಯವಿರುವುದಿಲ್ಲ. ಈ ದಿನ ಮಹಾ ಲಕ್ಷ್ಮೀಗೆ ಪೂಜೆ ಆರತಿ ಸಲ್ಲಿಸಲಾಗುತ್ತದೆ. ಈ ಮೂಲಕ ವರ್ಷ ಪೂರ್ತಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಅಕ್ಷಯ ತೃತೀಯದ ದಿನ ಕೆಲವೊಂದು ಕೆಲಸಗಳನ್ನು ಮಾಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾಗಿ ಅಕ್ಷಯ ತೃತೀಯದ ದಿನ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ನಾವು ಹೇಳುತ್ತೇವೆ..
ಮನೆ ಶುಚಿಯಾಗಿರಬೇಕು. ಲಕ್ಷ್ಮೀ ದೇವಿ ಸ್ವಚ್ಛತೆಯನ್ನು ಬಹಳವಾಗಿ ಇಷ್ಟಪಡುತ್ತಾಳೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮೀ ವಾಸವಿರುವುದಿಲ್ಲ. ಹಾಗಾಗಿ ಈ ದಿನ ಪೂಜೆಗೆ ಮಹತ್ವ ನೀಡುವಂತೆ ಮನೆಯ ಸ್ವಚ್ಛತೆಯ ಬಗ್ಗೆಯೂ ಗಮನವಿರಲಿ. ಪೂಜಾ ಸ್ಥಳ ಶುಚಿಯಾಗಿರುವುದು ಬಹಳ ಮುಖ್ಯ.
ಈ ದಿನ ಮನೆಯಲ್ಲಿ ಎಲ್ಲರೂ ಸಾಧ್ಯವಾದಷ್ಟು ಪ್ರೀತಿ ಪ್ರೇಮದಿಂದ ಇರಿ. ಕಿರುಚಾಡುವುದು ಅರುಚಾಡುವುದು ಜಗಳವಾಡುವುದು ಇಂತಹ ಕೆಲಸಗಳಿಗೆ ಆಸ್ಪದ ನೀಡಬೇಡಿ. ಮನೆಯಲ್ಲಿ ಕ್ಲೇಷ ಇದ್ದರೆ ಅಲ್ಲಿಯೂ ಲಕ್ಷ್ಮೀ ನೆಲೆಸುವುದಿಲ್ಲ.
ಭಗವಾನ್ ವಿಷ್ಣುವಿಗೆ ತುಳಸಿ ಎಂದರೆ ಅತ್ಯಂತ ಪ್ರಿಯೆ. ಹಲವೆಡೆ ಅಕ್ಷಯ ತೃತೀಯದ ದಿನ ತುಳಸೀಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಅಕ್ಷಯ ತೃತೀಯದ ದಿನ ಸ್ನಾನ ಮಾಡದೆ ತುಳಸಿಯನ್ನು ಮುಟ್ಟಬೇಡಿ. ಅಕ್ಷಯ ತೃತೀಯದ ದಿನ ತುಳಸಿಯ ಎಲೆಯನ್ನು ಕೂಡಾ ಮುರಿಯಬಾರದು.
ಅಕ್ಷಯ ತೃತೀಯ ಬಹಳ ಶುಭ ದಿನ. ಈ ದಿನ ನೀವು ಹೊಸ ಮನೆಯನ್ನು ಖರೀದಿಸಬಹುದು. ಆದರೆ ನೆನಪಿಡಿ, ಈ ದಿನದಂದು ಹೊಸ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಡಿ. ಅಂದರೆ ಈ ದಿನ ಭೂಮಿ ಅಗೆಯುವ ಕೆಲಸ ಮಾಡಬೇಡಿ
ಅಕ್ಷಯ ತೃತೀಯದ ದಿನ ಮಾಂಸಾಹಾರ ಮದ್ಯಪಾನ ನಿಷೇಧ. ಅಲ್ಲದೆ ಈ ದಿನ ಆಹಾರದಲ್ಲಿ ನೀರುಳ್ಳಿ, ಬೆಳ್ಳುಳ್ಳಿಯ ಸೇವನೆ ಕೂಡಾ ಬೇಡ.